ಮೊಗರ್ಪಣೆ ಸೇತುವೆ ದುರಸ್ತಿ ಪಡಿಸುವಂತೆ ಹೆದ್ದಾರಿ ಅಭಿಯಂತರರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ.ಮನವಿ

Advt_Headding_Middle
Advt_Headding_Middle

 

ಸುಳ್ಯದ ಮೊಗರ್ಪಣೆ ಸೇತುವೆಯ ಎರಡು ಕಡೆಗಳಲ್ಲಿ ಸೇತುವೆಯ ಎಕ್ಸ್ ಪಾನ್ಶನ್ ಜಾಯಿಂಟ್ ಇರುವಲ್ಲಿ ಗುಂಡಿಯಾಗಿದ್ದು,ಇದರಿಂದ ವಾಹನ ಸವಾರರಿಗೆ ತೊಂದರೆ ಮತ್ತು ಸೇತುವೆಗೂ ಅಪಾಯವಾಗುವ ಸಾಧ್ಯತೆಯಿದ್ದುಇದನ್ನು ಶೀಘ್ರವಾಗಿ ದುರಸ್ತಿ ಪಡಿಸಬೇಕೆಂದು ಹೆದ್ದಾರಿ ನಿರ್ವಹಣೆಯ ಅಭಿಯಂತರರಿಗೆ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ.ಮನವಿ ಮಾಡಿದ್ದಾರೆ.


ಮಾಣಿ- ಮೈಸೂರು ಹೆದ್ದಾರಿ ನಿರ್ವಹಣೆಯ ಮುಖ್ಯ ಅಭಿಯಂತರಾದ ಚಂದ್ರಪ್ಪರವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಶಶಿಧರ್ ರವರು ಸೇತುವೆಯ ಮೇಲೆ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರಿಗಾಗುವ ಸಮಸ್ಯೆಗಳನ್ನು ವಿವರಿಸಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಜಿನಿಯರ್ ಒಂದು ವಾರದ ಒಳಗೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಎಂದು ಶಶಿಧರ್ ಎಂ.ಜೆ. ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.