ಕವನ : ನಮ್ಮೀ ಜೀವನ

Advt_Headding_Middle
Advt_Headding_Middle

✍️  ರೇಖಾ ಕರ್ಲಪ್ಪಾಡಿ

ಜೀವನವೆನ್ನುವುದು ಕಲ್ಪನೆಗೂ ಮೀರಿದ ತಿರುವುಗಳಿರುವ ಪ್ರಯಾಣ…

ಈ ಕ್ಷಣದಲ್ಲಿ ನಗು ನಲಿವು..
ಮುಂದಿನ ಹೆಜ್ಜೆಯಿಡಲು ಚುಚ್ಚುವುದು
ಮುಳ್ಳು ಮತ್ತೆ ಅಳು ಸಂಕಟ ನೋವು.

ಅಪೇಕ್ಷೆಯಿಲ್ಲದೆ ಮುಂದಡಿ ಇಡು
ಹೂವಾದರೂ ಮುಳ್ಳಾದರೂ
ಎಲ್ಲಕ್ಕೂ ಸಿದ್ಧವಾಗಿರು..
ಮತ್ತದಕೆ ಬಧ್ಧವಾಗಿರು….

ಸಕಲವನ್ನೂ ಕಳೆದುಕೊಂಡು
ಬರಿಗೈಯಲ್ಲಿ, ಬೆತ್ತಲಾಗಿ ನಿಂತಾಗ
ಧರಿಸಿಕೋ ನಂಬಿಕೆಯೆಂಬ ವಸ್ತ್ರವ..
ನಗುವೆಂಬ ಆಭರಣವ..
ಇಷ್ಟೇ ಸಾಕು ಮತ್ತೆ ಮೇಲೇಳಲು
ಧೈರ್ಯದಿಂದ ಕಷ್ಟಗಳ ಎದುರಿಸಲು..

ಕೊನೆಗೊಂದು ಹಾರೈಕೆ
ಸುಖಕರವಾಗಿರಲಿ ನಿನ್ನ ಪ್ರಯಾಣ..
ಮತ್ತೊಂದು ಎಚ್ಚರಿಕೆ..
ಪ್ರತಿ ದಿನ ಸುಖವಾಗಿರಲು ಇದು
ಕಲ್ಪನೆಯ ಇಂದ್ರಲೋಕವಲ್ಲ..
ಭೂಮಿ ಮೇಲಿನ ಸಾಮಾನ್ಯ ಜೀವನ…!!

ರೇಖಾ ಕರ್ಲಪ್ಪಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.