Advt_Headding_Middle
Advt_Headding_Middle

ಬೆಂಗಳೂರಿನ ಚಾನೆಲ್ ಕಾರ್ಯಕ್ರಮ :
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಾಜಿ ಟ್ರಸ್ಟಿ ಮೇಲೆ
ಹಣದ ಆರೋಪ

ಬೆಂಗಳೂರಿನ ಚಾನೆಲ್ ಒಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥೆಯ ಬಗ್ಗೆ ಆರೋಪ ಹೊರಿಸಿ ಕಾರ್ಯಕ್ರಮ ಪ್ರಸಾರ ಮಾಡುವಾಗ ಕಳೆದ ಸಾಲಿನ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳರ ಮೇಲೆ ಹಣ ಪಡೆದಿರುವುದಾಗಿ ಆರೋಪ ಮಾಡಿರುವುದಾಗಿ ಕೇಳಿಬಂದಿದೆ.
ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿ ೧೮೦ ರೂಂ ಗಳ ಅತಿಥಿ ಗೃಹ, ಫರ್ನಿಚರ್ ಖರೀದಿ, ರೂಂ ಬಾಡಿಗೆ ವಿಚಾರವಾಗಿ, ದೇವಳದ ಜಾಗ ಒತ್ತುವರಿ ಮಾಡಿರುವ ಆರೋಪ ಮಾಡಲಾಗಿದೆ. ಒತ್ತುವರಿ ವಿಚಾರವಾಗಿ ಒತ್ತುವರಿದಾರರಿಂದ ಮಹೇಶ್ ೨ ಲಕ್ಷ ಹಣ ಲಂಚ ಪಡೆದಿರುವಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮಹೇಶ್ ಅವರು ಚಾನೆಲ್ ನವರಿಗೆ ಕರೆ ಮಾಡಿದ್ದು ಕಾರ್ಯಕ್ರಮ ಪ್ರಸಾರ ಮಾಡಿ ಲಂಚ ಪಡೆದ ಆರೋಪ ಹೊರಿಸಿರುವ ವಿಚಾರವಾಗಿ ಸತ್ಯಾಸತ್ಯತೆ ಬಯಲು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಚಾನೆಲ್ ಗೆ ತಿಳಿಸಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.