Breaking News

ಯೇನೆಕಲ್ಲು: ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ

Advt_Headding_Middle
Advt_Headding_Middle

ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಇಂದು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆಯವರ ಯೇನೆಕಲ್ಲು ಫಾರ್ಮ್ ಹೌಸ್‌ನಲ್ಲಿ ಬಳ್ಪ, ಕೇನ್ಯ ಮತ್ತು ಯೇನೆಕಲ್ಲು ಭಾಗದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ಸಭಾ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.

ಹಿರಿಯ ಸಹಕಾರಿ, ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಎಂ. ರಾಮಯ್ಯ ಮತ್ತು ಅಶೋಕ್ ನೆಕ್ರಾಜೆ ಮತ್ತು ಶ್ರೀಮತಿ ರಶ್ಮಿ ಅಶೋಕ್ ದಂಪತಿಗಳ ಪುತ್ರ ಸೃಜನ್ ಗೌಡ ಎನ್.ಎ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯೇನೆಕಲ್ಲು ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಾನಡ್ಕ ಅಧ್ಯಕ್ಷತೆ ವಹಿಸಿ ಪಕ್ಷದ ಬಲವರ್ಧನೆ ಮಾಡುವ ಬಗ್ಗೆ ಮಾತನಾಡಿದರು. ಬಳ್ಪ ಮತ್ತು ಕೇನ್ಯ ಗ್ರಾಮದ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾದೆ, ಶರತ್ ಚಂದ್ರ ತೇರಿನಮಜಲು, ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಪೂಜಾರಿಮನೆ, ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆರೆಕ್ಕೋಡಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪಲ್ಲತ್ತಡ್ಕ, ಕೇನ್ಯ ಬೂತ್ ಸಮಿತಿ ಅಧ್ಯಕ್ಷ ಪ್ರಕಾಶ್ ಕಾಯಂಬಾಡಿ, ಅರ್ಗುಡಿ ಶ್ರೀ ಸದಾಶಿವ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅಚ್ಚುತ ಆಲ್ಕಬೆ, ಯುವ ಕಾಂಗ್ರೆಸ್ ಗ್ರಾಮ ಸಂಘಟನಾ ಕಾರ್ಯದರ್ಶಿ ಮಹೇಶ್ ಜತ್ತಿಲ, ಸೀತಾರಾಮ ಎಣ್ಣೆಮಜಲು, ಸುಂದರ ಗೌಡ ಅಕ್ಕೆನಿ, ಮಹೇಶ್ ಅಗೋಲಿಬೈಲು, ವೀರಪ್ಪ ಗೌಡ ಅಗೋಲಿಬೈಲು, ಶೂರಪ್ಪ ಗೌಡ ಅಗೋಲಿಬೈಲು, ನಿತಿನ್ ಬೂದಿಪಲ್ಲ, ಪುರುಷೋತ್ತಮ ಪರಮಲೆ, ಸತೀಶ್ ಪದ್ನಡ್ಕ, ದೀಕ್ಷಿತ್ ಪದ್ನಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.