Breaking News

ನಿರಾಶ್ರಿತ ಬಡ ವ್ಯಕ್ತಿಗೆ ತಾತ್ಕಾಲಿಕ ಶೆಡ್ ನಿರ್ಮಾಣ- ಭಜರಂಗದಳ ಕಾರ್ಯಕರ್ತರಿಂದ ನಿಸ್ವಾರ್ಥ ಸೇವೆ

Advt_Headding_Middle
Advt_Headding_Middle

 

ಸುಳ್ಯ ಜಯನಗರ ನಿವಾಸಿ ಪದ್ಮನಾಭ ಯಾನೆ ಪಲ್ಟಿ ಪದ್ಮ ಎಂಬ ಬಡ ಕೂಲಿ ಕಾರ್ಮಿಕ ಜಯನಗರದ ಹೊಸಗದ್ದೆ ಎಂಬಲ್ಲಿ ವಾಸವಾಗಿದ್ದ ಮನೆಯು ವ್ಯಾಪಕ ಗಾಳಿ ಮಳೆಗೆ ಕುಸಿದು ಹೋಗಿತ್ತು.

ಈ ಬಡಪಾಯಿ ವ್ಯಕ್ತಿಯು ಸೂರಿಲ್ಲದೆ ಜಯನಗರ , ಹಳೆಗೇಟು ಮುಂತಾದ ಬಸ್ ತಂಗುದಾಣಗಳಲ್ಲಿ ಮಲಗಿ ಕಾಲ ಕಳೆಯುತ್ತಿರುವುದನ್ನು ಗಮನಿಸಿದ ಹಳೆಗೇಟು, ಜಯನಗರ, ಕುದ್ಪಾಜೆ ಪರಿಸರದ ಭಜರಂಗದಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ನಗದು ಸಂಗ್ರಹಿಸಿ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಬೇಕಾದ ಸಾಮಾನುಗಳನ್ನು ಖರೀದಿಸಿ ತಂದು ಒಂದು ದಿನದ ಶ್ರಮದಾನ ಮಾಡುವ ಮೂಲಕ ಒಂದು ತಾತ್ಕಾಲಿಕ ಸೂರು ಒದಗಿಸಿಕೊಟ್ಟಿದ್ದಾರೆ.ಭಜರಂಗದಳದ ಸದಸ್ಯರುಗಳಾದ ಸಚಿನ್ ಕೋಯಿಂಗೋಡಿ, ಕ್ರೇನ್ ಹರೀಶ್, ಗೋಪಾಲ್, ನವೀನ್ ಅಡ್ಕಾರ್, ಕರುಣೇಶ, ನಂದನ್ ಮತ್ತಿತರರು ಈ ಸಮಾಜಮುಖಿ ಕಾರ್ಯದ ನೇತೃತ್ವ ವಹಿಸಿದ್ದರು .

ಮುಂದಿನ ದಿನಗಳಲ್ಲಿ ನಿರಾಶ್ರಿತ ಈ ವ್ಯಕ್ತಿಗೆ
ಶಾಶ್ವತ ಸೂರು ಒದಗಿಸುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು .ಭಜರಂಗದಳದ ಕಾರ್ಯಕರ್ತರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.