ವಸತಿ ಯೋಜನೆ : ಮನೆ ಪಂಚಾಂಗ ಮಾಡಿದವರಿಗೆ ಅನುದಾನ ಬಿಡುಗಡೆಗೆ ಜಿ.ಕೆ.ಹಮೀದ್ ಒತ್ತಾಯ

Advt_Headding_Middle
Advt_Headding_Middle

 

ಶಾಸಕರು ಸರಕಾರದ ಗಮನ ಸೆಳೆದು ಹಣ ಬಿಡುಗಡೆಗೆ ಪ್ರಯತ್ನಿಸಲಿ

ವಸತಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಮನೆ ಪಂಚಾಂಗ ಆಗಿದ್ದರೂ ಇನ್ನೂ ಹಣ ಬಿಡುಗಡೆ ಯಾಗಿಲ್ಲ. ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆಗೊಳಿಸುವಂತೆ ಸಂಪಾಜೆ ಗ್ರಾ.ಪಂ. ಮಾಜಿ. ಅಧ್ಯಕ್ಷ ಜಿ.ಕೆ. ಹಮೀದ್ ಒತ್ತಾಯಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಂಜೂರಾತಿ ಆಗಿ ಕೆಲಸ ಮಾಡದೆ ಬಾಕಿಯಾದ ಮನೆಗಳಿಗೆ ಕೆಲವು ತಿಂಗಳ ಹಿಂದೆ ಲಾಕ್ ತೆರವುಗೊಳಿಸಿ ಆದೇಶ ಮಾಡಿದ್ದು ಈ ಸಂದರ್ಭ ತಾಲೂಕಿನ ಹಲವು ಕಡೆ 30 ಕ್ಕೂ ಹೆಚ್ಚು ಮನೆ ನಿರ್ಮಾಣ ಅಗಿದ್ದು ಸಂಪಾಜೆ ಗ್ರಾಮದಲ್ಲೂ 6 ಬಡವರು ಹೊಸದಾಗಿ ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿ ತಿಂಗಳು ಕಳೆದರೂ ಹಣ ಬಿಡುಗಡೆ ಆಗಿಲ್ಲ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಸಾಲ ಮಾಡಿ ಮನೆ ಪಂಚಾಂಗ ಮಾಡಿದವರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಹಾಗೂ ಕಳೆದ 2018 – 19 ನೇ ಸಾಲಿನಲ್ಲಿ ಯಾವುದೇ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರಾತಿ ಇಲ್ಲ 2020-21 ನೇ ಸಾಲಿಗೆ ಅನುದಾನ ಇಲ್ಲ ದಿನ ಬೆಳಗಾದರೆ ಕೋಟಿ ಕೋಟಿ ಆಶ್ವಾಸನೆಯನ್ನು ನೀಡುವ ಜನಪ್ರತಿನಿಧಿಗಳು ಅದಕ್ಕೆ ಸಾಥ್ ಕೊಡುವ ಅಧಿಕಾರಿಗಳು ಕೂಡಲೇ ಅನುದಾನ ನೀಡಬೇಕು. ಸ್ಥಳೀಯ ಶಾಸಕರು ಕೂಡಲೇ ವಸತಿ ಸಚಿವರ ಗಮನಕ್ಕೆ ತಂದು ಈಗಾಗಲೇ ಪಂಚಾಂಗ ಮಾಡಿರುವ ಬಡವರ ಮನೆಗಳಿಗೆ ಅನುದಾನವನ್ನು ಬಿಡುಗಡೆ ಗೊಳಿಸಿ ಹಾಗು 2 ವರ್ಷ ಗಳಿಂದ ಯಾವುದೇ ಯೋಜನೆಯ ಮನೆಗಳು ಮಂಜೂರಾತಿ ಆಗಿಲ್ಲ ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸರಕಾರದ ಮಟ್ಟದಿಂದ ಮಂಜೂರಾತಿ ಮಾಡಿಸಿಕೊಡಬೇಕಾಗಿ ಆಗ್ರಹಿಸುತ್ತೇವೆ. ತಾಲ್ಲೂಕಿನ ಆಡಳಿತ ಮನೆ ಪಂಚಾಂಗ ಮಾಡಿಸಲು ಹಾಕಿದ ಒತ್ತಡ ಪಂಚಾಂಗ ಅದ ಮೇಲೆ ಹಣ ಬಿಡುಗಡೆ ಮಾಡುವಲ್ಲಿ ತೋರಿಸಬೇಕು. ಬಡವರು ಚಿನ್ನ ಅಡವಿಟ್ಟು ,ಬ್ಯಾಂಕ್ ಗಳಿಂದ ಸಾಲ ಪಡೆದು ಪಂಚಾಂಗ ಹಾಕಿರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ ಅನುದಾನ ಈ ಕೂಡಲೇ ಬಿಡುಗಡೆ ಗೊಳಿಸುವರೆ ಅಧಿಕಾರಿಗಳಲ್ಲಿ ಅಗ್ರಹಿಸುತ್ತಿರುವುದಾಗಿ ಜಿ. ಕೆ. ಹಮೀದ್ ಗೂನಡ್ಕ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.