Breaking News

ಸುಳ್ಯದಲ್ಲಿ ಲಾಕ್ ಡೌನ್ ಹಿನ್ನಲೆ : ನಗರ ಪಂಚಾಯತ್ ಸಿಬ್ಬಂದಿಗಳಿಂದ ಅನಧಿಕೃತ ಅಂಗಡಿಗೆ ದಾಳಿ

Advt_Headding_Middle
Advt_Headding_Middle

 

ಲೈಸನ್ಸ್ ರಿನಿವಲ್ ಆಗದ ಅಂಗಡಿಯನ್ನು ಬಂದ್ ಮಾಡಿಸಿದ ನಗರ ಪಂಚಾಯತ್

ಲಾಕ್ ಡೌನ್ ನಿಯಮದಡಿಯಲ್ಲಿ ತೆರೆಯಲು ಅವಕಾಶ ಇಲ್ಲದ ಅಂಗಡಿಗಳನ್ನು ಸುಳ್ಯ ನಗರ ಪಂಚಾಯತ್ ತಂಡ ತೆರಳಿ ಬಂದ್ ಮಾಡಿಸಿದ್ದಾರೆ.
ತೆರೆದ ಕೆಲವು ಅಂಗಡಿಗಳ ಲೈಸನ್ಸನ್ನು ನಗರ ಪಂಚಾಯತ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಗಾಂಧಿನಗರ ಗೋಬ್ಲಲ್ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಯೊಂದರ ಲೈಸನ್ಸ್ ರಿನೀವಲ್ ಆಗದಿರುವುದು ಕಂಡು ಬಂತು. ಲೈಸೆನ್ಸ್‌ನನ್ನು ನಗರ ಪಂಚಾಯತ್‌ನವರು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಅಂಗಡಿಯನ್ನು ಬಂದ್ ಮಾಡಿಸಿದರು. ಅಲ್ಲದೆ ಲಾಕ್ ಡೌನ್ ನಿಯಮದಡಿ ತೆರೆಯಲು ಅವಕಾಶ ಇಲ್ಲದ ಅಂಗಡಿಗಳನ್ನು ಅವರು ಬಂದ್ ಮಾಡಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಆರ್.ಐ ಧನಂಜಯ, ಸಿಬ್ಬಂದಿಗಳಾದ ಶಶಿಕಲಾ, ಲೋಕೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.