ಬಾಳಿಲದಲ್ಲಿ ಡಿ.ಕೆ.ಶಿವಕುಮಾರ್ ಪದಗ್ರಹಣ ವೀಕ್ಷಣೆ ,ಪ್ರತಿಜ್ಞಾ ವಿಧಿ ಬೋಧನೆ

Advt_Headding_Middle
Advt_Headding_Middle

ಸುಳ್ಯ ಬ್ಲ್ಯಾಕ್ ಕಾಂಗ್ರೆಸ್ ನ ಬಾಳಿಲ ಮುಪ್ಯೇರ್ಯ ಗ್ರಾಮದಲ್ಲಿ ನಡೆದ ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾ ವಿಧಿ ದಿನ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸಿಗರಾದ ವಿಶ್ವನಾಥ ರೈ ಮರುವಂಜ,ಪದ್ಮನಾಭ ರೈ ಮರುವಂಜ ,ಗಂಗಾಧರ ಕಾಯರ ಶುಭಾಶಿನಿ ರೈ ,ಶೈಲಜ ಮುಗಪ್ಪು ಇವರೊಂದಿಗೆ ವೇದಿಕೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ ರೈ ಮರುವಂಜ , ಸುಳ್ಯ NSUI ಅಧ್ಯಕ್ಷರಾದ ಪವನ್ ರೈ ಮರುವಂಜ ಇವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ಪಿ. ಶೇಖರ್ ಕಾಯರ ಇವರು ವಹಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ಕೆ.ಪದ್ಮನಾಭ ರೈ ಹಾಗು ಹಿರಿಯರಾದ ವಿಶ್ವನಾಥ ರೈ ನೆರೆವೇರಿಸಿದರು. ಕಾರ್ಯಕ್ರಮವನ್ನು ಪ್ರಶಾಂತ್ ರೈ ಮರುವಂಜ ನಿರೂಪಿದರು . ಕಾರ್ಯಕ್ರಮದ ಸಾಮಾಜಿಕ ಜಾಲತಾಣದ ಉಸ್ತುವಾರಿ ಬಶೀರ್ ಅಹಮದ್ ನೇಲ್ಯಮಜಲು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಹಲವಾರು ಗಣ್ಯರು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಕೊನೆಗೆ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಶುಭವೇಳೆಯ ನೆನಪಿಗಾಗಿ ಕಾರ್ಯಕರ್ತರಿಗೆ ಅಕ್ಕಿ ಹಾಗು ದಿನಬಳಕೆಯ ವಸ್ತುಗಳನ್ನು ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ ರೈ ಮರುವಂಜ ಇವರ ವತಿಯಿಂದ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.