Breaking News

ಸಿಂಗಳೀಕ ವಿಶೇಷ ಅಂಚೆ ಲಕೋಟೆಗೆ ಜೆರಾಲ್ಡ್ ವಿಕ್ರಮ್ ಲೋಬೋ ಮಾಹಿತಿ

Advt_Headding_Middle
Advt_Headding_Middle

ಭಾರತೀಯ ಅಂಚೆ ಇಲಾಖೆಯು ವಿಶೇಷ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಗಳನ್ನು ಹೊರತರುವ ಯೋಜನೆ ಇಟ್ಟುಕೊಂಡಿದ್ದು, ಪುತ್ತೂರು ವಿಭಾಗದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎರಡು ಅಂಚೆ ಲಕೋಟೆಗಳು ಬಿಡುಗಡೆಗೊಂಡಿತು.

ಮಾಜಿ ಶಾಸಕ ದಿ. ಕೆ.ವಿ.ಗೌಡರ ವಿಶೇಷ ಅಂಚೆ ಲಕೋಟೆ ಅನಾವರಣಗೊಂಡಿದ್ದು, ಇದೇ ಸಂದರ್ಭದಲ್ಲಿ ಇನ್ನೊಂದು ಅಂಚೆ ಲಕೋಟೆಯೂ ಬಿಡುಗಡೆಗೊಂಡಿದ್ದು ಇದರ ಹಿಂದೆ ಕೂಡಾ ಸುಳ್ಯದವರ ಪಾತ್ರವಿದೆ.

ಅಳಿವಿನಂಚಿನಲ್ಲಿರುವ ಸಿಂಗಳೀಕ ಪ್ರಾಣಿಯ ಅಂಚೆ ಲಕೋಟೆ ಬಿಡುಗಡೆಗೊಂಡಿದ್ದು, ಈ ಕುರಿತ ಪೂರ್ಣ ಮಾಹಿತಿಗಳು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿರುವ ಸುಳ್ಯದ ಜೆರಾಲ್ಡ್ ವಿಕ್ರಮ್ ಲೋಬೋ ನೀಡಿದ್ದರು. ಈ ಮಾಹಿತಿಗಳ ಆಧಾರದಲ್ಲಿ ಪ್ರಸ್ತಾವನೆ ಕೇಂದ್ರ ಕಚೇರಿಗೆ ಹೋಗಿ ಅನುಮೋದನೆಗೊಂಡಿತ್ತು.


ಜೆರಾಲ್ಡ್ ವಿಕ್ರಮ್ ಲೋಬೋರವರು ಅರಣ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಜಾನ್ ಬ್ಯಾಪ್ಟಿಸ್ಟ್ ಲೋಬೋ ಹಾಗೂ ನಿವೃತ್ತ ಶಿಕ್ಷಕಿ ವಿಕ್ಟೋರಿಯಾ ಜ್ಯೋತಿ ಅಮೀನ್ ಅವರ ಪುತ್ರ. ೧೦ನೇ ತರಗತಿಯವರೆಗೆ ರೋಟರಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದು ಬಳಿಕ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ. ಪಡೆದು ಸ್ವಲ್ಪಕಾಲ ಎನ್‌ಎಂಸಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ ೧೩ ವರ್ಷಗಳಿಂದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.