Breaking News

ಸುಳ್ಯ: ಪಿ.ಎಲ್.ಡಿ.ಬ್ಯಾಂಕ್ ಪ್ರಕಟಣೆ, ಸುಸ್ತಿ ಬಡ್ಡಿ ಮನ್ನಾಗೆ ಅಸಲು ಕಟ್ಟಲು ಜೂ.‌ 30 ಕೊನೆಯ ದಿನ

Advt_Headding_Middle
Advt_Headding_Middle

 

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಪ್ರಕಟಣೆಯಂತೆ ರೈತ ಸದಸ್ಯರು ಪಡೆದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳಲ್ಲಿ ಜ. 31ಕ್ಕೆ ಸುಸ್ತಿಯಾಗಿರುವ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯ ಸರಕಾರ ಮನ್ನಾ ಮಾಡುವ ಯೋಜನೆಯನ್ನು ಕೋವಿಡ್ 19 ಮಹಾಮಾರಿಯ ಸೋಂಕಿನ ಪರಿಣಾಮದಿಂದಾಗಿ ಜೂ. 30 ರ ವರೆಗೆ ವಿಸ್ತರಿಸಿದೆ.

ಶೇ. 6,4,3 ರ ಕೃಷಿ ಸಾಲಗಳ ಕಂತು 2020 ಮಾ. 31ರಿಂದ ಜೂ. 30 ಕ್ಕೆ ವಿಸ್ತರಿಸಿರುತ್ತದೆ. ಬ್ಯಾಂಕಿನ ಸಾಲಗಾರ ಸದಸ್ಯರು ಅಂತಿಮ ದಿನಾಂಕಕ್ಕೆ ಮೊದಲಾಗಿ ಕಂತು ಪಾವತಿಸಿ ಬಡ್ಡಿ ಮನ್ನಾ, ಬಡ್ಡಿ ರಿಯಾಯಿತಿ ಸೌಲಭ್ಯ ಪಡೆಯಬಹುದು. ಗ್ರಾಹಕರ ಅನುಕೂಲಕ್ಕಾಗಿ ಜೂ. 27 ಮತ್ತು 28 ರ ಶನಿವಾರ ಹಾಗೂ ಆದಿತ್ಯವಾರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಬಿಳಿಮಲೆ, ವ್ಯವಸ್ಥಾಪಕರಾದ ಧನ್ ರಾಜ್ ಕೆ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.