ಅಕ್ರಮ ದನ ಸಾಗಾಟ : ಬೆನ್ನಟ್ಟಿ ಹಿಡಿದ ಭಜರಂಗದಳದ ಯುವಕರು

Advt_Headding_Middle
Advt_Headding_Middle
Advt_Headding_Middle

ಕೌಡಿಚ್ಚಾರ್‌ನಿಂದ ಸುಳ್ಯಕ್ಕೆ ಪಿಕಪ್‌ನಲ್ಲಿ ಅಕ್ರಮವಾಗಿ ದನ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಭಜರಂಗದಳದ ಯುವಕರು ಕನಕಮಜಲಿನಲ್ಲಿ ಕಾದು ಕುಳಿತು ಪಿಕಪ್‌ನ್ನು ಬೆನ್ನಟ್ಟಿ ಹಿಡಿದ ಘಟನೆ ಇಂದು ನಡೆದಿದೆ.

Advertisement


ಪಿಕಪ್ ವಾಹನ ವೇಗವಾಗಿ ಬರುತ್ತಿದ್ದುದನ್ನು ಕಂಡ ಭಜರಂಗದಳದ ಯುವಕರು ಕನಕಮಜಲಿನಲ್ಲಿ ತಡೆಯಲು ಅಡ್ಡನಿಂತರು. ಆದರೆ ಪಿಕಪ್ ವಾಹನ ಯುವಕರ ಬೈಕ್‌ಗೆ ತಾಗಿಸಿಕೊಂಡು ಮುಂದಕ್ಕೆ ಬಂತು. ಇದನ್ನು ತಾಲೂಕು ಭಜರಂಗದಳದ ಸಂಯೋಜಕ್ ನಿಕೇಶ್ ಉಬರಡ್ಕದವರ ನೇತೃತ್ವದಲ್ಲಿ ಬೆನ್ನಟ್ಟಲಾಯಿತಲ್ಲದೆ ಸುಳ್ಯ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಎಸ್‌ಐ ಎಂ.ಆರ್.ಹರೀಶ್ ಅವರು ತಮ್ಮ ಪೊಲೀಸ್ ತಂಡದೊಂದಿಗೆ ಸುಳ್ಯ ಜ್ಯೋತಿ ಸರ್ಕಲ್ ಬಳಿ ಪಿಕಪ್ ವಾಹನವನ್ನು ಕಾದು ನಿಂತರು. ಆ ವೇಳೆಗೆ ಪಿಕಪ್ ವಾಹನ ವೇಗವಾಗಿ ಬಂತು.

Advertisement ಎಸ್‌ಐಯವರು ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಪಿಕಪ್ ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿದರು. ಆ ವಾಹನದ ಹಿಂದೆ ಭಜರಂಗದಳದ ಯುವಕರ ಮೂರ್‍ನಾಲ್ಕು ಬೈಕ್‌ಗಳು ಇದ್ದವು. ಎಸ್‌ಐಯವರು ಕೂಡಾ ತಮ್ಮ ವಾಹನವನ್ನು ಏರಿ ಪಿಕಪ್ ವಾಹನ ಹಿಡಿಯಲು ಹೊರಟರು.

ಪಿಕಪ್ ವಾಹನ ಸುಳ್ಯ ಮುಖ್ಯರಸ್ತೆಯಿಂದಾಗಿ ಜೂನಿಯರ್ ಕಾಲೇಜು ರಸ್ತೆಯಾಗಿ ಸಾಗಿ ಸರಕಾರಿ ಆಸ್ಪತ್ರೆಗೆ ಬರುವ ಒಳರಸ್ತೆಯಲ್ಲಿ ಬಂತು. ಆ ರಸ್ತೆಯಲ್ಲಿ ಎದುರಿನಿಂದ ೧ ವಾಹನ ಬಂದುದರಿಂದ ದನ ಸಾಗಿಸುತ್ತಿದ್ದ ಪಿಕಪ್ ಚಾಲಕ ತನ್ನ ಗಾಡಿಯನ್ನು ನಿಲ್ಲಿಸಿ ಓಟಕ್ಕಿತ್ತ. ಅವ ಓಡುವುದನ್ನು ಕಂಡ ಭಜರಂಗದಳದ ಯುವಕರು ಅವರು ಕೂಡಾ ಅವನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದರು.

Advertisement

ಪಿಕಪ್ ವಾಹನದಲ್ಲಿ ೨ ದೊಡ್ಡ ಹೋರಿಗಳು ಇದ್ದವು. ಪಿಕಪ್ ವಾಹನ ಚಾಲಕನ್ನು ಸಲಾಂ ಎಂದು ಗುರುತಿಸಲಾಗಿದೆ. ಇದೀಗ ಆತ ಪೊಲೀಸ್ ವಶದಲ್ಲಿದ್ದಾನೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

  1. ಫೈಝಲ್ ಬೆಳ್ಳಾರೆ

    ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿರುವುದೇ ಆದಲ್ಲಿ ಅದನ್ನು ತಡೆಯಲು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಇಲ್ಲಿ ಪೋಲೀಸ್ ವ್ಯವಸ್ಥೆ ಇದೆ. ಯಾರಿಗಾದರೂ ಅದರ ಆಕ್ಷೇಪವಿದ್ದರೆ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬಹುದು. ಅಲ್ಲದೆ 10-15 ಕಿಲೋಮೀಟರ್ ಬೆನ್ನಟ್ಟಿ ರಸ್ತೆಯಲ್ಲಿ ಬೇರಿಕೇಡ್ಅಡ್ಡ ಹಾಕಿ ವಾಹನವನ್ನು ಹಾನಿ ಮಾಡಿ ಹಲ್ಲೆ ಮಾಡುವಂತಹ ಗೂಂಡಾಗಿರಿ ಬಜರಂಗದಳ ಮಾಡಿರುವುದು ಖಂಡನೀಯ. ಮತ್ತು ಇದೇ ರೀತಿ ಅವರ ಗೂಂಡಾಗಿರಿಯನ್ನು ತಡೆಯುವ ಕೆಲಸಕ್ಕೂ ಜನರು ಮುಂದಾದರೆ ಶಾಂತಿವ್ಯವಸ್ಥೆಗೆ ಭಂಗವಾಗಬಹುದು. ಆದುದರಿಂದ ಇಂತಹ ಸಮಾಜಘಾತುಕ ಶಕ್ತಿಯನ್ನು ಮಟ್ಟ ಹಾಕುವುದರೊಂದಿಗೆ. ಕಾನೂನು ಬಾಹಿರ ಚಟುವಟಿಕೆ ಮಾಡುವ ಶಕ್ತಿಗಳ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.