ಜೂ.27ರಂದು ಕ್ಷಮತೆ ಪುಸ್ತಕ ಬಿಡುಗಡೆ

Advt_Headding_Middle
Advt_Headding_Middle

ಕಾಂಚೋಡು ಗೋಪಾಲಕೃಷ್ಣ ಅವರ ಸೈನಿಕ ಜೀವನದ ಅನುಭವಗಳ ಬಗ್ಗೆ ಅರವಿಂದ ಚೊಕ್ಕಾಡಿಯವರು ಬರೆದ ಕೃತಿ ‘ ಕ್ಷಮತೆ’ ಯು ಜೂ.27  ರಂದು ಅರ್ಪಣೆಗೊಳ್ಳಲಿದೆ. ಪ್ರಸ್ತುತ ಸಂದರ್ಭದಲ್ಲಿ ಕೃತಿಯನ್ನು ಕಾಂಚೋಡು ಗೋಪಾಲಕೃಷ್ಣ ಅವರ ೬೦ ನೆಯ ಜನ್ಮದಿನದಂದು ಸಂಜೆ ನಾಲ್ಕು ಗಂಟೆಗೆ ಉಜಿರೆಯಲ್ಲಿರುವ ಕಾಂಚೋಡು ಅವರ ಮನೆಯಲ್ಲಿ ಅರ್ಪಣೆ ಮಾಡಲಾಗುತ್ತದೆ ಎಂದು ಪುಸ್ತಕದ ಪ್ರಕಾಶಕರಾದ ಬಿಜಾಪುರದ ಚಾಣಕ್ಯ ಪ್ರಕಾಶನದ ನಿರ್ದೇಶಕ ಎನ್. ಎಮ್. ಬಿರಾದಾರ ಅವರು ತಿಳಿಸಿದ್ದಾರೆ.

ಕೃತಿಯ ಬಗ್ಗೆ ನಾಡಿನ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಂದ ವೀಡಿಯೊ ಪ್ರತಿಕ್ರಿಯೆಯನ್ನು ಪಡೆದು ಯೂ ಟ್ಯೂಬ್ ಮೂಲಕ ಜನರಿಗೆ ತಿಳಿಸಲಾಗಿದೆ. ಈ ವೀಡಿಯೋ ಸಂದೇಶದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತ ಕುಮಾರ್, ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ, ೮೫ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ, ಸಾಹಿತಿ ರಾಘವೇಂದ್ರ ಪಾಟೀಲ, ಕವಿ ಸುಬ್ರಾಯ ಚೊಕ್ಕಾಡಿ, ಅಂಕಣಕಾರ ಸುಧೀಂದ್ರ ಬುದ್ಯ, ಸಂಶೋಧಕ ಡಾ. ನಿತ್ಯಾನಂದ ಬಿ ಶೆಟ್ಟಿ, ಪರಿಸರ ಸಾಹಿತಿ ಡಾ. ನರೇಂದ್ರ ರೈ ದೇರ್ಲ, ಪತ್ರಕರ್ತ ಲಕ್ಷ್ಮೀ ಮಚ್ಚಿನ, ಕವಿ ಖಾದರ್ ಮೊಹಿಯುದ್ದೀನ್ ಕೆ.ಎಸ್, ಕೃಷಿಕ-ಸಾಹಿತಿ ಕೆ. ಆರ್. ತೇಜಕುಮಾರ್, ಪತ್ರಕರ್ತ ಬಿ.ಎಮ್.ಹನೀಫ್,ಸಾಹಿತಿ ರಾಧಾ ಕೃಷ್ಣ, ಸಾಹಿತಿ- ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಸಂಶೋಧಕ ಡಾ. ತಾಳ್ತಜೆ ವಸಂತ ಕುಮಾರ್, ಸಂಶೋಧಕ ಡಾ. ಪುಂಡಿಕಾಯ್ ಗಣಪತಿ ಭಟ್, ವಿಜ್ಞಾನ ಸಾಹಿತಿ- ಪತ್ರಕರ್ತ ನಾಗೇಶ್ ಹೆಗಡೆ, ವಿಜ್ಞಾನ ಸಾಹಿತಿ ರೋಹಿತ್ ಚಕ್ರತೀರ್ಥ, ಚಿಂತಕ ಮುಷ್ತಾಕ್ ಹೆನ್ನೇಬೈಲ್, ಭಾಷಾ ತಜ್ಞ ಚಂದ್ರಣ್ಣ ಎನ್.ಶರಣಪ್ಪ, ತುಳು ಸಾಹಿತಿ ಶ್ರೀಮತಿ ಅತ್ರಾಡಿ ಅಮೃತಾ ಶೆಟ್ಟಿ, ತುಳು ಜನಪದ ತಜ್ಞ ಪೇರೂರು ಜಾರು, ಟಿವಿ ೯ ರ ವಾರ್ತಾ ವಾಚಕ ಹರಿಪ್ರಸಾದ್ ಅಡ್ಪಂಗಾಯ ಮುಂತಾದ ಬರಹಗಾರರು ‘ ಕ್ಷಮತೆ’ ಯನ್ನು ಅರ್ಥೈಸಿದ್ದಾರೆ.

ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕರಾದ ಟಿ. ಎನ್. ಸೀತಾರಾಮ್, ವಿನು ಬಳಂಜ, ಅಭಿರುಚಿ ಚಂದ್ರು, ಶ್ರೀಪಾದ ಭಟ್ ಅವರು ‘ ಕ್ಷಮತೆ’ ಯ ಕುರಿತು ಮಾತನಾಡಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಬಿ. ಎಮ್. ಭಟ್ ‘ ಕ್ಷಮತೆ’ ಯನ್ನು ವಿವರಿಸಿದ್ದಾರೆ.

ಜಗದ್ಗುರು ತರಳಬಾಳು ಬೃಹನ್ಮಠದ ಸಾಣೆಹಳ್ಳಿ ಶಾಖೆಯ ಸ್ವಾಮೀಜಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ , ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು,ಕುಕ್ಕೆ ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ‘ ಕ್ಷಮತೆ’ ಯ ಅವಲೋಕನವನ್ನು ಮಾಡಿದ್ದಾರೆ.

ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಿ. ಯಶೋವರ್ಮ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ಜೋಸೆಫ್ ಎನ್. ಎಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ವಿಶುಕುಮಾರ್, ಪೊಲೀಸ್ ಅಧಿಕಾರಿ ಸತ್ಯನಾರಾಯಣ ಕುಡುಂಬಿಲ, ನಿವೃತ್ತ ಇಂಜಿನಿಯರ್ ಪುತ್ತೂರು ಅನಂತರಾಜ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಮಾರ್ತಾಜೆ, ಪ್ರಾಂಶುಪಾಲರಾದ ಮುರಳೀಧರ್ ಜಿ. ಎನ್, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ಎಮ್.ಟಿ, ಶಿಕ್ಷಣ ಚಿಂತಕರಾದ ಶ್ರೀಮತಿ ಸುಚರಿತಾ , ವೈದ್ಯೆ ಡಾ. ವೀಣಾ ಎನ್ ಅವರು ‘ ಕ್ಷಮತೆ’ ಯನ್ನು ವಿಶ್ಲೇಷಿಸಿದ್ದಾರೆ.

ಮರದ ಕೆಲಸಗಾರ ಚನಿಯಪ್ಪ ನಾಯ್ಕ,ಗೃಹಿಣಿ ಶ್ರೀಮತಿ ಪಲ್ಲವಿ ಬಿ.ಎನ್, ಶಿಕ್ಷಕರಾದ ಸಂದೀಪ್ ಕೆ.ಎಸ್, ಬಾಲಚಂದ್ರ ಭಟ್, ಶ್ರೀಮತಿ ಹೇಮಲತಾ, ಸತೀಶ್ ಕುಮಾರ್ ಕೊಂಯ್ಗಾಜೆ, ತಿಮ್ಮಪ್ಪ ಕೊಡ್ಲಾಡಿ, ಸಂತೋಷ್ ಸಾಲಿಯಾನ್, ಶ್ರೀಮತಿ ಅಮಿತಾ ಅವರು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.