ಸುಳ್ಯದಲ್ಲಿ ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ

Advt_Headding_Middle
Advt_Headding_Middle

 

ಸುಳ್ಯ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 12 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ವಿಧಾನ ಸಭೆ ಸಮಿತಿ ವತಿಯಿಂದ ಪಕ್ಷದ ಕಛೇರಿಯ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭೆ ಸಮಿತಿ ಅಧ್ಯಕ್ಷರಾದ ಕಲಾಂ ಸುಳ್ಯ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಇತ್ತೀಚೆಗೆ ಭಾರತದ ಗಡಿಯಲ್ಲಿ ನಡೆಸಿದ ಚೀನಾದ ಕಿರಾತಕ ಘಟನೆಯನ್ನು ಖಂಡಿಸಿ ಹುತಾತ್ಮರಾದ ನಮ್ಮ ದೇಶದ ವೀರ ಯೋಧರಿಗೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾಂ ಸುಳ್ಯ ಹಾಗೂ ಕಾರ್ಯದರ್ಶಿ ಮುಸ್ತಫಾ ಎಂ. ಕೆ ಅವರು ಸಂದೇಶ ಭಾಷಣ ಮಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಝನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ, ಪಕ್ಷದ ನಗರಾಧ್ಯಕ್ಷರಾದ ಇಕ್ಬಾಲ್ , SDAU ಸುಳ್ಯ ತಾಲೂಕು ಅಧ್ಯಕ್ಷರಾದ ಶಾಫಿ ಎಂ. ಆರ್ SDTU ತಾಲೂಕು ಕಾರ್ಯದರ್ಶಿ ಕಬೀರ್ ಮಡಿಕೇರಿ ಪಕ್ಷದ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ನಗರ ಕಾರ್ಯದರ್ಶಿ ಮುಸ್ತಫ ಚೆಂಗಳ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.