Breaking News

ಡಯಾಲಿಸಿಸ್ ಸಮಸ್ಯೆ : ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

Advt_Headding_Middle
Advt_Headding_Middle

 

 

33 ಮಂದಿ ಸ್ವಾಬ್ ಸಂಗ್ರಹ : ಶೀಘ್ರವಾಗಿ ಸಮಸ್ಯೆ ಇತ್ಯರ್ಥಕ್ಕೆ ಸಭೆ ನಿರ್ಧಾರ

ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ‌ ಪಾಸಿಟಿವ್ ಕಂಡು ಬಂದಿರುವುದರಿಂದ ಆಸ್ಪತ್ರೆಗೆ ನಿರ್ಬಂಧ ಹಾಕಿದ್ದು 33 ಮಂದಿ ಡಯಾಲಿಸಿಸ್ ರೋಗಿಗಳಿಗೆ ಸಮಸ್ಯೆ ಯಾಗುವುದನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಚರ್ಚಿಸಲು ಶಾಸಕ ಎಸ್.ಅಂಗಾರರ ನೇತೃತ್ವದಲ್ಲಿ ಇಂದು ಸಭೆ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸುಳ್ಯ ತಹಶೀಲ್ದಾರ್ ಅನಂತಶಂಕರ್, ಇ.ಒ. ಭವಾನಿಶಂಕರ್, ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಎಂ.ಆರ್., ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್.ಐ. ಹರೀಶ್ ಎಂ.ಆರ್., ನ.ಪಂ. ಮುಖ್ಯಾಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ನ.ಪಂ. ಸದಸ್ಯ ವಿನಯ್ ಕಂದಡ್ಕ, ಆರೋಗ್ಯ ಇಲಾಖೆಯ ಆರೋಗ್ಯ ಮಿತ್ರ‌ ಮುರಳಿ ಚೊಕ್ಕಾಡಿ ಇದ್ದರು.

ತಾಲೂಕು ಆಸ್ಪತ್ರೆಯ ಲ್ಲಿ ಕೊರೊನಾ ಸೀಲ್ ಡೌನ್ ಆಗಿರುವುದರಿಂದ‌ ಡಯಾಲಿಸಿಸ್ ರೋಗಿಗಳಿಗೆ ಸಮಸ್ಯೆ ಯಾಗಿದೆ.‌ ಸ್ಥಳೀಯ ಖಾಸಗಿ ಆಸ್ಪತ್ರೆಯ ವರು ಡಯಾಲಿಸಿಸ್ ಮಾಡಲು ಒಪ್ಪುತ್ತಾರೆ. ಆದರೆ ಆ ರೋಗಿಗಳು ಸ್ವಾಬ್ ಟೆಸ್ಟ್ ಆಗಬೇಕೆನ್ನುವ ಕಂಡೀಷನ್ ಇದೆ. ಆದ್ದರಿಂದ ಆ 33 ಡಯಾಲಿಸಿಸ್ ರೋಗಿಗಳ ಸ್ವಾಬ್ ಟೆಸ್ಟ್ ಆಗಬೇಕು. ಅದಕ್ಕೆ ಮೂರ್ನಾಲ್ಕು ದಿನ ಬೇಕಾಗಿದೆ.‌ ಅಲ್ಲಿಯವರೆಗೆ ಸ್ವಲ್ಪ ಸಮಸ್ಯೆ ಯಾಗುತ್ತದೆ ಎಂದು ಡಾ. ಸುಬ್ರಹ್ಮಣ್ಯ ರು ಹೇಳಿದರು. ‌ಬಳಿಕ ಚರ್ಚೆ ನಡೆದು ಶೀಘ್ರವಾಗಿ ಸ್ವಾಬ್ ಟೆಸ್ಟ್ ನಡೆಸಿದ ಬಳಿಕ ಕೊರೊನಾ ವರದಿ ತರಿಸಿಕೊಳ್ಳಲು ಸಭೆ‌ ನಿರ್ಧರಿಸಿತು.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಮಾಡಬಹುದು ಆದರೆ ತಂತ್ರಜ್ಞರು ಬೇಕು ಎಂದು ಆರೋಗ್ಯ‌ಮಿತ್ರ ಮುರಳಿ ಸಲಹೆ ನೀಡಿದಾಗ, ಪುತ್ತೂರು ಆಸ್ಪತ್ರೆಯ ಲ್ಲಿ ತಂತ್ರಜ್ಞರು ಹೆಚ್ಚುವರಿ ಇದ್ದರೆ ಅವರನ್ನು ಇಲ್ಲಿಗೆ ಕರೆಯಿಸಿ ವ್ಯವಸ್ಥೆ ಮಾಡುವ ಬಗ್ಗೆಯೂ ಸಲಹೆಗಳು ಬಂದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.