ಎರಡೂವರೆ ವರ್ಷದ ಮಗನಿಗೆ ಕೊರೋನಾ

Advt_Headding_Middle

 

ಸುಬ್ರಹ್ಮಣ್ಯದ ನೌಕರನಿಗೆ ಹೋಂ ಕ್ವಾರಂಟೇನ್

ಎರಡೂವರೆ ವರ್ಷದ ಮಗನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರೊಬ್ಬರು ಕ್ವಾರಂಟೇನ್ ಗೆ ಒಳಗಾಗಿದ್ದಾರೆ.

ಧಾರವಾಡ ಮೂಲದ ಈ ನೌಕರನ ಪತ್ನಿ ಮತ್ತು ಮಕ್ಕಳು ಊರಲ್ಲಿಯೇ ಇದ್ದರು. ಮಗುವಿಗೆ ಜ್ವರ ಇದ್ದ ಹಿನ್ನೆಲೆಯಲ್ಲಿ ಅವರು  ಐದು ದಿನಗಳ ಹಿಂದೆ ಊರಿಗೆ ಹೋಗಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭ ಕೊರೋನಾ ಪರೀಕ್ಷೆಗೆ ಗಂಟಲ ದ್ರವದ ಮಾದರಿಯನ್ನು ತೆಗೆಯಲಾಗಿತ್ತು. ನಿನ್ನೆ ಅವರು ಸುಬ್ರಹ್ಮಣ್ಯಕ್ಕೆ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಇಂದು ಮಗುವಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿದಾಗ ಅವರ ಸೂಚನೆ ಮೇರೆಗೆ ಹೋಂ ಕ್ವಾರಂಟೇನ್ ಗೆ ಒಳಪಟ್ಟಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.