ಸುದ್ದಿ ಆನ್ ಲೈನ್ ವರದಿ ತಿರುಚಿದ ಕಿಡಿಗೇಡಿಗಳ ವಿರುದ್ಧ ಪೋಲೀಸ್ ದೂರು

Advt_Headding_Middle
Advt_Headding_Middle

 

ಸುದ್ದಿ ಆನ್ ಲೈನ್ ನಲ್ಲಿ ಪ್ರಕಟವಾದ ವರದಿಯೊಂದರ ಹೆಡ್ಡಿಂಗ್ ಗೆ ತಮಗೆ ಬೇಕಾದುದನ್ನು ಸೇರಿಸಿ ಫಾರ್ವರ್ಡ್ ಮಾಡತೊಡಗಿದ ಕಿಡಿಗೇಡಿತನದ ವಿರುದ್ಧ ಸುದ್ದಿಯ ವತಿಯಿಂದ ಪೋಲೀಸ್ ದೂರು ನೀಡಲಾಗಿದೆ.
ಸುದ್ದಿ ಆನ್ ಲೈನ್ ನಲ್ಲಿ ಪೆರುವಾಜೆಯಲ್ಲಾದ ಘಟನೆಯೊಂದರ ಬಗ್ಗೆ ವರದಿ ನೀಡಲಾಗಿತ್ತು. ಆ ವರದಿಯಲ್ಲಿ ವ್ಯಕ್ತಿಯ ಹೆಸರಾಗಲೀ, ಸಂಘಟನೆಯ ಹೆಸರಾಗಲೀ ಇರಲಿಲ್ಲ. ಮರುದಿನ ಆ ವರದಿಯ ಹೆಡ್ಡಿಂಗನ್ನು ಎಡಿಟ್ ಮಾಡಿ ತಮಗೆ ಬೇಕಾದಂತೆ ಹೆಸರು ಮತ್ತು ಸಂಘಟನೆಯ ಹೆಸರು ಸೇರಿಸಿ ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟರು. ಇದನ್ನು ನೋಡುವಾಗ ಸುದ್ದಿ ಆನ್ ಲೈನ್ ನಲ್ಲೇ ಆ ರೀತಿ ವರದಿ ಬಂದಿರುವಂತೆ ಕಾಣುತ್ತಿತ್ತು. ಈ ಕಿಡಿಗೇಡಿತನದ ಕೃತ್ಯದ ವಿರುದ್ಧ ಇದೀಗ ಸುದ್ದಿ ಸಂಸ್ಥೆಯ ವತಿಯಿಂದ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ರವರು ಪೋಲೀಸ್ ದೂರು ನೀಡಿದ್ದು , ಆ ರೀತಿ ಎಡಿಟ್ ಮಾಡಿದವರ ಹಾಗೂ ಅದನ್ನು ಫಾರ್ವರ್ಡ್ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ದೂರು ಸ್ವೀಕರಿಸಿರುವ ಸುಳ್ಯ ಪೋಲೀಸರು ವಿಚಾರಣೆ ಆರಂಭಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.