ಪಂಜ : ಆಡಳಿತಾಧಿಕಾರಿಗಳ ನೆರವಿನಿಂದ ಮಹಿಳೆಗೆ ಮನೆ ನಿರ್ಮಾಣ

Advt_Headding_Middle
Advt_Headding_Middle

ಪಂಜದ ನಾಯರ್‌ಕೆರೆ ಎಂಬಲ್ಲಿ ಮಹಿಳೆಯೊಬ್ಬರಿಗೆ ಅಧಿಕಾರಿಗಳ ನೆರವಿನಿಂದ ಮನೆ ನಿರ್ಮಾಣವಾಗಿದೆ.
ಇಲ್ಲಿನ ಚಂದ್ರಾವತಿ ಎಂಬವರು ಮನೆಯವರೊಂದಿಗೆ ಬೆರೆಯದೇ ಜೋಪಡಿಯಲ್ಲಿ ವಾಸವಾಗಿದ್ದರು. ಮಳೆಗಾಲದಲ್ಲಿ ಸಂಕಷ್ಟದಲ್ಲಿ ದಿನಕಳೆಯುತ್ತಿದ್ದರು.

ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್‌ರವರು ಅವರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿ, ನಿಮಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಲು ನೆರವಾಗುತ್ತೇವೆ ಎಂದರು.

ಇದಕ್ಕೆ ಚಂದ್ರಾವತಿಯವರು ಒಪ್ಪಿದರು. ಬಳಿಕ ಕಾನತ್ತೂರ್‌ರವರು ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನರವರಿಗೆ ತಿಳಿಸಿದರು. ಅವರು ಕೂಡಾ ಬಂದು ಮಹಿಳೆಯೊಂದಿಗೆ ಮಾತನಾಡಿ ಮನೆ ಕಟ್ಟಲು ಸ್ಥಳ ನೋಡಿದರು. ಇದೀಗ ಮನೆ ನಿರ್ಮಾಣಗೊಂಡಿದ್ದು, ಇಂದು ನೂತನ ಮನೆಯ ಪ್ರವೇಶವು ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗಿತು. ಅರ್ಚಕ ನಾಗರಾಜ ಹೆಗ್ಡೆಯವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.