Breaking News

ಆಟಿ ಆಚರಣೆ ವಿಶೇಷತೆ

Advt_Headding_Middle
Advt_Headding_Middle

ಸಂಗ್ರಹ : ಧನ್ಯಶ್ರೀ. ಎ.

                                                                   ತುಳು ನಾಡಿನ ವರ್ಷಗಳ ಹನ್ನೆರಡು ತಿಂಗಳನ್ನು ತುಳು ಭಾಷೆಯಲ್ಲಿ ಪಗ್ಗೂ, ಬೇಸ, ಕಾರ್ತೆಲ್, ಆಟಿ, ಸೋನಾ, ನಿರ್ನಾಲ, ಬೊಂತೆಲ್, ಜಾರ್ತೆ, ಪೇರಾರ್ತೆ, ಪೊನ್ನಿ, ಮಾಯಿ, ಸುಗ್ಗಿ ಹೀಗೆ ಕರೆಯುತ್ತಾರೆ. ಈ ನಾಲ್ಕನೇ ತಿಂಗಳು ಅಂದರೆ ಜುಲೈ ತಿಂಗಳ ಸಂಕ್ರಾಂತಿ ಕಳೆದು ಆಗಸ್ಟ್ ತಿಂಗಳ 16 ರವರೆಗೆ ಆಟಿ ತಿಂಗಳು ಎಂದು ಕರೆಯುತ್ತಾರೆ..

ಈ ತಿಂಗಳನ್ನು ಹಿಂದಿನ ಕಾಲದಲ್ಲಿ ತುಳುವರು ಬಹಳಷ್ಟು ಕಠಿಣ ತಿಂಗಳು ಎಂದು ಕರೆಯುತ್ತಾರೆ. ಆಟಿ ತಿಂಗಳಲ್ಲಿ ಪುಷ್ಯ, ಆಶ್ಲೇಷ, ಮೇಷ ಈ ಮೂರು ನಕ್ಷತ್ರಗಳು ಅತೀ ಹೆಚ್ಚು ಮಳೆ ಸುರಿಸುವ ನಕ್ಷತ್ರ ಎಂದು ಕರೆಯುತ್ತಾರೆ..

ಅದಲ್ಲದೆ ತುಳುನಾಡಿನ ರೈತರಿಗೆ ಬಹಳಷ್ಟು ಕಠಿಣ ತಿಂಗಳು ಹಾಗೂ ತುಳುನಾಡಿನ  ರೈತರು ಕೃಷಿ ಚುವಟಿಕೆ ಮುಗಿಸಿ ಎತ್ತು ಹಾಗೂ ದನಗಳನ್ನು ಸಾಕಿಕೊಂಡು ವಿಶ್ರಾಂತಿಯಲ್ಲಿ ಇರುವ ತಿಂಗಳು..

ಈ ತಿಂಗಳಲ್ಲಿ ಬತ್ತ ನಾಟಿ ಇರುತ್ತದೆ ಇತರ ಫಲ ವಸ್ತು ತೆಂಗು,ಅಡಿಕೆ , ಬಾಲೆ ಗಿಡಗಳನ್ನು ನೆಡುವುದು ನಿಷೇಧ ವಾಗಿರುತ್ತದೆ ..  ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ತವರು ಮನೆಗೆ ಕರೆದು ಕೊಂಡು ಬರುವುದು ಹಾಗೂ ತನ್ನ ಸೊಸೆಯನ್ನು ತವರು ಮನೆಗೆ ಕಳುಹಿಸುವ ಪದ್ಧತಿ. ಇವರಿಗೆ ನಾಟಿ ಕೋಳಿ ಸಾರು ಮಾಡುತ್ತಾರೆ..ತುಳುನಾಡಿನ ಭಾಷೆಯಲ್ಲಿ ಆಟಿ ತಮ್ಮಣ ಏರ್ಪಡಿಸುವ ಪದ್ಧತಿ ತುಳು ಭಾಷೆಯಲ್ಲಿ (ಆಟಿ ಕುಳ್ಳುಣ) ಪದ್ಧತಿ ಎಂದು ಕರೆಯುತ್ತಾರೆ.. ಕೆಲವು ಕಡೆ ಈಗಲೂ ಈ ಪದ್ಧತಿ ಇದೆ..                      ಆಟಿ ತಿಂಗಳ ಆರಂಭದಲ್ಲಿ ಮನೆ ಮನೆಗೆ ತೆರಳಿ ತನ್ನ ನರ್ತನದ ಮೂಲಕ ತೋರಿಸುತ್ತಿದ್ದ ಆಟಿ ಕಳೆಂಜರು ಬರುತ್ತಿದ್ದರು .. ಈಗೆಲ್ಲಾ ಈ ಪದ್ಧತಿ ಮರೆಯಂಚಿನಲಿ ಸಾಗುತ್ತಿದೆ..                                      ತುಳು ತಿಂಗಳ ಆಟಿಯಲ್ಲಿ ಬರುವ ಮೊದಲ ಹಬ್ಬ ಆಟಿ ಅಮಾವಾಸ್ಯೆ . ತುಳುವರಿಗೆ ಆ ದಿನ ಸಂತಸದ ದಿನ ಎಂದರು ತಪ್ಪಿಲ್ಲ.. ಅಮಾವಾಸ್ಯೆ ಹಿಂದಿನ ದಿನ ಮನೆಯ ಹಿರಿಯರು ತೆರಳಿ ಹಾಳೆ ಮರಕ್ಕೆ ನೂಲು ಕಟ್ಟಿ ನಾಳೆ ಬರುತ್ತೇನೆ ಮದ್ದು ಸಿದ್ದ ಮಾಡಿ ಇಡು  ಎಂದು ವನ ದೇವತೆಯಲ್ಲಿ ಪ್ರಾರ್ಥನೆ ಮಾಡಿ ಬರುವುದು.. ನಂತರ ಮರುದಿನ ಮುಂಜಾನೆ ನಸುಕಿನ ವೇಳೆ ಕೋಳಿ ಕೂಗುವ ಮೊದಲು ಹಾಳೆಯ ಮರದ ( ಪಾಳೆದ ಮರ) ಬಳಿ ತೆರಳಿ ಕಲ್ಲಿನ ಮೂಲಕ ಹಾಳೆಯ ಮರದ ತೊಗಟೆಯ ಕೆತ್ತೆಯನ್ನು ಜಜ್ಜಿ ಮನೆಗೆ ತಂದು ಅರೆಯುವ ಕಲ್ಲಿನಲ್ಲಿ ಮರದ ಕೆತ್ತೆಯೊಂದಿಗೆ   ಶುಂಠಿ, ಬೆಳ್ಳುಳ್ಳಿ, ಜೀರಿಗೆ ಹಾಕಿ ಅರೆದು ಅದರ ರಸವನ್ನು ಬೆಳಿಗ್ಗೆ ಮನೆಯವರೆಲ್ಲ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಪದ್ಧತಿ ಇದೆ. ಈಗ ಈ ಪದ್ಧತಿ ಕಣ್ಮರೆಯಾಗಿದೆ..                                    ಅಮಾವಾಸ್ಯೆ ದಿನ ಹಾಳೆಯ ಮರಕ್ಕೆ ಒಂದು ಸಾವಿರ ಮದ್ದಿನ  ಗುಣ ಇರುತ್ತದೆ ಎಂದು ನಂಬಿಕೆ.. ಈ ರಸವನ್ನು ಕುಡಿದರೆ ಒಂದು ವರ್ಷಗಳ ಕಾಲ ಯಾವುದೇ ರೋಗ ರುಜಿನ ಗಳು ಬರುವುದಿಲ್ಲ ಎಂದು ಹಿರಿಯರ ಮಾತು..                            ತೀರ್ಥಸ್ನಾನ ದೇವಾಲಯ ಗಳು     ಉಪ್ಪಿನಂಗಡಿ, ಸಹಸ್ರ ಲಿಂಗೇಶ್ವರ ದೇವಾಲಯ, ನರಹರಿ ಪರ್ವತ, ಕಾರಿಂಜ , ಧರ್ಮಸ್ಥಳ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಬೇಟಿ ಕೊಟ್ಟು ದವಸ ಧಾನ್ಯ ಗಳನ್ನೂ ತರ್ಪಣ ಬಿಟ್ಟು ಮನೆಗೆ ಬಂದು ಮನೆಯಲ್ಲಿ ಪತ್ರೊಡೆ ( ಕೆಸುವಿನ ಎಳೆಯಿಂದ ಮಾಡಿದ ಒಂದು ತಿಂಡಿ) ಸೇವಿಸುವುದು ..                              ಆ ದಿನ ತುಳುವರ ಮನೆಯಲ್ಲಿ ಹೆಚ್ಚಾಗಿ ಮಾಂಸದ ಅಡುಗೆ ಮಾಡುವ ಪದ್ಧತಿಗಳು ಇದೆ. ಈ ಎಲ್ಲಾ ಆಚರಣೆಗಳು ತುಳುನಾಡಿನಲ್ಲಿ ಮಾತ್ರ ನೋಡಲು ಸಾಧ್ಯ..                 ಇತ್ತೀಚಿನ ಈ   ರೀತಿಯ ಪದ್ಧತಿ ಯಾನ್ನು ಕೆಲವು ಸಂಘ ಸಂಸ್ಥೆಗಳು ಮತ್ತು ಶಾಲೆಗಳಲ್ಲಿ “ಆಟಿಡೋ 0ಜಿದಿನ”  ಎನ್ನುವಂತಹ ಕಾರ್ಯಕ್ರಮಗಳನ್ನೂ      ಮಾಡಿ ತೋರಿಸಿ ಕೊಡುತ್ತಾರೆ..                             ಹಿರಿಯರು ನಡೆಸಿ ಬಂದಂತ ಹ  ಹಲವು ಕಾರ್ಯಕ್ರಮ ಗಳೆಲ್ಲ  ತೆರೆಮರೆಗೆ ಹೋಗುತ್ತಿದ್ದು ಮುಂದಿನ ತಲೆಮಾರಿಗೆ ಕಣ್ಮರೆಯಾಗತ್ತಿರುವುದರಲ್ಲಿ ಸಂಶಯವಿಲ್ಲ…

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.