ಸುಳ್ಯದ ಉದ್ಯಮಿಯ ಪ್ರಾಥಮಿಕ ಸಂಪರ್ಕಿತರಿಗೆ ನೆಗೆಟಿವ್

Advt_Headding_Middle
Advt_Headding_Middle

ಸುಳ್ಯದ ಉದ್ಯಮಿ ದಿನೇಶ್ ಅಡ್ಕಾರ್ ಅವರಿಗೆ ಒಮ್ಮೆ ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದ ಅವರ ಮನೆಯವರಿಗೆ ಮತ್ತು ಸಂಸ್ಥೆಯ ಸಿಬ್ಬಂದಿಗಳಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.

ದಿನೇಶ್ ಅಡ್ಕಾರ್ ರವರು ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ಹೋದಾಗ ಕೊರೋನ ಪರೀಕ್ಷೆ ಮಾಡಲಾಗಿ ವರದಿ ಪಾಸಿಟಿವ್ ಬಂದಿತ್ತು. ಕೊರೋನದ ಯಾವುದೇ ಲಕ್ಷಣಗಳು ಇಲ್ಲದಿರುವುದರಿಂದ ವೈದ್ಯರೊಬ್ಬರ ಸಲಹೆಯ ಮೇರೆಗೆ ಮತ್ತೆ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ವರದಿ ನೆಗೆಟಿವ್ ಬಂತು. ಎರಡು ದಿನಗಳ ಅಂತರದಲ್ಲಿ ಪಾಸಿಟಿವ್, ನೆಗೆಟಿವ್ ಬಂದಿರುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು.ಯಾವುದೇ ಲಕ್ಷಣಗಳು ಇಲ್ಲದೆ ಪಾಸಿಟಿವ್ ವರದಿ ನೀಡಿದ ಆಸ್ಪತ್ರೆಯ ವಿರುದ್ಧ ದಿನೇಶ್ ಅಡ್ಕಾರ್ ರವರು ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ ದೂರನ್ನೂ ನೀಡಿದ್ದರು.
ದ್ವಿತೀಯ ವರದಿ ನೆಗೆಟಿವ್ ಬಂದಿದ್ದರೂ ನಿಯಮದ ಪ್ರಕಾರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮನೆಯವರು, ಮನೆಯ ಕೆಲಸದವರು, ಸಂಸ್ಥೆಯ ಸಿಬ್ಬಂದಿಗಳು ಹೋಂ ಕ್ವಾರಂಟೈನ್ ನಲ್ಲಿದ್ದರು. ಈಗ ಅವರಿಗೆ ಕೊರೋನ ಪರೀಕ್ಷೆ ಮಾಡಲಾಗಿದ್ದು,ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.