ಯೇನೆಕಲ್ಲು: ಕಾಪುಕಯ ಸಮೀಪ ಮೀನು ಹಿಡಿಯುತ್ತಿದ್ದವರ ಬಂಧನ

Advt_Headding_Middle
Advt_Headding_Middle

 ಯೇನೆಕಲ್ಲಿನ ಕಾಪುಕಯ ಸಮೀಪ ನದಿಯಲ್ಲಿ ಮೀನು ಹಿಡಿಯುತ್ತಿದ್ದವರನ್ನು ಊರವರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಕಾಪುಕಯ ಎಂಬ ಮತ್ಸ್ಯಕ್ಷೇತ್ರವಿದ್ದು, ಈ ಭಾಗದಲ್ಲಿ ದೇವರ ಮೀನುಗಳು ಹೇರಳವಾಗಿದೆ. ಈ ಕ್ಷೇತ್ರದ ಸುತ್ತ ಮುತ್ತಲಿನಲ್ಲಿ ಯಾರು ಮೀನು ಹಿಡಿಯುವುದಿಲ್ಲ.

ಜು.21 ರಂದು ರಾತ್ರಿ ಸವಣೂರಿನವರೆಂದು ಹೇಳಲಾದ 4 ಮಂದಿ ಈ ಭಾಗದಲ್ಲಿ ಮೀನು ಹಿಡಿಯಲು ಬಂದಿದ್ದು ಈ ವಿಚಾರ ಊರಿನವರ ಗಮನಕ್ಕೆ ಬಂದು ಊರವರು ಜಮಾಯಿಸಿ ಮೀನು ಹಿಡಿಯುತ್ತಿದ್ದವರನ್ನು ಹಿಡಿದು ಸುಬ್ರಹ್ಮಣ್ಯ ಪೋಲಿಸರಿಗೆ ವಿಷಯ ಮುಟ್ಟಿಸಿದರು. ಪೋಲಿಸರು ಬಂದು ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.