Breaking News

ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕ ಸಮಾಜ ಕಾರ್ಯ ವಿಭಾಗದಿಂದ ಪ್ರಥಮ ವರ್ಷದ ಪದವಿ ತರಗತಿಗಳಿಗೆ ವಿನೂತನ ದಾಖಲಾತಿ

Advt_Headding_Middle
Advt_Headding_Middle

ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕ ಸಮಾಜ ಕಾರ್ಯ ವಿಭಾಗದಿಂದ ಪ್ರಥಮ ವರ್ಷದ ಪದವಿ ತರಗತಿಗಳಿಗೆ ವಿನೂತನ ದಾಖಲಾತಿ
ವಿಶ್ವದೆಲ್ಲೆಡೆ ಮಹಾಮಾರಿ ಕೊರೋನಾ ವೈರಸ್ ದಾಳಿ ನಡೆಸಿ ಎಲ್ಲರ ಲೆಕ್ಕಾಚಾರಗಳನ್ನು ಬದಲಾಯಿಸಿ, ತನ್ನದೇ ಅಧಿಪತ್ಯವನ್ನು ಸ್ಥಾಪಿಸಿದೆ.

ರೋಗಭೀತಿಯಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಮುಚ್ಚಿದ ಶಾಲಾ ಕಾಲೇಜು ಬಾಗಿಲುಗಳು ಮತ್ತೆ ಶ್ರಿಘ್ರದಲ್ಲೇ ತೆರೆಯುವ ಸಾಧ್ಯತೆಯಿದೆ, ಇದರ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದು, ಫಲಿತಾಂಶ ಪ್ರಕಟವವಾಗಿ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿ ವಿದ್ಯಾರ್ಥಿಗಳು ಆತಂಕದಿಂದಲೇ ಪದವಿ ಕಾಲೇಜು ಕಡೆ ಮುಖಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ ತಮ್ಮ ಆಯ್ಕೆಯ ತರಗತಿಗಳಿಗೆ ಪ್ರವೇಶಾತಿ ಪಡೆಯುವ ಚಟುವಟಿಕೆ ಆರಂಭಿಸಿದ್ದಾರೆ.
ಈ ನಡುವೆ ಬೆಳ್ಳಾರೆಯ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕ ಸಮಾಜ ಕಾರ್ಯ ವಿಭಾಗವು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಸ್ನಾತಕ ಸಮಾಜ ಕಾರ್ಯ ವಿಭಾಗಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ಫೋನ್ ಮುಖಾಂತರ ಸಂಪರ್ಕಿಸಿ ವಿಭಾಗದ ಅಧ್ಯಾಪಕರ ತಂಡವು ನೇರವಾಗಿ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ದಾಖಲೆಗಳನ್ನು ಪಡೆದು ಆನ್ ಲೈನ್ ಮೂಲಕ ದಾಖಲಾತಿ ನಡೆಸುವ ವಿನೂತನ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ. ವಿಭಾಗದ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶ ಬಯಸುವ ಆಸಕ್ತಿಯುಳ್ಳ ವಿದ್ಯಾರ್ಥಿಗಳು 91643 45107, 90353 26594, 98805 73907 ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.