ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಂಪಾಜೆ ಸಹಕಾರಿ ಸಂಘಕ್ಕೆ ಭೇಟಿ

Advt_Headding_Middle
Advt_Headding_Middle
Advt_Headding_Middle

 

ಕರ್ನಾಟಕ ರಾಜ್ಯ ಸರಕಾರದ ಸಹಕಾರ ಸಚಿವರಾದ ಸೋಮಶೇಖರ ಎಸ್. ಟಿ ರವರು ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜು. 2 ರಂದು ಭೇಟಿ ನೀಡಿದರು. ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ರವರು ಸಚಿವರನ್ನು ಸ್ವಾಗತಿಸಿ ಸಂಘದ ಪರವಾಗಿ ಸನ್ಮಾನಿಸಿದರು. ಸಚಿವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರ ಸಾಲ ಮನ್ನಾದ ಶೀಘ್ರ ಬಿಡುಗಡೆ, ತಾಲೂಕಿನ ಹಳದಿ ರೋಗ ಪೀಡಿತ ಪ್ರದೇಶದ ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಕೃಷಿ ಸಾಲಗಳ ವಾಯಿದೆ ದಿನಾಂಕವನ್ನು ಜೂನ್ 3೦ ರಿಂದ ಅಗೋಸ್ಟ್ 3೦ ರವರೆಗೆ ಮುಂದುವರಿಸಬೇಕೆಂದು ಸಂಪಾಜೆ ಗ್ರಾಮದ ರೈತರ ಹಾಗೂ ಜಿಲ್ಲೆಯ ಎಲ್ಲಾ ರೈತರ ಪರವಾಗಿ ಮನವಿ ಮಾಡಿದರು. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಶೀಘ್ರವಾಗಿ ಆದೇಶ ನೀಡುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರಾದ ಪ್ರವೀಣ್ ನಾಯಕ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ರವೀಂದ್ರ.ಬಿ, ಸಹಕಾರ ಇಲಾಖೆಯ ಅಧಿಕಾರಿಗಳು, ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಗಣಪತಿ ಭಟ್, ಆನಂದ ಪಿ ಎಲ್, ಜಗದೀಶ್ ರೈ, ಹಮೀದ್ ಹೆಚ್, ಯಮುನ ಬಿ ಎಸ್, ಜಿಲ್ಲಾ ಬ್ಯಾಂಕ್‌ನ ಪ್ರತಿನಿಧಿ ಬಾಲಕೃಷ್ಣ ಪುತ್ಯ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.