ಆಲೆಟ್ಟಿ-ಕೂಟೇಲು ರಸ್ತೆಗೆ ಮಂಜೂರಾದ ಅನುದಾನ ಬೇರೆಡೆಗೆ ವರ್ಗಾವಣೆ ಹಿನ್ನೆಲೆ, ಸ್ಥಳೀಯರ ಆಕ್ರೋಶ :  ನ್ಯಾಯಕ್ಕಾಗಿ ಸರಕಾರಕ್ಕೆ ಮನವಿ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೂಟೇಲು- ನೆಡ್ಚಿಲು, ಅರಂಬೂರು, ಮಜಿಗುಂಡಿ, ಪಾಲಡ್ಕ, ಅಂಜಿಕ್ಕಾರ್, ಕುಕ್ಕುಂಬಳ ಈ ಭಾಗಕ್ಕೆ ಸಂಚರಿಸುವ ರಸ್ತೆ ತೀರಾ ತ್ರಾಸದಾಯಕವಾಗಿದ್ದು ಸಂಚಾರಕ್ಕೆ ಅಯೋಗ್ಯಕರವಾಗಿದೆ. ಈ ಭಾಗದಲ್ಲಿ ಸುಮಾರು 500 ಮನೆಗಳಿದ್ದು 100 ಕ್ಕಿಂತ ಹೆಚ್ಚು ಪ.ಪಂಗಡದ ಮನೆಗಳಿವೆ. ಇಲ್ಲಿನ ಸಾರ್ವಜನಿಕರು ತಮ್ಮ ಅಗತ್ಯ ಕೆಲಸ ಕಾರ್ಯಗಳಿಗೆ ಆಲೆಟ್ಟಿ ಮತ್ತು ಸುಳ್ಯ ವನ್ನು ಅವಲಂಬಿಸಿದ್ದು ಬಹಳ ವರ್ಷಗಳಿಂದ ಕಾಲ್ನಡಿಗೆಯಲ್ಲೇ ಬರಬೇಕಾಗಿದೆ. ಕಳೆದ 7 ವರ್ಷಗಳ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲು ರವರು ಕುಕ್ಕುಂಬಳ ಎಂಬಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿ.ಜೆ.ಪಿ.ಮಂಡಲದ ಅಧ್ಯಕ್ಷರಾಗಿ ಎನ್.ಎ.ಸುಂದರ ರವರ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಂಸದರಿಗೆ ಮನವಿ ನೀಡಿ ಗ್ರಾಮ ಸಡಕ್ ಯೋಜನೆಗೆ ಅರ್ಜಿ ಸಲ್ಲಿಸಲಾಗಿತ್ತು.

ಇದೀಗ ಮೂರು ತಿಂಗಳ ಹಿಂದೆ ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರವು ರಸ್ತೆ ಅಭಿವೃದ್ಧಿಗೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಅನುದಾನ ಮಂಜೂರುಗೊಳಿಸಿರುವ ಬಗ್ಗೆ ಶಾಸಕರು ಮತ್ತು ಜಿ.ಪಂ.ಸದಸ್ಯರು ಹಾಗೂ ಪಂಚಾಯತ್ ಅಧ್ಯಕ್ಷರು ತಿಳಿಸಿದ್ದರು.ಶೀಘ್ರವಾಗಿ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಭರವಸೆಯನ್ನು ನೀಡಿರುತ್ತಾರೆ. ಆದರೆ ಇದೀಗ ಈ ಭಾಗದ ನಾಗರೀಕರೊಬ್ಫರ ಆಕ್ಷೇಪಣೆ ಇದೆ ಎಂಬ ಸುಳ್ಳು ಸುದ್ದಿ ಹರಡಿಸಿ ಈ ಭಾಗಕ್ಕೆ ಮಂಜೂರಾದ ಅನುದಾನವನ್ನು ಸ್ಥಳೀಯ ರಾಜಕೀಯ ಪ್ರಭಾವಿ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಬೇರೆ ಕಡೆಯ ರಸ್ತೆಗೆ ವರ್ಗಾವಣೆ ಮಾಡುವ ಹುನ್ನಾರ ನಡೆಸಿರುವ ಕುರಿತು ಮಾಹಿತಿ ದೊರಕಿರುತ್ತದೆ. ಆದ್ದರಿಂದ ನಮ್ಮ ಈ ಭಾಗದ ರಸ್ತೆಗೆ ಮಂಜೂರಾದ ಅನುದಾನವನ್ನು ಇದೇ ರಸ್ತೆಗೆ ಬಳಸಿಕೊಂಡು ರಸ್ತೆ ಅಭಿವೃದ್ಧಿ ಪಡಿಸಿ ನ್ಯಾಯ ಒದಗಿಸಿಕೊಡುವಂತೆ ಇಲ್ಲಿನ ಸ್ಥಳೀಯ ಫಲಾನುಭವಿಗಳು ಕೂಟೇಲು ಗೋಪಾಲ ಗೌಡ ಎಂಬವರ ಮನೆಯಲ್ಲಿ ಜು.5 ರಂದು ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿರುತ್ತಾರೆ. ಒಂದು ವೇಳೆ ನಮ್ಮ ಬೇಡಿಕೆಯ ರಸ್ತೆ ಕಾಮಗಾರಿಗೆ ಬಂದ ಅನುದಾನವನ್ನು ಬೇರೆ ಕಡೆಗೆ ಬಳಸಿದಲ್ಲಿ ಅದಕ್ಕೆ ಆಕ್ಷೇಪಿಸಿ ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಚುನಾವಣೆಯಲ್ಲಿ ಈ ಭಾಗದ ಮತದಾರರು ಮತಚಲಾವಣೆ ಮಾಡದೇ ಚುನಾವಣೆ ಬಹಿಷ್ಕರಿಸುತ್ತೇವೆ. ಈ ವಿಚಾರದ ಕುರಿತು ಮಂಜೂರಾದ ಗ್ರಾಮ ಸಡಕ್ ನ ಪತ್ರದ ಪ್ರತಿ ಹಾಗೂ ನಾಗರೀಕರ ಸಹಿ ಇರುವ ಮನವಿ ಪತ್ರವನ್ನು ಮಾನ್ಯ ಪ್ರಧಾನ ಮಂತ್ರಿ ಯವರಿಗೆ , ಮುಖ್ಯಮಂತ್ರಿ ಯವರಿಗೆ, ಸಂಸದರಿಗೆ, ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಕಳುಹಿಸುವುದಾಗಿ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಮುಖಂಡರು ಪ್ರಸ್ತಾಪಿಸಿದರು. ಪ್ರಮುಖರಾದ ತೀರ್ಥರಾಮ ನೆಡ್ಚಿಲು, ಕೂಟೇಲು ಉಮೇಶ್ ನಾಯ್ಕ್, ಶಿವಶಂಕರ ಪಾಲಡ್ಕ, ದಿವಾಕರ ಪೈ ಮಜಿಗುಂಡಿ, ಪುಷ್ಪರಾಜ ಅರಂಬೂರು, ಬಾಬು ಅಜಿಲ ಅರಂಬೂರು ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಬೆಳ್ಯಪ್ಪ ನಾಯ್ಕ್ ಕೂಟೇಲು, ಹೇಮಂತ್ ಕುಮಾರ್, ಪದ್ಮಯ್ಯ ಗೌಡ ಪಡ್ಪು, ವಿನೋದ್, ಶೇಷಪ್ಪ ಮೂಲ್ಯ, ಮೋಹನ್
ನಾಯ್ಕ್, ತಮ್ಮಣ್ಣ ಕೂಟೇಲು, ದೇವಿಪ್ರಸಾದ್, ರತೀಶ್ ಸ್ಥಾನದ ಮನೆ, ಹರೀಶ್, ಪುಂಡರೀಕ, ಪದ್ಮನಾಭ ಗೌಡ ನೆಡ್ಚಿಲು, ಹರೀಶ್ ಸ್ಥಾನದ ಮನೆ, ಧನಂಜಯ, ದಿನಕರ, ಹುಕ್ರಪ್ಪ ಗೌಡ ನೆಡ್ಚಿಲು, ರಾಮಕೃಷ್ಣ ನಾಯ್ಕ್ ಕೂಟೇಲು, ಬಾಲಕೃಷ್ಣ ನಾಯ್ಕ್, ಕೃಷ್ಣ ನಾಯ್ಕ್ ಗಡಿಪಣೆ, ಆನಂದ ನಾಯ್ಕ್ ಕೂಟೇಲು, ಶ್ರೀಮತಿ ಮಾಣಿಕ್ಯ, ಶ್ರೀಮತಿ ಶೇಷಮ್ಮ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.