ಕೊರೊನಾ ತಡೆ ವಿಚಾರದಲ್ಲಿ ಪಂಚಾಯತ್ ಅಧಿಕಾರಿಗಳ ಉದಾಸೀನತೆ : ಎಂ.ವಿ.ಜಿ. ಆರೋಪ

Advt_Headding_Middle
Advt_Headding_Middle

 

ನಗರ ವ್ಯಾಪ್ತಿಯಲ್ಲಿ ಕೊರೊನಾ ತಡೆಗೆ ಚರ್ಚೆ ನಡೆಸಲು ಸಭೆ ನಡೆಸುವಂತೆ ಅಧಿಕಾರಿಗಳನ್ನು ಕೇಳಿಕೊಂಡರೆ ಅವರು ಉದಾಸೀನತೆ ತೋರುತ್ತಿದ್ದಾರೆ.‌ ಇದು ಸರಿಯಾದ ಕ್ರಮವಲ್ಲ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಜು.20ರಂದು ಸುಳ್ಯ ನ.ಪಂ.ನಲ್ಲಿ ಕೊರೊನಾ ತಡೆ ಟಾಸ್ಕ್ ಫೋರ್ಸ್ ಸಮಿತಿ ಮಾಡುವ ಹಾಗೂ ಇತರ ವಿಚಾರದಲ್ಲಿ ಟ್ರೈನಿಂಗ್ ಇಟ್ಟುಕೊಂಡಿದ್ದರು. ಆ ಟ್ರೈನಿಂಗ್ ನಡೆದ ಬಳಿಕ ಸಭೆ ನಡೆಸಲಾಯಿತು. ಸಭೆ ನಡೆಸಿದ ಬಳಿಕ ಮರುದಿನವೇ ಕೊರೊನಾ ತಡೆ ವಿಚಾರದಲ್ಲಿ ಚರ್ಚೆ ನಡೆಸಲು ಸಭೆ ನಡೆಸುವಂತೆ ಹೇಳಿದ್ದರೂ ಅಧಿಕಾರಿಗಳು ಉದಾಸೀನತೆ ತೋರುತ್ತಿದ್ದಾರೆ ಎಂದು ಹೇಳಿದ ಅವರು ನಾವು ಜನರ ಹಿತದೃಷ್ಟಿಯಿಂದ ಸಭೆ ನಡೆಸಲು ಹೇಳಿದ್ದೇವೆ ಎಂದು ಅವರು ಹೇಳಿದರು.

Advertisement

ಕೊರೊನಾ ನಿರ್ವಹಣೆ ಅನುದಾನ ಮಾಹಿತಿ ಬೇಕು

ಕೊರೊನಾ ನಿಯಂತ್ರಣ ಕ್ಕೆ ಸರಕಾರ ಪ್ರತೀ ಪಂಚಾಯತ್ ಗೆ ಅನುದಾನ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಇದೆ. ಆದರೆ ಪಂಚಾಯತ್ ಗೆ ಸರಕಾರದಿಂದ ಅನುದಾನವೇ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಅಧಿಕಾರಗಳ ಮಾತನ್ನು ನಂಬಬೇಕೊ ಅಥವಾ ಸರಕಾರದ ಮಾತನ್ನು ನಂಬಬೇಕೊ ಗೊತ್ತಿಲ್ಲ. ಆದ್ದರಿಂದ ಈ ಕೊರೊನಾ ಕಾಲ ಘಟ್ಟದಲ್ಲಿ ತಾಲೂಕಿಗೆ ಕೊರೊನಾ ತಡೆಗೆ ಎಷ್ಟು ಅನುದಾನ ಬಂದಿದೆ. ಮತ್ತು ಪಿಪಿಇ ಕಿಟ್ ಯಾರಿಗೆಲ್ಲ ಕೊಡಲಾಗಿದೆ. ಯಾವುದಕ್ಕೆಲ್ಲ ಎಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕ ನಮಗೆ ಬೇಕಾಗಿದೆ. ಆ ಲೆಕ್ಕಾಚಾರ ಇಲಾಖೆ ನೀಡಲು ನಾವು ಲಿಖಿತ ಅರ್ಜಿ ನೀಡುತ್ತಿದ್ದೇವೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.