Breaking News

ಕನಕಮಜಲು ಯುವಕ ಮಂಡಲದ ವತಿಯಿಂದ ಮನೆ ಮನೆ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

Advt_Headding_Middle
Advt_Headding_Middle


ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ವರ್ಷದಲ್ಲಿ 15 ಮನೆಗಳಿಗೆ ಉತ್ತಮ ತಳಿಯ ಹಣ್ಣಿನ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಯುವಕ ಮಂಡಲದಲ್ಲಿ ಈ ಹಿಂದೆ ಅಧ್ಯಕ್ಷರಾಗಿ ದುಡಿದು ಪೂರ್ವಧ್ಯಕ್ಷರಾಗಿರುವ ಸುರೇಶ ಗೌಡ ಕುದ್ಕುಳಿ, ತೀರ್ಥರಾಮ ಗೌಡ ಸಾರಕೂಟೆಲು, ಶ್ರೀಧರ ಗೌಡ ಕುತ್ಯಾಳ , ಭಾಸ್ಕರ ಗೌಡ ನರಿಯೂರು, ಹೇಮಂತ್ ಮಠ ಯುವಕ ಮಂಡಲಕ್ಕೆ ವಿಶೇಷ ರೀತಿಯಲ್ಲಿ ಸಹಕಾರ ನೀಡುತ್ತಿರುವ ದಿನೆಶ್ ರಾವ್ ಮುಗೆರು, ಕಿರಣ ಕುತ್ಯಾಳ, ಕಿಶನ್ ದೇವರಗುಂಡ, ರವಿ ಪಂಜಿಗುಂಡಿ ಈ ಹಿಂದೆ ಕನಕಮಜಲಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದಂತಹ ಚಂದ್ರ ಮಡಿವಾಳ, ಯುವಕ ಮಂಡಲದ ವತಿಯಿಂದ ಆರ್ಟ್ ಕ್ಯಾಂಪುಗಳು ನಡೆದಾಗ ಮನೆಯನ್ನು ಒಂದು ವಾರಗಳ ಕಾಲ ವಾಸಸ್ಥಾನಕ್ಕೆ ಬಿಟ್ಟುಕೊಟ್ಟು ವಿಶೇಷ ರೀತಿಯಲ್ಲಿ ಸಹಕಾರ ನೀಡುತ್ತಿರುವ ರಾಧಾಕೃಷ್ಣ ಮೂರ್ಜೆ, ಹರೀಶ್ ಮೂರ್ಜೆ, ಯುವಕ ಮಂಡಲದ ಕ್ರೀಡಾ ಕಾರ್ಯದರ್ಶಿಯಾಗಿ ಇತ್ತೀಚೆಗೆ ನಮ್ಮನ್ನಗಲಿದ ಅಶ್ವಿತ್ ಮಳಿ ಇವರ ಸ್ಮರಣಾರ್ಥವಾಗಿ ,ಯುವಕ ಮಂಡಲದ ಪೂರ್ವಾಧ್ಯಕ್ಶರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ನಮ್ಮೆಲ್ಲರ ಮಾರ್ಗದರ್ಶಕರಾಗಿ ಇದ್ದಂತಹ ದಿ. ದಾಮೋದರ ಗೌಡ ಕುದ್ಕುಳಿ ಇವರ ಸ್ಮರಣಾರ್ಥವಾಗಿ ಹಾಗೂ ಕಳೆದ ವರ್ಷ ಕೆಸರುಗದ್ದೆ ಕಾರ್ಯಕ್ರಮಕ್ಕೆ ಗದ್ದೆ ನೀಡಿ ಸಹಕರಿಸಿದ ದಿ. ಲಿಂಗಪ್ಪ ಗೌಡ ಸಾಂತ್ಯಡ್ಕ ಇವರ ಸ್ಮರಣಾರ್ಥವಾಗಿ ಇವರೆಲ್ಲರ ಮನೆಗೆ ತೆರಳಿ ಮನೆಯವರೇ ಆಯ್ಕೆಮಾಡಿದ ಉತ್ತಮ ತಳಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ‌ ಉಪಾಧ್ಯಕ್ಷ ಶ್ರೀಧರ್ ಕುತ್ಯಾಳ ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ,ಕಾರ್ಯದರ್ಶಿ‌ ಬಾಲಚಂದ್ರ ನೆಡಿಲು ,ಪೂರ್ವಾಧ್ಯಕ್ಶರುಗಳು ಹಾಗೂ ಯುವಕ ಮಂಡಲದ ಸದಸ್ಯರುಗಳು ‌ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.