ಕಾಯರ ಜಗನ್ನಾಥ ರಿಗೆ ಎ.ಎಸ್.ಐ. ಆಗಿ ಭಡ್ತಿ

Advt_Headding_Middle
Advt_Headding_Middle

 

ಮರ್ಕಂಜ ಗ್ರಾಮದ ಕಾಯರ ಜಗನ್ನಾಥ ರಿಗೆ ಎಎಸ್ ಐ ಆಗಿ ಭಡ್ತಿದೊರೆತಿದ್ದು ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

1993ರಲ್ಲಿ ಮುಲ್ಕಿ ಪೋಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಪೋಲೀಸ್ ಸೇವೆ ಆರಂಭಿಸಿದ ಇವರು ಬಳಿಕ ಮಂಗಳೂರೊನ ರೇವು, ಕಾವೂರು ಠಾಣೆ, ಸುಳ್ಯದಲ್ಲಿ ಸೇವೆ ಸಲ್ಲಿಸಿದರು. 2012ರಲ್ಲಿ ಸುಳ್ಯದಲ್ಲಿ ಇದ್ದಾಗ ಇವರಿಗೆ ಹೆಡ್ ಕಾನ್ ಸ್ಟೇಬಲ್ ಆಗಿ ಭಡ್ತಿ ದೊರೆತು ಅವರು ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡರು. ಇದೀಗ ಅವರಿಗೆ ಸಹಾಯಕ ಪೋಲೀಸ್ ಉಪ ನಿರೀಕ್ಷಕರಾಗಿ ಭಡ್ತಿ ದೊರೆತಿದ್ದು ಅವರು ಪುತ್ತೂರು ಗ್ರಾಮಾಂತರ (ಸಂಪ್ಯ) ಠಾಣೆ ಬಂದಿದ್ದಾರೆ.

ಮರ್ಕಂಜ ಗ್ರಾಮದ ಕಾಯರ ನಿವಾಸಿಯಾಗಿರುವ ಇವರ ಪತ್ನಿ ಶ್ರೀಮತಿ ಯಮುನಾಕ್ಷಿ ಗೃಹಿಣಿಯಾಗಿದ್ದಾರೆ. ಇವರ ಹಿರಿಯ ಮಗಳು ಶ್ರಾವ್ಯ ಕೆ.ಜೆ. ಐ.ಎ.ಎಸ್. ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದಾರೆ. ಇನ್ನೋರ್ವ ಪುತ್ರಿ ಶ್ರೇಯ ಕೆ.ಜೆ. ಅರಂತೋಡು ಎನ್ನೆಂಪಿಯುಸಿ ಯಲ್ಲಿ ಈ ವರ್ಷ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.