ಪೈಲಾರು ಫ್ರೆಂಡ್ಸ್ ಕ್ಲಬ್ ವತಿಯಿಂದ 3 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮ

Advt_Headding_Middle
Advt_Headding_Middle

ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ಆಶ್ರಯದಲ್ಲಿ ಶೇಣಿ M.S.K ಫ್ರೆಂಡ್ಸ್, ಯುನೈಟೆಡ್ ಶೇಣಿ ಇದರ ಸಹಯೋಗದೊಂದಿಗೆ 3 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮವನ್ನು ಅಮರಪಡ್ನೂರಿನ ಶೇಣಿಯ ಕುಳ್ಳಾಜೆ ಪರಿಸರದಲ್ಲಿ ಜೂ.21 ರಂದು ನಡೆಸಲಾಯಿತು.

ಪತ್ರಕರ್ತ ವಿಶ್ವನಾಥ ಮೋಟುಕಾನ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ಮನೋಜ್ಞ ಕೋಡ್ತುಗಳಿ, ಜತೆ ಕಾರ್ಯದರ್ಶಿ ಮನೋಜ್ ದರ್ಖಾಸು, ನಿರ್ದೇಶಕರಾದ ನವೀನ ದರ್ಖಾಸು, ರತ್ನಾಕರ ಪೈಲಾರು, ಶ್ರವಣ್ ಕೋಡ್ತುಗುಳಿ,ನಳಿನ್ ಕುಮಾರ್ ಪೈಲಾರು,ಗೌರವ ಸಲಹೆಗಾರರಾದ ಆನಂದ ಕಂಜರ್ಪಣೆ,ತೇಜಸ್ವಿ ಕಡಪಳ ಮತ್ತು M.S.K ಫ್ರೆಂಡ್ಸ್ ನ ಸದಸ್ಯರಾದ ವಿಜಯ್,ಜಗದೀಶ್, ಕೃತಿಕ್,ನಿತಿನ್, ಸುಬ್ರಹ್ಮಣ್ಯ, ಸುರೇಶ,ಸುಬ್ರಾಯ,ರಾಮಚಂದ್ರ ಹಾಗೂ ಬಾಲಕೃಷ್ಣ ಕುಳ್ಳಾಜೆ ಮತ್ತು ರಂಜಿತ್, ಮಹೇಶ್,ಸೃಜನ್ ಹಾಗೂ ಪ್ರಶಾಂತ್ ಶೇಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಾಳಿಂಬೆ,ಪುನರ್ಪುಳಿ,ಕೋಳ್ಜುಟ್ಟು,ಸುರಹೊನ್ನೆ,ಮಹಾಗನಿ,ನಿಂಬೆ,ಕಹಿ ಬೇವು,ಮಾವು,ನೆಲ್ಲಿ ಮುಂತಾದ 500 ಹಣ್ಣಿನ ಮತ್ತು ಬಹೂಪಯೋಗಿ ಗಿಡಗಳನ್ನು ನೆಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.