Breaking News

ಚಂದನ ಸಾಹಿತ್ಯ ವೇದಿಕೆಯಿಂದ ಕೊರೋನ ಫಜೀತಿ ಮ್ಯೂಸಿಕ್ ಆಲ್ಬಮ್ ಬಿಡುಗಡೆ

Advt_Headding_Middle
Advt_Headding_Middle

ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಗೋಮುಖವ್ಯಾಘ್ರ ಧಾರಾವಾಹಿ ಚಿತ್ರತಂಡದ ಜಂಟಿ ಸಹಯೋಗದಲ್ಲಿ ಸುಳ್ಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೊರಾಂಗಣದಲ್ಲಿ ಕರೋನ ಫಜೀತಿ ಮ್ಯೂಸಿಕ್ ಆಲ್ಬಮ್ ಬಿಡುಗಡೆ ಕಾರ್ಯಕ್ರಮವು ನೆರವೇರಿತು.

ಸುಳ್ಯದ ಖ್ಯಾತ ಜ್ಯೋತಿಷ್ಯರು , ಸಾಹಿತಿ , ಚಿತ್ರ ನಿರ್ದೇಶಕರು ಹಾಗೂ ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ *ಕರೋನ ಫಜೀತಿ* ಮ್ಯೂಸಿಕ್ ಆಲ್ಬಮ್ ನ್ನು ಸುದ್ದಿ ಬಿಡುಗಡೆ ವಾರಪತ್ರಿಕೆಯ ಕಚೇರಿ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ ಯವರು ಮೊಬೈಲ್ ಲ್ಲಿ ಆಲ್ಬಮ್ ಹಾಡನ್ನು ಪ್ರಸಾರ ಮಾಡುವುದರ ಮೂಲಕ ವಿನೂತನವಾಗಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಠದ ಅರ್ಚಕರಾದ ರವಿರಾಜ್, ಧಾರಾವಾಹಿ ನಿರ್ದೇಶಕ ಕುಂದಾಪುರ ನಾಗರಾಜ್ ಉಪಸ್ಥಿತರಿದ್ದರು .

ಭಾವನಾ ಮೀಡಿಯಾ ಸುಳ್ಯ ಅರ್ಪಿಸುವ 12 ನೇ ಕಲಾ ಕಾಣಿಕೆಯಾದ ಆಲ್ಬಮ್ ಹಾಡು, ಕರೋನ ಹಾವಳಿಯ ಪ್ರಸ್ತುತ ದಿನಗಳ ಘಟನೆಗಳ ಸುತ್ತ ಹೆಣೆದಿರುವ ಹಾಡು ಆಗಿದೆ. ಗೀತೆಯನ್ನು ಪ್ರವೀಣ್ ಜಯ್ ವಿಟ್ಲ ರವರು ಸಂಕಲನ , ಪ್ರಜ್ವಲ್ ವಾಷ್ಠರ್ ಚಿತ್ರೀಕರಣ ಮತ್ತು ಕಬಕದ ಶ್ರೀರಾಜ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡಿದ್ದಾರೆ . ಕಾರ್ಯಕ್ರಮದಲ್ಲಿ ಪೆರುಮಾಳ್ ಐವರ್ನಾಡು , ಛಾಯಾಗ್ರಾಹಕ ಸಂಪ್ರೀತ್ ಸುಳ್ಯ , ಪ್ರವೀಣ್ ಸುಳ್ಯ , ಗಣೇಶ ಬಿ ಎಸ್ , ಇನ್ನಿತರರು ಉಪಸ್ಥಿತರಿದ್ದರು . ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.