ಹರಿಹರ ಪಲ್ಲತ್ತಡ್ಕ : ಗುಂಡಿಹಿತ್ಲು ಸೇತುವೆ ಸಂಚಾರಕ್ಕೆ ಮುಕ್ತ

Advt_Headding_Middle
Advt_Headding_Middle


ಕುಂಠುತ್ತಾ ಸಾಗಿದ ಹರಿಹರ ಪಲ್ಲತಡ್ಕ ಗ್ರಾಮದ ಗುಂಡಿಹಿತ್ಲು ಸೇತುವೆ ಕಾಮಗಾರಿ ಇದೀಗ ಪೂರ್ಣಗಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ತೆರೆದುಕೊಂಡಿದೆ.
ಗುಂಡಿಹಿತ್ಲು ಭಾಗದ ಹಲವು ಮನೆಗಳ ಬಹುಕಾಲದ ಬೇಡಿಕೆಯಾಗಿದ್ದು ಏಳು ವರ್ಷಗಳ ಹಿಂದೆ ಕಾಮಾಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾರಣ ಜನ ಅಸಮಾಧಾನ ವ್ಯಕ್ತಪಡಿಸಿದ್ದರು.

ಸೇತುವೆ ಮತ್ತು ಇಕ್ಕೆಲಗಳಲ್ಲಿ ತಡೆಗೂಡೆ ಕಟ್ಟಿ ಮಣ್ಣು ತುಂಬಿಸಲಿದ್ದ ಕಾರಣ ಮೂರು ಪ್ರತ್ಯೇಕ ಅನುದಾನ ಬಳಸಿ ಕೆಲಸ ಮಾಡಲಾಗಿತ್ತು. ಸೇತುವೆ ಕೆಲಸ ಪೂರ್ತಿಯಾಗಿ ಮೂರು ವರ್ಷವಾಗಿದ್ದರೂ ಇತರೇ ಕೆಲಸ ಬಾಕಿಯಾಗಿತ್ತು. ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಬಗ್ಗೆ ಇತ್ತೀಚೆಗೆ ಸುದ್ದಿ ಪತ್ರಿಕೆಯಲ್ಲಿ ವರದಿ ಮಾಡಲಾಗಿದ್ದು, ಈ ವೇಳೆ ಕಾಂಟ್ರಾಕ್ಟರ್ ಮಾಧವ ಚಾಂತಾಳರವರು ವಾರದೊಳಗೆ ಕಾಮಗಾರಿ ಪೂರ್ತಿಗೊಳಿಸುವುದಾಗಿ ತಿಳಿಸಿದ್ದರು. ಅದರಂತೆ ಕಾಮಾಗಾರಿ ಮುಗಿದಿದ್ದು ರಸ್ತೆ ಸಂಚಾರ ಆರಂಭಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.