Breaking News

ನಾಗತೀರ್ಥ : ಶಾರದಾಂಬಾ ಯಕ್ಷಗಾನ ಕಲಾ ಟ್ರಸ್ಟ್ ವಠಾರದಲ್ಲಿ ಗಿಡ ನಾಟಿ ಹಾಗೂ ವಿತರಣಾ ಕಾರ್ಯಕ್ರಮ

Advt_Headding_Middle
Advt_Headding_Middle

ಶ್ರೀ ಕ್ಷೇ. ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ವಲಯ ಅರಣ್ಯ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾರದಾಂಬಾ ಯಕ್ಷಗಾನ ಕಲಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕೂತ್ಕುಂಜ ಒಕ್ಕೂಟದ ಸದಸ್ಯರಿಂದ ಜು. ೬ರಂದು ಪರಿಸರ ಜಾಗೃತಿ ಮಾಹಿತಿ ಮತ್ತು ಗಿಡ ನಾಟಿ ಹಾಗೂ ವಿತರಣಾ ಕಾರ್ಯಕ್ರಮವು ನಾಗತೀರ್ಥ ಶಾಲಾ ವಠಾರದಲ್ಲಿ ಮತ್ತು ಯಕ್ಷಗಾನ ಕಲಾ ಮಂದಿರದ ವಠಾರದಲ್ಲಿ ನಡೆಸಲಾಯಿತು.


ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಸಂಪ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ವಸಂತ ಎಲ್. ಸ್ವಾಗತಿಸಿ, ಕೂತ್ಕುಂಜ ಒಕ್ಕೂಟದ ಸೇವಾ ಪ್ರತಿನಿಧಿ ರೋಹಿಣಿ ಸಿ .ಎ. ವಂದಿಸಿದರು. ಸುಳ್ಯ ತಾಲ್ಲೂಕು ವಲಯಾಧಿಕಾರಿ ಸಂತೋಷ್ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಮೂರನೇ ಬಾರಿ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈಯವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.