Breaking News

ದ ಕ. .ಜಿಲ್ಲಾ ಕಾಂಗ್ರೆಸ್ ಕೋವಿಡ್ 19 ಹೆಲ್ಪ್ ಲೈನ್ ಘಟಕದ ಸಂಯೋಜಕರಾಗಿ ಶೌವಾದ್ ಗೂನಡ್ಕ ನೇಮಕ

Advt_Headding_Middle
Advt_Headding_Middle

 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್ ೧೯ ಹೆಲ್ಪ್ ಲೈನ್ ಘಟಕವನ್ನು ರಚಿಸಲಾಗಿದ್ದು, ಜಿಲ್ಲಾ ಎನ್.ಎಸ್.ಯು.ಐ. ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರನ್ನು ಸುಳ್ಯ ಭಾಗಕ್ಕೆ ಹೆಲ್ಪ್ ಲೈನ್ ಘಟಕದ ಸಂಯೋಜಕರನ್ನಾಗಿ ನೇಮಿಸಲಾಗಿದೆ.


ಕೊರೋನಾ ಕಾರಣದಿಂದ ಆಸ್ಪತ್ರೆಗಳಲ್ಲಿ ತೊಂದರೆಗೀಡಾಗುವ ಜನರ ಹಾಗೂ ಪ್ರಮುಖ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಹೆಲ್ಪ್ ಲೈನ್ ಘಟಕವು ಕಾರ್ಯನಿರ್ವಹಿಸಲಿದೆ. ಮಾಜಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ಈ ಘಟಕದ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

Advertisement
ಸುಳ್ಯ ಭಾಗದ ಜನರು ಆಸ್ಪತ್ರೆಗಳಲ್ಲಿ ಕೊರೋನಾ ಕಾರಣದಿಂದ ತೊಂದರೆಗೀಡಾದ್ದಲ್ಲಿ ಹಾಗೂ ಇನ್ನೀತರ ಕೊರೋನಾಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾದಲ್ಲಿ ಶೌವಾದ್ ಗೂನಡ್ಕ (ದೂ.ಸಂ.8197496123) ಇವರನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.