Breaking News

ಮೌಲ್ಯಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು

Advt_Headding_Middle
Advt_Headding_Middle

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಕಲಿಕಾ ಶಕ್ತಿಯನ್ನು ಬೆಳಗಿಸಿ ಅವರ ಬದುಕನ್ನು ಹಸನುಗೊಳಿಸುವ ಮೂಲ ಮತ್ತು ಘನ ಉದ್ದೇಶದಿಂದ ಆಧುನಿಕ ಸುಳ್ಯದ ಅಮರ ಶಿಲ್ಪಿ ಉಜ್ವಲ ವಿದ್ಯಾಮಿಮಾನಿಯಾದ ಪೂಜ್ಯ ಡಾ.ಕುರುಂಜಿ ವೆಂಕಟ್ರಮಣ ಗೌಡರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಸ್ಥಾಪಿಸಿ, ೧೯೭೮ರಲ್ಲಿ ಪ್ರಾರಂಭಿಸಿರುವ ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ೪ ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ.


ಜ್ಞಾನ ಸಂಗ್ರಹದ ಜೊತೆಗೆ ಶಿಸ್ತುಬದ್ಧ, ಸಚ್ಚಾರಿತ್ರ್ಯ, ಸ್ವಾವಲಂಬಿ ವ್ಯಕ್ತಿಗಳನ್ನಾಗಿ ರೂಪಿಸುವ ಧ್ಯೇಯದೊಂದಿಗೆ ಇಲ್ಲಿ ಕಲಿಕೆಗೆ ವಿಫುಲ ಅವಕಾಶಗಳ ಬಾಗಿಲು ತೆರೆದಿದೆ.

ಲಭ್ಯವಿರುವ ಕೋರ್ಸ್‌ಗಳು:
ಕಲಾ ವಿಭಾಗ(ಹೆಚ್.ಇ.ಪಿ.ಎಸ್)
ವಾಣಿಜ್ಯ ವಿಭಾಗ(ಎಸ್.ಇ.ಬಿ.ಎ, ಸಿ.ಇ.ಬಿ.ಎ)
ವಿಜ್ಞಾನ ವಿಭಾಗ(ಪಿ.ಸಿ.ಎಂ.ಬಿ, ಪಿ.ಸಿ.ಎಂ.ಸಿ)
ಭಾಷಾ ವಿಷಯಗಳು:
ಇಂಗ್ಲೀಷ್
ಕನ್ನಡ/ಹಿಂದಿ

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜೆಇಇ, ನೀಟ್, ಸಿ.ಇ.ಟಿ ಮೊದಲಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಆನ್‌ಲೈನ್ ಟೆಸ್ಟ್ ಮೊಡ್ಯುಲ್ (ಪರೀಕ್ಷಾ ಮಾದರಿ ಸರಣಿ)ಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಓರ್ವ ಮೆಂಟರ್(ಮಾರ್ಗದರ್ಶಕರು) ಇದ್ದು ಕಲಿಕಾರ್ಥಿಗೆ ವೈಯುಕ್ತಿಕ ಗಮನವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ದೈನಂದಿನ ಹಾಜರಾತಿ ಹೆತ್ತವರಿಗೆ ತಲುಪುವ ಆಧುನಿಕ ವ್ಯವಸ್ಥೆಯೂ ಇಲ್ಲಿದೆ. ವಿಜ್ಞಾನ ಸಂಘ, ವಾಣಿಜ್ಯ ಸಂಘ, ಮಾನವಿಕ ಸಂಘ, ಸಾಹಿತ್ಯ ಸಂಘಗಳ ಮೂಲಕ ಸೃಜನಶೀಲ ಮನಸ್ಸುಗಳನ್ನು ಅರಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ವಿಜ್ಙಾನ, ವಾಣಿಜ್ಯ ಸಂಘ, ಮಾನವಿಕ ಸಂಘ, ಸಾಹಿತ್ಯ ಸಂಘಗಳ ಮೂಲಕ ಸೃಜನಶೀಲ ಮನಸ್ಸುಗಳನ್ನು ಅರಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಮಾದರಿ ಸ್ಪರ್ಧೆಗಳಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯಮಟ್ಟದ ಸಾಧನೆಗೈಯುತ್ತಾ ಬಂದಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಪಾರಮ್ಯಗೈದಿದ್ದಾರೆ. ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಎನ್‌ಸಿಸಿಗೆ ಸೇರ್ಪಡೆಗೊಳ್ಳಲು ಅವಕಾಶವಿರುವುದು ಮತ್ತೊಂದು ವಿಶೇಷತೆಯಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಬಸ್ ಸೌಲಭ್ಯ, ಹಾಸ್ಟೆಲ್ ವ್ಯವಸ್ಥೆ ಇದೆ. ಮುಖ್ಯವಾಗಿ ಶಿಕ್ಷಣಾರ್ಥಿಗಳ ಉನ್ನತ ಶಿಕ್ಷಣಕ್ಕೆ ಒಂದೇ ಕ್ಯಾಂಪಸ್‌ನಡಿ ಅವಕಾಶಗಳಿದ್ದು ವರದಾನವಾಗಿದೆ. ಕಾಲೇಜಿನಲ್ಲಿ ಪ್ರಶಾಂತ ವಾತಾವರಣ ಸುಸಜ್ಜಿತ ಕಟ್ಟಡ, ಪ್ರಯೋಗಾಲಯಗಳು, ಬೃಹತ್ ಗ್ರಂಥಾಲಯ, ಸುವಿಶಾಲ ಕ್ರೀಡಾಂಗಣ, ಮೊದಲಾದ ಸರ್ವ ಸೌಲಭ್ಯಗಳನ್ನು ಒಳಗೊಂಡಿದೆ.
ಸಂಸ್ಥಾಪಕರ ಕನಸುಗಳನ್ನು ನನಸಾಗಿಸಲು ಅನನ್ಯ ಸೇವಾ ಕಳಕಳಿ ಹೊಂದಿರುವ ಪ್ರಖ್ಯಾತ ವೈದ್ಯರಾದ ಡಾ.ಕೆ.ವಿ.ಚಿದಾನಂದ, ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಶೋಭಾ ಚಿದಾನಂದ ಹಾಗೂ ಆರ್ಕಿಟೆಕ್ಟ್ ಶ್ರೀ ಅಕ್ಷಯ್ ಕೆ.ಸಿ ಅವರು ಹಾಗೂ ಆಡಳಿತ ಮಂಡಳಿಯವರು ಸಂಸ್ಥೆಯನ್ನು ಗುರುತರ ಜವಾಬ್ದಾರಿಯೊಂದಿಗೆ ಮುನ್ನಡೆಸುತ್ತಿದ್ದಾರೆ.
ಸಂಸ್ಥೆಯ ಔನತ್ಯದಲ್ಲಿ ಸದಾ ತೊಡಗಿಸಿಕೊಂಡಿರುವ ಅನುಭವೀ ಪ್ರಾಂಶುಪಾಲರು, ನುರಿತ ಬೋಧಕ-ಬೋಧಕೇತರ ವೃಂದದವರು ಇದ್ದು ಸಂಸ್ಥೆಯ ಪ್ರಗತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಬಾರಿಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ೧೦೦ ಶೇಕಡಾ ಫಲಿತಾಂಶ ಹಾಗೂ ಕಲಾ ವಿಭಾಗದಲ್ಲಿ ೮೬.೭ ಶೇಕಡಾ ಫಲಿತಾಂಶ ದಾಖಲಾಗಿದೆ.
ಸತತವಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿರುವ ಈ ಸಂಸ್ಥೆಯಲ್ಲಿ ಪರಿವರ್ತನಶೀಲವಾದ ಬದುಕಿನ ಸನ್ನಿವೇಶಗಳಿಗೆ ಸ್ಪಂದಿಸುತ್ತಾ ಈ ಕಾಲದ ಸನ್ನಿವೇಷಗಳಿಗೆ ಉತ್ತರ ನೀಡಬಲ್ಲ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ವೈಚಾರಿಕ ಪ್ರಜ್ಞೆ, ವಿಚಾರಶೀಲ ಗುಣಗಳನ್ನು ಹೊಂದುವಂತೆ ನಿರಂತರವಾಗಿ ಆತ್ಮವಿಶ್ವಾಸವನ್ನು ತುಂಬಿ ಪ್ರೇರೇಪಿಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.