ಸುಳ್ಯ ಗಾಂಧಿನಗರದಲ್ಲಿ ವಿಜಯ್ ಟ್ರೇಡರ್ಸ್ ಶುಭಾರಂಭ

Advt_Headding_Middle
Advt_Headding_Middle


ಸುಳ್ಯದ ಗಾಂಧಿನಗರ ರಾಮಕೃಷ್ಣ ರೈ ಮಾಲಕತ್ವದ ಆರ್. ಕೆ.ಕಾಂಪ್ಲೆಕ್ಸ್ ನಲ್ಲಿ ಆಲೆಟ್ಟಿಯ ಮೊರಂಗಲ್ಲು ಗೋಪಾಲಕೃಷ್ಣ, ಕೇಶವ ಮತ್ತು ವಿಜಯ್ ರವರ ಪಾಲುದಾರಿಕೆಯ ವಿಜಯ್ ಟ್ರೇಡರ್ಸ್ ದಿನಸಿ ವ್ಯಾಪಾರ ಮಳಿಗೆಯು ಜು. 13 ರಂದು ಶುಭಾರಂಭಗೊಂಡಿತು.
ಪ್ರಾತ:ಕಾಲ ಪುರೋಹಿತರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.

ವ್ಯಾಪಾರ ಮಳಿಗೆಯನ್ನು ಮೊರಂಗಲ್ಲು ಶ್ರೀ ಧೂಮಾವತಿ ಮತ್ತು ಸಪರಿವಾರ ದೈವಸ್ಥಾನದ ಅಧ್ಯಕ್ಷರಾದ ಮೊರಂಗಲ್ಲು ಗುರುಪ್ರಸಾದ್ ರೈ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಮಾಲಕರ ತಾಯಿ ಶ್ರೀಮತಿ ಸುಶೀಲಾ ನಾರಾಯಣ ಮೊರಂಗಲ್ಲು, ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ನೆಟ್ ಕಾಂ, ನ.ಪಂ.ಸದಸ್ಯೆ ಶ್ರೀಮತಿ ಸುಶೀಲಾಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು , ನ.ಪಂ.ಸದಸ್ಯ ವಿನಯ ಕಂದಡ್ಕ, ಕಾಂಪ್ಲೆಕ್ಸ್ ಮಾಲಕರಾದ ನಾರಾಯಣ ರೈ, ರಾಮಕೃಷ್ಣ ರೈ ಗಾಂಧಿ ನಗರ, ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ, ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಚಂದ ಪಾಟಾಳಿ ಕುಡೆಕಲ್ಲು, ಅಧ್ಯಕ್ಷ ರಮೇಶ್ ಇರಂತಮಜಲು, ಉದ್ಯಮಿ ಎಂ.ಬಿ.ಸದಾಶಿವ, ಶ್ರೀನಾಥ್ ಆಲೆಟ್ಟಿ, ಪತ್ರಕರ್ತ ಜೆ.ಕೆ.ರೈ, ಪಯಸ್ವಿನಿ ಎಂಟರ್ ಪ್ರೈಸಸ್ ಮಾಲಕ ಸುಧಾಕರ , ಸಂಜಯ್ ನೆಟ್ಟಾರು ಮತ್ತಿತರರು ಉಪಸ್ಥಿತರಿದ್ದರು.  ಸುದ್ದಿ ಪತ್ರಿಕೆಯ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅವಶ್ಯ ದಿನಸಿ ಆಹಾರ ಸಾಮಾಗ್ರಿಗಳನ್ನು ರಖಂ ಮತ್ತು ಚಿಲ್ಲರೆಯಾಗಿ ಮಿತದರದಲ್ಲಿ ಗ್ರಾಹಕರಿಗೆ ನೀಡಲಾಗುವುದು. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ದಿನಸಿ ಸಾಮಾನುಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಿಕೊಡಲಾಗುವುದು. ಸುಳ್ಯ ನಗರದ 5 ಕಿ.ಮೀ.ವ್ಯಾಪ್ತಿಯಲ್ಲಿ ಡೋರ್ ಡೆಲಿವರಿ ವ್ಯವಸ್ಥೆ ಮಾಡಲಾಗುವುದು ಎಂದು ಮಾಲಕರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.