ತುದಿಯಡ್ಕ ಭಾಗದ ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ -ಅಪಾರ ಕೃಷಿ ನಾಶ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ತುದಿಯಡ್ಕ ಗಿರಿಜಾ ಶಂಕರ ಮತ್ತು ರೋಶನ್ ಎಂಬವರ ತೋಟಕ್ಕೆ ಜು.22 ರಂದು ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.

ಅರ್ಬದ ಗುಡ್ಡೆ ಎಂಬಲ್ಲಿ ಬೀಡು ಬಿಟ್ಟಿದ್ದ ಆನೆಗಳು ತಡರಾತ್ರಿ ಸಂಚರಿಸಲು ಪ್ರಾರಂಭಿಸಿ ತೋಟಕ್ಕೆ ನುಗ್ಗಿ ಕೃಷಿಯನ್ನು ನಾಶಪಡಿಸಿದೆ.

ಕಳೆದ ವಾರವಷ್ಟೇ ಕೋಲ್ಚಾರು ಕೊಯಿಂಗಾಜೆ ಭಾಗದ ಕೃಷಿ ತೋಟಕ್ಕೆ ದಾಳಿ ನಡೆಸಿದ ಆನೆಗಳನ್ನು ಈ ಭಾಗದ ಜನರು ಒಟ್ಟು ಸೇರಿ ಅಲ್ಲಿಂದ ಕಾಡಿಗೆ ಓಡಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಒಂದು ಕಡೆ ಕೊರೊನಾ ಬಾಧೆಯಾದರೆ ಮತ್ತೊಂದೆಡೆ ಆನೆಗಳ ಉಪಟಳದಿಂದ ಆಲೆಟ್ಟಿ ಗ್ರಾಮದ ರೈತರು ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.