Breaking News

ಟೌನ್ ಫೀಡರ್ ಅಳವಡಿಸಲು ಯೂತ್ ಕಾಂಗ್ರೆಸ್ ಒತ್ತಾಯ : ಪ್ರತಿಭಟನೆಯ ಎಚ್ಚರಿಕೆ

Advt_Headding_Middle
Advt_Headding_Middle

 

ಸುಳ್ಯ ನಗರ ವ್ಯಾಪ್ತಿಯ ಕೆಲವು ವಾರ್ಡ್ ಗಳಲ್ಲಿ ಟೌನ್ ಫೀಡರ್ ಅಳವಡಿಸುವಂತೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ ಒತ್ತಾಯಿಸಿದ್ದಾರೆ.

ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಲವು ವಾರ್ಡ್ ನಲ್ಲಿ ಟೌನ್ ಫೀಡರ್ ಮತ್ತು ಕೆಲವು ವಾರ್ಡ್ ಗಳಲ್ಲಿ ಗ್ರಾಮೀಣ ಫೀಡರ್ ಗಳಿಂದ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ. ಗ್ರಾಮೀಣ ಫೀಡರ್ ನಿಂದ ಸಣ್ಣ ಮಳೆ- ಗಾಳಿ ಬಂದರೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಸುಳ್ಯ ನಗರದ ನಾವೂರು, ಬೋರುಗುಡ್ಡೆ, ಕಾನತ್ತಿಲ, ಜಟ್ಟಿಪಳ್ಳ ಕಡೆಗಳಿಗೆ ಗ್ರಾಮೀಣ ಫೀಡರ್ ನಿಂದ ವಿದ್ಯುತ್ ಸರಬರಾಜು ಆಗುತ್ತಿದೆ. ಆದ್ದರಿಂದ ಯಾವಾಗಲೂ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ಸ್ಥಳಕ್ಕೆ ಟೌನ್ ಫೀಡರ್ ಅಳವಡಿಸಲು ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೆ ಕೆಲಸ ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ದಿನದಲ್ಲಿ ಟೌನ್ ಫೀಡರ್ ಅಳವಡಿಸದೇ ಇದ್ದರೆ ಯುವ ಕಾಂಗ್ರೆಸ್‌ ಮತ್ತು ನಾಗರಿಕರು ಸೇರಿ ಮೆಸ್ಕಾಂ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಎಂದು ಮೆಸ್ಕಾಂಗೆ ನೀಡಿದ ಮನವಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.