ಚಂದನ ಸಾಹಿತ್ಯ ವೇದಿಕೆ ವತಿಯಿಂದ ಗೋಮುಖವ್ಯಾಘ್ರ ಧಾರಾವಾಹಿ ಬಿಡುಗಡೆ

Advt_Headding_Middle
Advt_Headding_Middle

ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಉತ್ತರ ಕರ್ನಾಟಕ ಗೆಳೆಯರ ಬಳಗ ಜಂಟಿಯಾಗಿ ಆಯೋಜಿಸಿದ್ದ ಗೋಮುಖವ್ಯಾಘ್ರ ಧಾರಾವಾಹಿ ಬಿಡುಗಡೆ ಕಾರ್ಯಕ್ರಮವನ್ನು ಸುಳ್ಯದ ಸಂತೃಪ್ತಿ ಹೋಟೆಲ್ ಸಭಾಂಗಣದಲ್ಲಿ ನೆರವೇರಿಸಲಾಯಿತು . ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಹಾಗೂ ಸಾಹಿತಿ ಮತ್ತು ಚಿತ್ರ ನಿರ್ದೇಶಕ ಎಚ್ .ಭೀಮರಾವ್ ವಾಷ್ಠರ್ ರವರು ವಹಿಸಿ ಕಾರ್ಯಕ್ರಮ ನಿರೂಪಿಸಿದರು .

ಗೋಮುಖ ವ್ಯಾಘ್ರ ಧಾರಾವಾಹಿಯನ್ನು ಸ್ವಾತಿ ಲಾಡ್ಜ್ ಮಾಲೀಕರು ಮತ್ತು ಕಿರುತೆರೆಯ ನಟರಾದ ಶ್ರೀಕೃಷ್ಣ ಸೋಮಯಾಗಿ ಬಿಡುಗಡೆ ಮಾಡಿ ಶುಭ ಹಾರೈಸಿದರು . ನಿರ್ದೇಶಕ ಕುಂದಾಪುರ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು . ಇತ್ತೀಚಿಗೆ ನಿವೃತ್ತಿ ಹೊಂದಿದ್ದ ರಂಗನಾಥ್ ಕೆ ಎಫ್ ಡಿ ಸಿ ರವರನ್ನು ಉತ್ತರ ಕರ್ನಾಟಕ ಗೆಳೆಯರ ಬಳಗದ ಸಂಚಾಲಕ ಮತ್ತು ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಮಂಜುನಾಥ್ ಮೇಸ್ತ್ರಿ ರವರು ಸನ್ಮಾನಿಸಿ ಗೌರವಿಸಿದರು . ಉತ್ತರ ಕರ್ನಾಟಕ ಬಳಗದ ಪದಾಧಿಕಾರಿಗಳಾದ ರಮೇಶಪ್ಪ ಮೇಸ್ತ್ರಿ ಮತ್ತು ಶಿಲ್ಪಾಚಾರಿ , ಸಂತೃಪ್ತಿ ಹೋಟೆಲ್ ಮಾಲೀಕರಾದ ನವೀನ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು . ಸಹನಟರಾದ ಪೆರುಮಾಳ್ ಐವರ್ನಾಡು , ಪ್ರವೀಣ್ ಸುಳ್ಯ , ಗಣೇಶ್ ಬಿ ಎಸ್ , ಮಾಸ್ಟರ್ ಉಜ್ವಲ್ ವಾಷ್ಠರ್ ಉಪಸ್ಥಿತರಿದ್ದರು . ಇಡೀ ಧಾರಾವಾಹಿಯನ್ನು ಮೊಬೈಲ್ ಚಿತ್ರೀಕರಣದಲ್ಲಿ ಮಾಡಿದ ಸಂಪ್ರೀತ್ ಸುಳ್ಯ ಸಹಕರಿಸಿದರು . ಮಾಂಟೇಶ್ ಮಾಂಡ್ರೆರವರ ಕಥೆ , ಭೀಮರಾವ್ ವಾಷ್ಠರ್ ರವರ ಸಹ ನಿರ್ದೇಶನ ಇರುವ ಈ ಧಾರಾವಾಹಿಯನ್ನು ಸುಳ್ಯದ ಭಾವನಾ ಮೀಡಿಯಾ 11 ನೇ ಕಲಾ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ . ಒಟ್ಟು 35 ಭಾಗಗಳಲ್ಲಿ ಮೂಡಿಬಂದಿರುವ ಈ ಧಾರಾವಾಹಿ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ಪ್ , ಫೇಸ್ ಬುಕ್ , ಯೂಟ್ಯೂಬ್ ಲ್ಲಿ ದಿನಾಲು 1 ಭಾಗ ಪ್ರಸಾರ ಮಾಡವುರೆಂದು ತಿಳಿದುಬಂದಿದೆ . ಪ್ರಧಾನ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ ಕೋಳಿವಾಡ ರವರು ವಂದಿಸಿದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.