ಸುಳ್ಯ ಇನ್ನರ್ ವೀಲ್ ಕ್ಲಬ್ ವತಿಯಿಂದ ಆಂಜನಾದ್ರಿಯಲ್ಲಿ ವನಮಹೋತ್ಸವ

Advt_Headding_Middle
Advt_Headding_Middle

ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ವತಿಯಿಂದ ಅಡ್ಕಾರಿನ ಶ್ರೀ ಆಂಜನಾದ್ರಿ ದೇವಸ್ಥಾನದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಜು. 20ರಂದು ಹಮ್ಮಿಕೊಳ್ಳಲಾಯಿತು.

ವಿವಿಧ ರೀತಿಯ ಸಸಿಗಳನ್ನು ದೇವಸ್ಥಾನದ ಆವರಣದಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವರಾಮ ರೈ, ಅರ್ಚಕರಾದ ಪುರೋಹಿತ ನಾಗರಾಜ ಭಟ್, ಸುಳ್ಯ ಇನ್ನರ್ ವೀಲ್ ಕ್ಲಬ್ಬಿನ ಅಧ್ಯಕ್ಷೆ ಶ್ರೀಮತಿ ಜಯಮಣಿ ಮಾಧವ, ನಿಕಟಪೂರ್ವಾಧ್ಯಕ್ಷೆ ಡಾ ಹರ್ಷಿತ ಪುರುಷೋತ್ತಮ, ಉಪಾಧ್ಯಕ್ಷೆಯರಾದ ಶ್ರೀಮತಿ ಸುಧಾ ಶ್ರೀಧರ್ ಮತ್ತು ಶ್ರೀಮತಿ ಸವಿತಾ ಗಿರೀಶ್, ಶ್ರೀಮತಿ ನಯನ ಹರಿಪ್ರಸಾದ್, ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್, ಶ್ರೀಮತಿ ಕೃಪಾ ಶೇಖರ್ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.