ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಉದ್ಯೋಗಿ ಶ್ರೀಮತಿ ಚಂದ್ರಾವತಿ ಎನ್. ನಿವೃತ್ತಿ, ಬೀಳ್ಕೊಡುಗೆ

Advt_Headding_Middle
Advt_Headding_Middle

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಲೆಕ್ಕಾಧಿಕಾರಿಯಾಗಿದ್ದ ಶ್ರೀಮತಿ ಚಂದ್ರಾವತಿಯವರು ತಮ್ಮ ಸುದೀರ್ಘ ೩೭ ವರ್ಷಗಳ ಸೇವೆಯಿಂದ ಜು. 31ರಂದು ನಿವೃತ್ತಿ ಹೊಂದಿರುತ್ತಾರೆ.

ಗುತ್ತಿಗಾರು ಗ್ರಾಮದ ಮೊಗ್ರ ಮೇಲೆಮನೆ ಮಾಧವ ಗೌಡ ಇಂದಿರಾ ದಂಪತಿಗಳ ಪುತ್ರಿಯಾಗಿ ಜನಿಸಿದ ಶ್ರೀಮತಿ ಚಂದ್ರಾವತಿಯವರು ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪಿ.ಯು.ಸಿ. ವಿದ್ಯಾಭ್ಯಾಸವನ್ನು ಗುತ್ತಿಗಾರು ಮತ್ತು ಸುಬ್ರಹ್ಮಣ್ಯದಲ್ಲಿ ಪೂರೈಸಿ ಮಡಿಕೇರಿಯಲ್ಲಿ ಜಿ.ಡಿ.ಸಿ. ತರಬೇತಿಯನ್ನು ಪಡೆದರು. ೧೯೮೩ರ ಫೆ. ೫ರಂದು ಸುಳ್ಯ ಪಿ.ಎಲ್.ಡಿ. ಬ್ಯಾಂಕಿಗೆ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡು ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ೧೯೯೩ರಲ್ಲಿ ಖಾಯಂಗೊಂಡರು. ೨೦೧೩ರಿಂದ ಪ್ರಭಾರ ಲೆಕ್ಕಾಧಿಕಾರಿಯಾಗಿ, ೨೦೧೮ರಿಂದ ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿಹೊಂದಿದರು.

ಕೌಟುಂಬಿಕವಾಗಿ ೧೯೮೭ರ ಜು. ೧೪ರಂದು ಉಪನ್ಯಾಸಕರಾಗಿದ್ದ ಮುರೂರು ನಡುಮನೆ ಕುಶಾಲಪ್ಪ ಯಂ.ಯನ್.ರವರನ್ನು ವಿವಾಹವಾದರು. ಇವರ ಪುತ್ರರಾದ ಅಜಯ್ ಕೃಷ್ಣ ಪ್ರಾನ್ಸ್ ಗ್ರಿನೊಬ್‌ಲ್ ಯೂನಿವರ್ಸಿಟಿಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಪಿ.ಹೆಚ್.ಡಿ. ಪದವಿಯನ್ನು ಮಾಡುತ್ತಿದ್ದರೆ, ಕಿರಿಯ ಪುತ್ರ ಆದಿತ್ಯ ಕೃಷ್ಣ ಮುಂಬೈ ಎನ್.ಐ.ಟಿ.ಐ.ಇ.ಯಲ್ಲಿ ಎಂಬಿಎ ಪದವಿಯನ್ನು ಪೂರೈಸಿ ಕೊಟೆಕ್ ಮಹಿಂದ್ರ ಬ್ಯಾಂಕಿನಲ್ಲಿ ಪ್ರೊಡಕ್ಟ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದಾರೆ.

ಬೀಳ್ಕೊಡುಗೆ

 ಜು. ೩೧ರಂದು ವಯೋ ನಿವೃತ್ತಿ ಹೊಂದಿದ ಶ್ರೀಮತಿ ಚಂದ್ರಾವತಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜು. ೩೧ರಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕಿನ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಉಪಾಧ್ಯಕ್ಷ ಪ್ರಭಾಕರ ನಾಯಕ್, ಶ್ರೀಮತಿ ಚಂದ್ರಾವತಿಯವರ ಪತಿ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಯಂ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕ ಧನರಾಜ್ ಕೆ.ಸಿ. ಸನ್ಮಾನ ಪತ್ರವನ್ನು ವಾಚಿಸಿದರು. ಬ್ಯಾಂಕಿನ ಲೆಕ್ಕಪರಿಶೋಧಕ ರವೀಂದ್ರನಾಥ್ ಕೇವಳ, ಕೋಶಾಧಿಕಾರಿ ಸೋಮನಾಥ ಪೂಜಾರಿ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಮತ್ತು ಸಿಬ್ಬಂದಿವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬ್ಯಾಮಕಿನ ಸಿಬ್ಬಂದಿ ದಿನೇಶ್, ನಿರ್ದೇಶಕರಾದ ಶ್ರೀಮತಿ ಸುವರ್ಣಿನಿ, ಕು. ಭಾಗೀರಥಿ ಮುರುಳ್ಯ ಅಭಿನಂದನಾ ಮಾತುಗಳನ್ನಾಡಿದರು. ಸಿಬ್ಬಂದಿಗಳಾದ ಶ್ರೀಮತಿ ಲತಾಕುಮಾರಿ ಪ್ರಾರ್ಥಿಸಿದರು.  ದಾಮೋದರ ಸ್ವಾಗತಿಸಿ, ಸರವಣ ಕುಮಾರ್ ಎನ್ ವಂದಿಸಿದರು. ಲೋಹಿತ್ ಮಾವಿನಗೊಡ್ಲು ಕಾರ್ಯಕ್ರಮ ನಿರೂಪಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.