ನೀಲೇಶ್ವರ ಲೈಂಗಿಕ ದೌರ್ಜನ್ಯ ಆರೋಪಿ ವಿರುದ್ದ ಜಮಾಅತ್ ನಿಂದ ಶಿಸ್ತು ಕ್ರಮ

Advt_Headding_Middle
Advt_Headding_Middle

ಸ್ವಂತ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಆರೋಪಕ್ಕೆ ಒಳಗಾಗಿ ಬಂಧಿತರಾಗಿರುವ ನೀಲೇಶ್ವರದ ಮದ್ರಸಾ ಅಧ್ಯಾಪಕನ ಗೂನಡ್ಕ ಜಮಾಅತ್ ಸದಸ್ಯತ್ವವನ್ನು ವಜಾಗೊಳಿಸಿದೆ.

ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಕಾರ್ಯವ್ಯಾಪ್ತಿಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದ ಅಬೂಬಕ್ಕರ್ ಮುಸ್ಲಿಯಾರ್ ಎಂಬ ವ್ಯಕ್ತಿಯು ಕೇರಳ ಕರ್ನಾಟಕದ ಕೆಲವು ಭಾಗಗಳಲ್ಲಿ ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು
ಇವರು ಅನೇಕ ಕಡೆಗಳಲ್ಲಿ ವಿವಿದ ಪ್ರಕರಣಗಳಲ್ಲಿ ಪೋಲಿಸರಿಗೆ ಸಿಕ್ಕಿ ಬಿದ್ದು ಜೈಲು ಶಿಕ್ಷೆಯನ್ನು ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದು, ಇದೀಗ ಮತ್ತೊಮ್ಮೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿ ಪೊಲೀಸರ ಅತಿಥಿಯಾದ ವಿಷಯ ವಾರ್ತಾ ಮಾಧ್ಯಮಗಳ ಮುಖಾಂತರ ತಿಳಿದು ಬಂದಿರುತ್ತದೆ.
“ಇದು ಸಮುದಾಯದ ಗೌರವಕ್ಕೆ ಮತ್ತು ನಾಡಿನ ಘನತೆಗೆ ದಕ್ಕೆಯಾದ ವಿಚಾರವಾದುದರಿಂದ ಜಮಾಅತ್ ಆಡಳಿತ ಮಂಡಳಿಯು ತುರ್ತಾಗಿ ಆನ್ಲೈನ್ ಮುಖಾಂತರ ಸಭೆ ನಡೆಸಿ ಸದ್ರಿ ವ್ಯಕ್ತಿಯನ್ನು ಜಮಾಅತ್ ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ” ಎಂದು ಗೂನಡ್ಕ ಜಮಾಅತ್ ತಿಳಿಸಿದೆ.

ಆರೋಪಿಯು ಹಲವಾರು ವರ್ಷಗಳಿಂದ ಅಪರೂಪವಾಗಿ ಮಾತ್ರ ಮನೆಗೆ ಭೇಟಿ ನೀಡುತ್ತಿದ್ದು, ಇವರ ಮೊದಲನೇ ಪತ್ನಿ ಮತ್ತು ಮಕ್ಕಳು ಗೂನಡ್ಕ ಜಮಾಅತ್ ಕಾರ್ಯ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಜಮಾಅತ್ ಸದಸ್ಯತ್ವ ಇವರ ಹೆಸರಲ್ಲಿ ಇರುವುದರಿಂದ ಅವರು ಮಾಡಿರುವ ಹೀನ ಕೃತ್ಯವನ್ನು ಜಮಾಅತ್ ಕಮಿಟಿಯು ಮತ್ತು ಕುಟುಂಬಸ್ಥರು ಬಹಳ ಗಂಭೀರ ವಾಗಿ ಪರಿಗಣಿಸಿದೆ.
ಇವರು ಒಬ್ಬ ಮುಸ್ಲಿಯಾರ್ ಆಗಿದ್ದು, ಇಂತಹ ನೀಚ ಕೃತ್ಯಗಳಲ್ಲಿ ತೊಡಗಿಸಿಕೊಂಡ ಇಂತಹವರಿಗೆ ಯಾವುದೇ ಜಮಾಅತ್ ನಲ್ಲಿ ಸದಸ್ಯತ್ವ ನೀಡಬಾರದೆಂದು ನಮ್ಮ ನಿಲುವಾಗಿದೆ. ಈ ರೀತಿಯ ತೀರ್ಮಾನಗಳು ಎಲ್ಲಾ ಜಮಾಅತ್ ಗಳಲ್ಲಿ ಕೈಗೊಂಡಲ್ಲಿ ಇಂತಹ ನೀಚರನ್ನು ಮಟ್ಟ ಹಾಕಲು ಸಾದ್ಯವಾಗಲಿದೆ ಎಂದು ಜಮಾಅತ್ ಆಡಳಿತ ಸಮಿತಿ ಅಭಿಪ್ರಾಯಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.