Breaking News

ಟಿ.ವಿ.ಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಾಜಿ ಟ್ರಸ್ಟಿ ಮೇಲೆ ಆರೋಪ ಸ್ಪಷ್ಟನೆ ನೀಡದಿದ್ದರೆ ಕಾನೂನು ಕ್ರಮ : ಟ್ರಸ್ಟಿ ಎಚ್ಚರಿಕೆ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 184 ಕೊಠಡಿಯ ವಸತಿಗೃಹದ ಕಾಮಗಾರಿಯ ವಿಚಾರವಾಗಿ ಹಾಗೂ ಅಲ್ಲಿ ನಿರ್ಮಾಗೊಳ್ಳುತ್ತಿರುವ ಪೀಠೋಪಕರಣದ ಟೆಂಡರ್‌ನಲ್ಲಿ ಪಾರದರ್ಶಕತೆ ಇಲ್ಲದೆ ಅವ್ಯವಹಾರ ಮತ್ತು ಕಳಪೆಯಾಗಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಸುದಾಗಿ ಧಾರ್ಮಿಕ ದತ್ತಿ ಸಚಿವರು ಹೇಳಿ ನೀಡಿದ್ದರು.
ಈ ವಿಚಾರ ಮತ್ತು ಇತರ ವಿಷಯಗಳ ಕುರಿತು ಜೂ.30ರಂದು ರಾಜ್ಯದ ಟಿ.ವಿ. ಚಾನೆಲ್‌ವೊಂದರಲ್ಲಿ ವರದಿ ಪ್ರಸಾರವಾಗಿತ್ತು. ಅದರಲ್ಲಿ ಜಾಗ ಒತ್ತುವರಿದಾರರಿಂದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಮಹೇಶ್ ಕುಮಾರ್ ಕೆ.ಎಸ್.ರವರು 2 ಲಕ್ಷ ರೂ ಹಣ ಪಡೆದಿರುವುದಾಗಿ ಆರೋಪ ಮಾಡಲಾಗಿತ್ತು.
ಈ ವರದಿ ಪ್ರಸಾರವಾದ ಮರುದಿನ ಮಹೇಶ್ ಕುಮಾರ್‌ರವರು ಟಿ.ವಿ. ಕಚೇರಿಗೆ ಫೋನ್ ಮಾಡಿ, ವರದಿಯ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. `ನಾನು ಹಣ ಪಡೆದಿದ್ದೇನೆಂಬ ಬಗ್ಗೆ ಚಾನೆಲ್‌ನಲ್ಲೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ` ಎಂದು ಮಹೇಶ್‌ವರು ಟಿ.ವಿ.ಯವರಿಗೆ ಫೋನ್‌ನಲ್ಲಿ ಹೇಳುವ ಆಡಿಯೋವನ್ನು ಅವರ ವಾಟ್ಸಾಪ್ ಗ್ರೂಪ್‌ನಲ್ಲಿ ಹಾಕಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.