ಕಾಂಕ್ರೀಟಿಕರಣಗೊಂಡ ರಸ್ತೆಯಲ್ಲಿ ಪೋಲೀಸ್ ಅಧಿಕಾರಿ ಬೈಕ್ ಚಲಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Advt_Headding_Middle
Advt_Headding_Middle

 

ಆಲೆಟ್ಟಿ ರಸ್ತೆ ಗುರುಂಪು ವಿನಿಂದ ನಾಗಪಟ್ಟಣ ಸೇತುವೆ ತನಕ ಕಾಂಕ್ರೀಟಿಕರಣಗೊಂಡು ವಾಹನ ಸಂಚರಿಸಿದಂತೆ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ. ದಿನ ನಿತ್ಯ ಪೇಟೆಗೆ ಬರುವ ಈ ಭಾಗದ ಪ್ರಯಾಣಿಕರು ಕಳೆದ 25 ದಿನಗಳಿಂದ ಸುತ್ತು ಬಳಸಿ ಅಥವಾ ಒಂದು ಬದಿಯಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಬರುತ್ತಿದ್ದಾರೆ.

ಗುತ್ತಿಗೆದಾರರು ಜು.01 ರಂದು ಸಂಚಾರಕ್ಕೆ ಮುಕ್ತ ಗೊಳಿಸುವ ಬಗ್ಗೆ ಹೇಳಿಕೆ ನೀಡಿರುತ್ತಾರೆ. ಈ ಮಧ್ಯೆ ಜೂ.24 ರಂದು ಬೆಳಿಗ್ಗೆ ಕರ್ತವ್ಯ ನಿರತ ಪೋಲೀಸ್ ಅಧಿಕಾರಿಯೊಬ್ಬರು ನೋಡ ನೋಡುತ್ತಿದ್ದಂತೆ ಮಣ್ಣು ದಿಣ್ಣೆಯ ಮೇಲೆ ಬೈಕ್ ಹತ್ತಿಸಿ ಕಾಂಕ್ರೀಟ್ ರಸ್ತೆಯಲ್ಲಿ ಸಂಚರಿಸಿರುತ್ತಾರೆ.

ಇದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.