Breaking News

ನ್ಯಾಯವಾದಿ ಕೃಷ್ಣಪ್ರಸಾದ್ ದೋಳ ನೋಟರಿಯಾಗಿ ನೇಮಕ

Advt_Headding_Middle
Advt_Headding_Middle

ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಕೃಷ್ಣ ಪ್ರಸಾದ್ ದೋಳ ದ.ಕ. ಜಿಲ್ಲಾ ನೋಟರಿಯಾಗಿ ಕೇಂದ್ರ ಸರಕಾರದಿಂದ ನೇಮಕಗೊಂಡಿದ್ದಾರೆ.
ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ದೋಳ ಮನೆಯ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ತಂಗಮ್ಮ ಡಿ.ಬಿ.ಯವರ ಪುತ್ರ. ಇವರ ಪತ್ನಿ ಶ್ರೀಮತಿ ಸೌಮ್ಯ ಪಿ.ಎನ್. ಸುಳ್ಯದಲ್ಲಿ ಉಪವಲಯಾ ರಣ್ಯಾಧಿಕಾರಿಯಾಗಿದ್ದಾರೆ.

ಕೃಷ್ಣ ಪ್ರಸಾದರು ಪದವಿ ಪೂರ್ವ ಮತ್ತಿ ಪದವಿ ಶಿಕ್ಷಣವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಹಾಗೂ ಸುಳ್ಯ ಕೆ.ವಿ.ಜಿ
ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ನಂತರ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಮಂಗಳೂರಿನ ಹಿರಿಯ ನ್ಯಾಯವಾದಿ ವೈ.ಪಿ.ಕರ್ಕೆರ ಇವರ ಬಳಿ ಕಿರಿಯ ವಕೀಲರಾಗಿ 8 ವರ್ಷಗಳ ಕಾಲ ಇದ್ದರು. ಕಳೆದ ನಾಲ್ಕು ವರ್ಷಗಳಿಂದ ಸುಳ್ಯ ತಾಲೂಕು ಕಚೇರಿ ಎದುರು ಕುರುಂಜಿಭಾಗ್ ನಲ್ಲಿರುವ ಕೆ.ಪಿ. ಶೆಣೈ ಕಾಂಪ್ಲೆಕ್ಸ್ ನಲ್ಲಿ ಸ್ವಂತ ಕಚೇರಿ ಹೊಂದಿ ವಕೀಲ ವೃತ್ತಿ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.