Breaking News

ಸಕಲ ಸುರಕ್ಷಾ ಕ್ರಮಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ ಸುಳ್ಯ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರ- 2020 ವಿದ್ಯಾರ್ಥಿಗಳು

Advt_Headding_Middle
Advt_Headding_Middle

 

ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ. ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಿಕೊಂಡಿದ್ದು ತಾಲೂಕಿನಲ್ಲಿ ೬ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿ ತಾಲೂಕಿನಲ್ಲಿ ೩೮ ಪ್ರೌಢ ಶಾಲೆಗಳಿಂದ ೧೯೬೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಕೊರೊನಾ ಕಾರಣಕ್ಕಾಗಿ ತಾಲೂಕಿನಿಂದ ಬೇರೆ ಊರುಗಳಲ್ಲಿ ಓದುತ್ತಿರುವ ೬೨ ವಿದ್ಯಾರ್ಥಿಗಳು ಸುಳ್ಯದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದು ಸುಳ್ಯದಲ್ಲಿ ಓದುತ್ತಿರುವ ಇದೀಗ ಅವರವರ ಊರುಗಳಿಗೆ ಹೋಗಿರುವ ೧೦೪ ವಿದ್ಯಾರ್ಥಿಗಳು ಸುಳ್ಯದಿಂದ ಹೊರಗೆ ಪರೀಕ್ಷೆ ಬರೆಯಲಿದ್ದಾರೆ. ಹೀಗೆ ಈ ಬಾರಿ ಸುಳ್ಯದ ೬ ಕೇಂದ್ರಗಳಲ್ಲಿ ೨೦೨೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಈ ಬಾರಿ ಸುಳ್ಯ ತಾಲೂಕಿನಲ್ಲಿ ಸುಳ್ಯ ಜೂನಿಯರ್ ಕಾಲೇಜು, ಕೆ.ಪಿ.ಎಸ್. ಗಾಂಧಿನಗರ, ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ, ಅರಂತೋಡು ಎನ್ನೆಂಪಿಯುಸಿ, ಎಸ್‌ಎಸ್‌ಪಿಯು ಸುಬ್ರಹ್ಮಣ್ಯ, ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜು ಹೀಗೆ ೬ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಅಜ್ಜಾವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಹಾಗೂ ಸಹಾಯಕ ಅಧೀಕ್ಷಕರಾಗಿ ಜಯಶ್ರೀ, ಕೆ.ಪಿ.ಎಸ್. ಗಾಂಧಿನಗರದಲ್ಲಿ ಎಣ್ಮೂರಿನ ಶೀತಲ್, ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಸೂಫಿ ಪೆರಾಜೆ, ಎನ್ನೆಂಪಿಯುಸಿ ಅರಂತೋಡಿನಲ್ಲಿ ಸೀತರಾಮ ಎಂ.ಕೆ., ಎಸ್‌ಎಸ್‌ಪಿಯು ಸುಬ್ರಹ್ಮಣ್ಯದಲ್ಲಿ ಯಶವಂತ ರೈ ಹಾಗೂ ಉಪ ಅಧೀಕ್ಷಕರಾಗಿ ಶಿವರಾಮ ಶಾಸ್ತ್ರೀ, ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಮಾ ಕುಮಾರಿ, ಉಪ ಅಧೀಕ್ಷಕರಾಗಿ ಗೋಪಿನಾಥ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ತಾಲೂಕಿನ ೬ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೪೯೮ ಮಂದಿ ಪರೀಕ್ಷೆ ಬರೆಯುತ್ತಾರೆ. ಇಲ್ಲಿ ಸುಳ್ಯ ಜೂನಿಯರ್ ಕಾಲೇಜು, ಸುಳ್ಯ ಕೆ.ವಿ.ಜಿ. ಪ್ರೌಢಶಾಲೆ, ಸುಳ್ಯ ರೋಟರಿ ವಿದ್ಯಾಸಂಸ್ಥೆಯ , ಜ್ಞಾನದೀಪ ಎಲಿಮಲೆಯ, ಸುಳ್ಯ ಶಾರದಾ ಪ್ರೌಢಶಾಲೆಯಿಂದ, ಪಯಸ್ವಿನಿ ವಿದ್ಯಾಸಂಸ್ಥೆ ಜಾಲ್ಸೂರು ಇಲ್ಲಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.


ಕೆ.ಪಿ.ಎಸ್. ಗಾಂಧಿನಗರದಲ್ಲಿ ಅದೇ ಸಂಸ್ಥೆಯ ವಿದ್ಯಾರ್ಥಿಗಳು, ಅಜ್ಜಾವರ ಪ್ರೌಢಶಾಲೆ, ಆಲೆಟ್ಟಿ ಪ್ರೌಢಶಾಲೆ, ಸ್ನೇಹ ವಿದ್ಯಾಸಂಸ್ಥೆ, ಗ್ರೀನ್‌ವ್ಯೂ ಸುಳ್ಯ, ದುಗಲಡ್ಕ ಪ್ರೌಢಶಾಲೆ, ಎಲಿಮಲೆ ಸರಕಾರಿ ಪ್ರೌಢಶಾಲೆ ಸೇರಿ ಒಟ್ಟು ೩೬೯ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಕೇಂದ್ರದಲ್ಲಿ ಅದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಭಗವಾನ್ ಸತ್ಯಸಾಯಿ ವಿದ್ಯಾಸಂಸ್ಥೆ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ , ವಿವೇಕಾನಂದ ವಿನೋಬಾನಗರ, ಸ.ಪ್ರೌಢಶಾಲೆ ಐವರ್ನಾಡು ಸೇರಿ ಒಟ್ಟು ೨೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.


ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು, ಕೆ.ಪಿ.ಎಸ್. ಗಾಂಧಿನಗರ, ಮತ್ತು ಸುಳ್ಯ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ ಸುಳ್ಯ ಇದು ಮೂರು ವಿದ್ಯಾಸಂಸ್ಥೆ ಒಂದೇ ಕ್ಲಸ್ಟರ್ ಆಗಿರುವುದರಿಂದ ಪರೀಕ್ಷಾ ಕೇಂದ್ರವಾಗಿರುವ ಈ ಮೂರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಮೂರು ಪರೀಕ್ಷಾ ಕೇಂದ್ರಗಳಿಗೂ ಹಂಚಿಕೆ ಮಾಡಿ ಹಾಕಲಾಗಿದೆ.
ಬೆಳ್ಳಾರೆ ಪರೀಕ್ಷಾ ಕೇಂದ್ರದಲ್ಲಿ ಇದೇ ಸಂಸ್ಥೆಯ ವಿದ್ಯಾರ್ಥಿಗಳು, ಎಡಮಂಗಲದ, ಬಾಳಿಲ ವಿದ್ಯಾಬೊಧಿನಿ ವಿದ್ಯಾಸಂಸ್ಥೆಯ, ಎಣ್ಮೂರು ಪ್ರೌಢಶಾಲೆಯ, ಕೆ.ಎಸ್.ಜಿ ನಿಂತಿಕಲ್‌ನ ವಿದ್ಯಾರ್ಥಿಗಳು ಸೇರಿ ಒಟ್ಟು ೩೬೯ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಎನ್ನೆಂಪಿಯುಸಿ ಅರಂತೋಡು ಪರೀಕ್ಷಾ ಕೇಂದ್ರದಲ್ಲಿ ೨೫೪ ವಿದ್ಯಾರ್ಥಿಗಳಿದ್ದು, ಎನ್ನೆಂಸಿ ಅರಂತೋಡು, ಮರ್ಕಂಜ ಪ್ರೌಢಶಾಲೆ, ಎಂ.ಜಿ.ಎಂ. ಕೊಡಿಯಾಲಬೈಲಿನ, ಸವೇರಪುರ ಕಲ್ಲುಗುಂಡಿ, ತೆಕ್ಕಿಲ್ ವಿದ್ಯಾಸಂಸ್ಥೆ, ಸಂಪಾಜೆ ಪ್ರೌಢಶಾಲೆ (ಆರ್‌ಎಂ.ಎಸ್.ಎ) ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. .
ಎಸ್.ಎಸ್.ಪಿ.ಯು. ಸುಬ್ರಹ್ಮಣ್ಯದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೩೮೭ ಮಂದಿ ಪರೀಕ್ಷೆ ಬರೆಯುತ್ತಾರೆ. ಇಲ್ಲಿ ಗುತ್ತಿಗಾರು ಪ್ರೌಢಶಾಲೆ, ಎಸ್‌ಎಸ್‌ಪಿಯು ಸುಬ್ರಹ್ಮಣ್ಯ, ಪಂಜ ಪ್ರೌಢಶಾಲೆ, ಏನೆಕಲ್ಲು ಪ್ರೌಢಶಾಲೆಯ, ಹರಿಹರ ಜೂನಿಯರ್ ಕಾಲೇಜು, ಕೆ.ವಿ.ಜಿ. ಕೊಲ್ಲಮೊಗ್ರ, ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್, ಕುಮಾರಸ್ವಾಮಿ ಸುಬ್ರಹ್ಮಣ್ಯ, ಹಾಗೂ ಪಂಜ ಮೊರಾರ್ಜಿ ಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. .

ಕೇರಳದಿಂದ ಬರುವ ೧೭ ವಿದ್ಯಾರ್ಥಿಗಳಿಗೆ ವ್ಯವಸ್ಥೆ :
ಸುಳ್ಯ ತಾಲೂಕಿನ ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ಕೇರಳದಿಂದ ಬರುವ ೧೭ ಮಂದಿ ವಿದ್ಯಾರ್ಥಿಗಳು ಚೆಕ್ ಪೋಸ್ಟ್‌ನಲ್ಲಿ ಹಾಲ್ ಟಿಕೆಟ್ ತೋರಿಸಿ ಪರೀಕ್ಷೆಗೆ ಬರಬಹುದು. ಚೆಕ್ ಪೋಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದೆನ್ನುವ ಕಾರಣಕ್ಕೆ ಮುರೂರು ಚೆಕ್ ಪೋಸ್ಟ್‌ನಲ್ಲಿ ವಿವೇಕಾನಂದ ವಿನೋಬಾನಗರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಗೋಪಾಲರಾವ್‌ರನ್ನು ಅಧಿಕಾರಿಯಾಗಿ ಹಾಗೂ ಕನ್ನಡಿತೋಡು ಚೆಕ್ ಪೋಸ್ಟ್‌ನಲ್ಲಿ ಆಲೆಟ್ಟಿ ಶಾಲೆಯ ಶ್ರೀ ವಿದ್ಯಾರನ್ನು ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ವಿದ್ಯಾರ್ಥಿಗಳಿಗೆ ಮಾಸ್ಕ್ ಕೊಡುಗೆ :
ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದರಿಂದ ಈಗಾಗಲೇ ತಾಲೂಕಿನಲ್ಲಿ ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡೆರಡು ಮಾಸ್ಕ್‌ಗಳನ್ನು ಆಯಾ ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಮಾಸ್ಕ್‌ನ್ನು ಸ್ಕೌಟ್‌ಗೈಡ್ಸ್ ಸಂಸ್ಥೆಯವರು ಹಾಗೂ ಶಂಕರ್ ಗ್ರೂಪ್ ಉಡುಪಿ ಇವರು ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಮಾಸ್ಕ್ ಇಲ್ಲದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ ನಡೆಯುತ್ತಿದೆ.


ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಎಂಟ್ರೆನ್ಸ್ :
ತಾಲೂಕಿನ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಎಂಟ್ರೆನ್ಸ್ ಇರುವಂತೆ ನೋಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರುವ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಅದೇ ಗೇಟಿನ ಮೂಲಕ ಪ್ರವೇಶಿಸಬೇಕು. ಅಲ್ಲಿ ಅವರಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ನೀಡಲಾಗುತ್ತದೆ. ಬಳಿಕ ಪರೀಕ್ಷಾ ಕೊಠಡಿಯೊಳಗೆ ಬಿಡಲಾಗುತ್ತದೆ. ಈ ಹಿಂದೆ ಪರೀಕ್ಷಾ ಕೇಂದ್ರಕ್ಕೆ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿರಲಿಲ್ಲ. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ವಿದ್ಯಾರ್ಥಿಗಳು ನೀರಿನ ಬಾಟಲಿಯನ್ನು ಹಿಡಿದುಕೊಳ್ಳಬಹುದು. ನೀರು ತಾರದವರಿಗೆ ಕೇಂದ್ರದಲ್ಲಿಯೇ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಈ ಬಾರಿ ಮೊಬೈಲ್ ಸ್ವಾಧೀನಾಧಿಕಾರಿಗಳ ನೇಮಕ :
ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಂದರ್ಭ ಮೊಬೈಲ್‌ನಿಂದ ಸಮಸ್ಯೆ ಸಂಭವಿಸಬಾರದೆನ್ನುವ ನಿಟ್ಟಿನಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಆರಂಭದ ದಿನ ಆಯಾಯ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿ ಈ ಕುರಿತು ಮಾಹಿತಿ ನೀಡಲಾಗುವುದು. ಯಾರಾದರೂ ಮೊಬೈಲ್ ತಂದರೆ ಅದನ್ನು ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳು ಇರುತ್ತಾರೆ. ಅದರಂತೆ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಬಿಆರ್‌ಪಿ ಚಂದ್ರಮತಿ, ಸೈಂಟ್ ಜೋಸೆಫ್ ಸುಳ್ಯದಲ್ಲಿ ಶಿಕ್ಷಣ ಸಂಯೋಜಕ ಡಾ| ಸುಂದರ ಕೇನಾಜೆ, ಕೆ.ಪಿ.ಎಸ್. ಗಾಂಧಿನಗರದಲ್ಲಿ ಸಂಧ್ಯಾ ಕುಮಾರಿ, ಅರಂತೋಡು ಎನ್ನೆಂಪಿಯುಸಿಯಲ್ಲಿ ಬಿಆರ್‌ಪಿ ಹರಿಪ್ರಸಾದ್, ಬೆಳ್ಳಾರೆ ಜೂನಿಯರ್ ಕಾಲೇಜಿನಲ್ಲಿ ಬಿಆರ್‌ಪಿ ಲಿಂಗಪ್ಪ ಬೆಳ್ಳಾರೆ, ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ವಿನಲ್ಲಿ ವಸಂತ್ ಏನೆಕಲ್‌ರನ್ನು ನೇಮಕ ಮಾಡಲಾಗಿದೆ. ಆದರೆ ಪರೀಕ್ಷಾ ಮುಖ್ಯ ಅಧೀಕ್ಷಕರಿಗೆ ಮಾತ್ರ ಬೇಸಿಕ್ ಮೊಬೈಲ್‌ನ್ನು ಹಿಡಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಸ್ಕೌಟ್, ಗೈಡ್ ಶಿಕ್ಷಕರ ಸಹಿತ ಹಲವು ಶಿಕ್ಷಕರು ಸ್ಥಳದಲ್ಲಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.