Breaking News

ಜೂ.29ರಂದು ಕವಿ ಸುಬ್ರಾಯ ಚೊಕ್ಕಾಡಿಯವರ ಬದುಕು – ಬರಹ ಅವಲೋಕನ ಕಾರ್ಯಕ್ರಮ

Advt_Headding_Middle
Advt_Headding_Middle

 

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇವರ ಜಂಟಿ ಸಹಯೋಗದಲ್ಲಿ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿಯವರ ಬದುಕು-ಬರಹಗಳ ಬಗ್ಗೆ ಅವಲೋಕನ ಕಾರ್ಯಕ್ರಮವನ್ನು ಜೂನ್ 29 ಸೋಮವಾರ ಸಂಜೆ ಗಂಟೆ 5.00 ಕ್ಕೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಆಯೋಜಿಸಲಾಗಿದೆ.


ಜೂನ್ 29 ಕ್ಕೆ ಸುಬ್ರಾಯ ಚೊಕ್ಕಾಡಿಯವರಿಗೆ 80 ವರ್ಷಗಳು ತುಂಬಲಿದ್ದು ಅವರ ಜನ್ಮದಿನದಂದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ತನ್ನ ಕವನಗಳ ಮೂಲಕ ಲಕ್ಷಾಂತರ ಕನ್ನಡಿಗರ ಮನಸೂರೆಗೊಂಡ ಚೊಕ್ಕಾಡಿಯವರನ್ನು ಅವರ ತವರಿನಲ್ಲೇ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಗೌರವಿಸುವ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತು ಮತ್ತು ಫ್ರೆಂಡ್ಸ್ ಕ್ಲಬ್ ಜೊತೆಯಾಗಿ ಹಮ್ಮಿಕೊಂಡಿದೆ.
ಇದೇ ಸಂದರ್ಭ ಅವರ ಕವನ ಸಂಕಲನ ಕಲ್ಲು ಮಂಟಪ ಬಿಡುಗಡೆಯಾಗಲಿದೆ.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹರಪ್ರಸಾದ್ ತುದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಚೊಕ್ಕಾಡಿಯವರ ಸಾಹಿತ್ಯ ಲೋಕದ ಪಯಣದ ಬಗ್ಗೆ ಮಾತನಾಡಿ ಅವರ ಕವನ ಸಂಕಲನ ಕಲ್ಲು ಮಂಟಪ ವನ್ನು ಹಿರಿಯ ಸಾಹಿತಿ, ಉಪನ್ಯಾಸಕ ಡಾ.ಪೂವಪ್ಪ ಕಣಿಯೂರು ಬಿಡುಗಡೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಯುವ ಬರಹಗಾರ-ಶಿಕ್ಷಕ ಅರವಿಂದ ಚೊಕ್ಕಾಡಿ ಹಾಗೂ ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್ ಬೆಳಾಲು ಭಾಗವಹಿಸಲಿದ್ದಾರೆ. ಖ್ಯಾತ ಗಾಯಕ ರಮೇಶ್ ಮೆಟ್ಟಿನಡ್ಕ ಚೊಕ್ಕಾಡಿಯವರ ಭಾವಗೀತೆ ಗಳನ್ನು ಹಾಡಲಿದ್ದು,ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಸೀಮಿತ ಸಂಖ್ಯೆಯಲ್ಲಿ ಚೊಕ್ಕಾಡಿಯವರ ಅಭಿಮಾನಿಗಳು, ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಗುತ್ತದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.