ಮಹಾಲಿಂಗ ಪಾಟಾಳಿ ಚಿಕ್ಕಿನಡ್ಕ ನಿಧನ

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಚಿಕ್ಕಿನಡ್ಕ ನಿವಾಸಿ ಕೆ.ಎಸ್. ಮಹಾಲಿಂಗ ಪಾಟಾಳಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಜು.3 ರಂದು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು ಅವರನ್ನು ಮಂಗಳೂರಿನ ಎ.ಜೆ .ಆಸ್ಪತ್ರೆಗೆ ಒಂದು ವಾರದ ಹಿಂದೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಮೃತರ ಪತ್ನಿ ಅಮರಮುಡ್ನೂರು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ರಾಜೀವಿ ಹಾಗೂ ಒರ್ವ ಪುತ್ರ ಗೌತಮ್ ಮತ್ತು ಪುತ್ರಿ ಶ್ರೀಮತಿ ತೇಜಸ್ವಿನಿ, ಅಳಿಯ ಗಣೇಶ್ ಐವರ್ನಾಡು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಸುಮಾರು 20 ವರ್ಷಗಳಿಂದ ಚಿಕ್ಕಿನಡ್ಕ ಎಂಬಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.