ದೇವಾಲಯದಲ್ಲಿ ಪುಟಾಣಿ ಆಕಾಶ್ ಭಟ್ ನ ಚೆಂಡೆ ವಾದನ : ವೈರಲ್

Advt_Headding_Middle
Advt_Headding_Middle

 

ಮೂರುವರೆ ವರ್ಷದ ಪುಟಾಣಿ ದೇವಾಲಯದಲ್ಲಿ ಪೂಜೆಯ ವೇಳೆ ಚೆಂಡೆ ನುಡಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಪಂಜದ ಸಂಗಾತಿ ಸ್ಟೋರ್ ಮಾಲಕ ಕೆ.ವೆಂಕಟ್ರಮಣ ಭಟ್‌ರವರ ಮೊಮ್ಮಗ, ಬೆಂಗಳೂರಿನ ಉದ್ಯೋಗಿಗಳಾದ ಸ್ಯಾಮ್‌ಸಾಂಗ್ ಕಂಪೆನಿ ಇಂಜಿನಿಯರ್ ಆದಿತ್ಯ, ಅಮೇರಿಕಾ ಕಂಪೆನಿ ಇಂಜಿನಿಯರ್ ಪೂನಮ್ ದಂಪತಿಗಳ ಪುತ್ರ ಆಕಾಶ್ ಭಟ್ ಪ್ರತಿಭಾನ್ವಿತ ಪುಟಾಣಿ. ಕೆಲವು ಸಮಯಗಳ ಹಿಂದೆ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಂಜಾನೆ ಪೂಜೆಗೆ ಮನೆವರೊಂದಿಗೆ ಬರುತ್ತಿದ್ದ ಆಕಾಶ್ ದೇವಾಲಯದ ಚೆಂಡನಾದ ಕೇಳಿ ತಾನು ಚೆಂಡೆ ವಾದನಕ್ಕೆ ಆಸಕ್ತಿ ವಹಿಸಿ, ಚೆಂಡೆ ಬಾರಿಸಲು ಆರಂಭಿಸಿದರು.
ಆಕಾಶ್‌ಗೆ ದೇವಾಲಯದ ಚೆಂಡೆ ವಾದಕ ಸುಂದರರವರು ಮೊದಲಿಗೆ ಹೇಳಿ ಕೂಟ್ಟರು. ಬಹಳಷ್ಟು ಆಸಕ್ತಯಿಂದ ಕಲಿತು ಅಂದು ಪ್ರತಿ ದಿನ ದೇವರ ಪೂಜೆ ವೇಳೆ ಚೆಂಡೆ ನುಡಿಸುತ್ತಿದ್ದರು. ಈ ವೀಡಿಯೋ ವೈರಲ್ ಆಗುತ್ತಿದೆ ಪುಟಾಣಿ ಯ ಆಸಕ್ತಿಗೆ ಮನೆಯವರು ಚೆಂಡೆ ಕೊಡಿಸಿದ್ದಾರೆ. ಈತ ಬೆಂಗಳೂರಿನಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ಪ್ರೀಕೆಜಿ ವಿದ್ಯಾರ್ಥಿ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.