Breaking News

ಗ್ರಾಮೀಣ ಪ್ರದೇಶಗಳಲ್ಲಿ ಆನ್ ಲೈನ್ ಶಿಕ್ಷಣ ಕನಸಿನ ಮಾತು

Advt_Headding_Middle
Advt_Headding_Middle

✍️ ಉಲ್ಲಾಸ್ ಕಜ್ಜೋಡಿ

2020ರ ಈ ವರ್ಷದಲ್ಲಿ ಎಲ್ಲಾ ಸರಿಯಾಗಿದ್ದಿದ್ದರೆ ಮೇ ತಿಂಗಳ ಕೊನೆಯ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಬೇಕಿತ್ತು. ಆದರೆ ಕೊರೋನಾ ಎಂಬ ಮಹಾಮಾರಿಯಿಂದಾಗಿ ಶಾಲಾ-ಕಾಲೇಜುಗಳು ಎಂದಿನಂತೆ ಪ್ರಾರಂಭವಾಗಲಿಲ್ಲ. ಆದರೆ ಸರ್ಕಾರ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ “ಆನ್ ಲೈನ್ ಶಿಕ್ಷಣ” ವನ್ನು ಪ್ರಾರಂಬಿಸಬೇಕೆಂಬ ಯೋಚನೆ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಒಂದು ವೇಳೆ ಸರ್ಕಾರ ಆನ್ ಲೈನ್ ತರಗತಿ ಪ್ರಾರಂಭಿಸಿದರೆ ನಗರಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಏಕೆಂದರೆ ನಗರ ಪ್ರದೇಶದಲ್ಲಿ ಸರಿಯಾದ ನೆಟ್ವರ್ಕ್ ವ್ಯವಸ್ಥೆ ಇರುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇದ್ದರೆ ಮಾತ್ರ ನೆಟ್ವರ್ಕ್ ಇರುತ್ತದೆ. ಒಮ್ಮೊಮ್ಮೆ ವಿದ್ಯುತ್ ಇದ್ದರೂ ನೆಟ್ವರ್ಕ್ ಇರುವುದಿಲ್ಲ. ಸರ್ಕಾರವೇನಾದರೂ ಆನ್ ಲೈನ್ ತರಗತಿ ಪ್ರಾರಂಭಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಗ್ಗೆಯೂ ಕೂಡ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೂ ಆನ್ ಲೈನ್ ತರಗತಿಗಳನ್ನು ನಡೆಸುವುದು ಅನಿವಾರ್ಯವೆಂದಾದರೆ ಮೊದಲು ಗ್ರಾಮೀಣ ಪ್ರದೇಶಗಳಲ್ಲಿನ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸಬೇಕು.
ಒಂದು ವೇಳೆ ಗ್ರಾಮೀಣ ಪ್ರದೇಶದ ನೆಟ್ವರ್ಕ್ ಸಮಸ್ಯೆ ಪರಿಹರಿಸದಿದ್ದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳಿಂದ ವಂಚಿತರಾಗುವುದಂತೂ ಖಂಡಿತಾ.

✍ಉಲ್ಲಾಸ್ ಕಜ್ಜೋಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.