Breaking News

ಇಸ್ಕಾನ್ ಸಂಸ್ಥೆ ಹಾಗೂ ವಿ.ಹಿಂ. ಪರಿಷತ್ ವತಿಯಿಂದ ಸುಳ್ಯದಲ್ಲಿ ಆಹಾರ ಕಿಟ್ ವಿತರಣೆ

Advt_Headding_Middle
Advt_Headding_Middle

ಬೆಂಗಳೂರಿನ ಇಸ್ಕಾನ್ ಸಂಸ್ಥೆ ಹಾಗೂ ಸುಳ್ಯದ ವಿಶ್ವ ಹಿಂದೂ ಪರಿಷತ್ ಇದರ ಆಶ್ರಯದಲ್ಲಿ ಅಂಗವಿಕಲರಿಗೆ ಫುಡ್ ಕಿಟ್ ವಿತರಣೆ ಇಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.

ಶಾಸಕ ಎಸ್.ಅಂಗಾರರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಸ್ಕಾನ್ ಸಂಸ್ಥೆಯ ಕಾರುಣ್ಯ ಸಾಗರ ದಾಸ ಸ್ವಾಮಿ ಮುಖ್ಯ ಅತಿಥಿಗಳಾಗಿದ್ದು, ಅಕ್ಷಯ ಪಾತ್ರೆಯ ಯೋಜನೆಯ ಕುರಿತು ಮಾತನಾಡಿದರು.


ಸುಳ್ಯ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಪದ್ಮಶ್ರೀ ಪುರಸ್ಕೃತ ಗಿರೀಶ್ ಬಾರಧ್ವಾಜ್ ವೇದಿಕೆಯಲ್ಲಿದ್ದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ| ಕೃಷ್ಣ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ ಹಾಗೂ ಭಜರಂಗ ದಳ ತಾಲೂಕು ಅಧ್ಯಕ್ಷ ನಿಕೇಶ್ ಕುಮಾರ್ ಉಬರಡ್ಕ, ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.


ಸುಳ್ಯ ಹಾಗೂ ಬೆಳ್ಳಾರೆಯಲ್ಲಿ ಒಟ್ಟು ೧೦೦ ಮಂದಿಗೆ ಫುಡ್ ಕಿತ ವಿತರಣೆ ನಡೆಯಿತು. ಭಜರಂಗದಳ ಪ್ರಮುಖ ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.ಕುಂಕುಂ ಸಂಸ್ಥೆಯ ವತಿಯಿಂದ ಮಾಸ್ಕ್ ಕೂಡಾ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.