Breaking News

ಸುಳ್ಯ ಕೆವಿಜಿ ಆಸ್ಪತ್ರೆಯ ಕೊರೋನಾ ವಾರಿಯರ್ಸ್

Advt_Headding_Middle
Advt_Headding_Middle

 

ಕೊರೋನಾ ಸೋಂಕಿನ ಆರಂಭದ ದಿನಗಳಲ್ಲೇ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ವ್ಯವಸ್ಥೆ ಮಾಡಲಾಗಿತ್ತು. ತಿಂಗಳ ಹಿಂದೆ ಈ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಕೊರೋನಾ ಚಿಕಿತ್ಸಾ ವಿಭಾಗ ತೆರೆಯಲಾಯಿತು.


ಇಲ್ಲಿ ಹಲವು ದಾದಿಯರು ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ಆರೈಕೆ ಮಾಡುತ್ತಾ ಕೊರೋನಾ ವಾರಿಯರ್ಸ್‌ಗಳಾಗಿದ್ದಾರೆ. ಇವರ ಕುರಿತಾದ ಮಾಹಿತಿ ಇಲ್ಲಿದೆ.

ಶಿಲ್ಪಾ ಸಿ.ಆರ್.

ಸುಳ್ಯ ಕುರುಂಜಿಭಾಗ್ ಸಮೀಪದ ಭಸ್ಮಡ್ಕದ ಶರತ್‌ಕುಮಾರ್ ಎಸ್.ಡಿ.ಯವರ ಪತ್ನಿಯಾಗಿರುವ ಶಿಲ್ಪಾ ಮಡಿಕೇರಿಯ ಮಾದಪ್ಪ ಚೆರಿಯಮನೆ ಮತ್ತು ದೇವಕಿ ದಂಪತಿಯ ಪುತ್ರಿ. ಕಳೆದ ಮೂರೂವರೆ ವರ್ಷದಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಕೊರೋನಾ ವಿಭಾಗದ ಫಿವರ್ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರೂವರೆ ವರ್ಷಗಳ ಕಾಲ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲೂ ಇವರು ಸೇವೆ ಸಲ್ಲಿಸಿದ್ದರು.

“ನನ್ನ ವೃತ್ತಿಯಲ್ಲಿ ಇಂದು ವಿಶೇಷ ಘಟ್ಟವನ್ನು ಮೆಟ್ಟಿ ನಿಂತಿದ್ದೇನೆ. ಮೊದಲಿಗೆ ಕೊರೋನಾ ಕರ್ತವ್ಯವನ್ನು ಕೊಟ್ಟಾಗ ಭಯಭೀತಳಾಗಿದ್ದೆ. ಆದರೆ ಈಗ ಯಾವುದೇ ಭಯವಿಲ್ಲದೆ ಆಸ್ಪತ್ರೆಯ ಸೂಲ್ತ ವ್ಯವಸ್ಥೆಯ ಮೂಲಕ ತುಂಬಾ ಸಲೀಸಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇ” ಎನ್ನುತ್ತಾರೆ ಶಿಲ್ಪಾ.

ಗಾನಶ್ರೀ ಡಿ.

ಅಜ್ಜಾವರ ಗ್ರಾಮದ ಅತ್ಯಡ್ಕ ಶರತ್ ದೀಟಿಗೆಯವರ ಪತ್ನಿ ಗಾನಶ್ರೀ ಡಿ.ಯವರು ಅರಂತೋಡು ಗ್ರಾಮದ ಸುರೇಶ್ ದೇರಾಜೆ ಮತ್ತು ರಾಧಮ್ಮ ದಂಪತಿಯ ಪುತ್ರಿ. ಕಳೆದ 7 ವರ್ಷಗಳಿಂದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗಾನಶ್ರೀಯವರು ಸವಣೂರಿನ ವಿದ್ಯಾರಶ್ಮಿ ನರ್ಸಿಂಗ್ ಸಂಸ್ಥೆಯಲ್ಲಿ ನರ್ಸಿಂಗ್ ಪೂರೈಸಿದ್ದರು. “ಯಾವುದೇ ಭಯವಿಲ್ಲದೆ ಈ ಕರ್ತವ್ಯ ಮಾಡುತ್ತಿದ್ದೇ. ಆಸ್ಪತ್ರೆ ಹಾಗೂ ಮನೆಯವರ ಪೂರ್ಣ ಬೆಂಬಲವೂ ಇದೆ” ಎನ್ನುತ್ತಾರೆ ಗಾನಶ್ರೀ.

ಆಶಾಲತಾ ಕೆ.


ಮಂಡೆಕೋಲು ಗ್ರಾಮದ ಮಾವಂಜಿ ಮನೆ ಜಗದೀಶ್ ಮಡಿವಾಳರವರ ಪತ್ನಿಯಾಗಿರುವ ಆಶಾಲತರವರು ಪೆರ್ಲಂಪಾಡಿ ಕೊಳ್ತಿಗೆಯ ದಿ. ಕೊರಗಪ್ಪ ಮಡಿವಾಳ ಮತ್ತು ಮೋಹಿನಿಯವರ ಪುತ್ರಿ. 2 ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಬೆಂಗಳೂರಿನ ಲೇಕ್‌ಸೈಡ್ ಆಸ್ಪತ್ರೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದ ಆಶಾಲತರವರು ಆರಂಭದಲ್ಲಿ ಬೆಂಗಳೂರಿನ ಯಶೋಮತಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.
“ಮೊದಲು ಕೊರೋನಾ ಕರ್ತವ್ಯ ಮಾಡುವುದು ಎಂದರೆ ತುಂಬಾ ಭಯವಿತ್ತು. ಪಿಪಿಇ ಕಿಟ್ ಹಾಕಿದ ನಂತರರ ನಮಗೆ ಉಸಿರಾಡಲು ಕೂಡಾ ಕಷ್ಟವಾಗುತ್ತದೆ. ಆದರೆ ಇದೆಲ್ಲಾ ನಮ್ಮ ಕರ್ತವ್ಯ. ಹಾಗಾಗಿ ಸವಾಲಾಗಿ ಸ್ವೀಕರಿಸಿ ವೃತ್ತಿ ಮಾಡುತ್ತೇನೆ” ಎನ್ನುತ್ತಾರೆ ಅವರು.

ಭವ್ಯ ಎ.


ಅಜ್ಜಾವರ ಗ್ರಾಮದ ಅತ್ಯಡ್ಕ ಚಿದಾನಂದ ಮತ್ತು ದಿ. ಮೋಹನಾಂಗಿ ದಂಪತಿಯ ಪುತ್ರಿ ಭವ್ಯ ಎ. 5 ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

“ಮೊದಲು ನನಗೆ ತುಂಬಾ ಭಯವಿತ್ತು. ನಿರಂತರವಾಗಿ ಪಿಪಿಇ ಕಿಟ್ ಧರಿಸಿ ಡ್ಯೂಟಿ ಮಾಡುವುದು ಕೂಡಾ ಕಷ್ಟವಾಗಿತ್ತು. ಈಗ ಯಾವುದೇ ಭಯವಿಲ್ಲ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಸದಾ ಸಿದ್ಧ. ಇದು ಹೆಮ್ಮೆಯ ವಿಷಯ ಕೂಡಾ” ಎನ್ನುತ್ತಾರೆ ಭವ್ಯ.

ಭವ್ಯ ಸಚಿನ್ ಮಡ್ತಿಲ


ಐವರ್ನಾಡಿನ ಸಚಿನ್ ಮಡ್ತಿಲರವರ ಪತ್ನಿಯಾಗಿರುವ ಭವ್ಯರವರು ಮಿತ್ತಮೂಲೆ ಲಕ್ಷ್ಮಣ ಗೌಡ ಮತ್ತು ಯಶೋಧಾರವರ ಪುತ್ರಿ. ನಾಲ್ಕು ವರ್ಷದಿಂದ ಕೆವಿಜಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


“ಪಿಪಿಇ ಕಿಟ್ ಹಾಕಿ ಡ್ಯೂಟಿ ಮಾಡುವುದು ಸ್ವಲ್ಪ ಕಷ್ಟ. ಆದರೂ ಡ್ಯೂಟಿಯಲ್ಲಿ ಖುಷಿ ಇದೆ. ರೋಗಿಗಳ ಆರೋಗ್ಯದ ಜೊತೆಗೆ ನಮ್ಮ ಮತ್ತು ಮನೆಯವರ ಆರೋಗ್ಯದ ಕಡೆಗೆ ಗಮನ ಕೊಟ್ಟು ಜಾಗರೂಕತೆಯಿಂದ ಡ್ಯೂಟಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಮನೆಯವರ ಸಂಪೂರ್ಣ ಬೆಂಬಲ ಇದೆ” ಎನ್ನುತ್ತಾರೆ ಅವರು.

ಭವ್ಯಶ್ರೀ ಎ.ವಿ.


ತೊಡಿಕಾನ ಗ್ರಾಮದ ಅಮೆಮನೆ ವಿಗ್ಮಯ್ಯ ಮತ್ತು ಚಂದ್ರಿಕಾ ದಂಪತಿಯ ಪುತ್ರಿ. ಕಳೆದ 5 ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಕೆವಿಜಿ ನರ್ಸಿಂಗ್ ಸಂಸ್ಥೆಯಲ್ಲಿಯೇ ಭವ್ಯಶ್ರೀಯವರು ನರ್ಸಿಂಗ್ ಶಿಕ್ಷಣ ಪಡೆದಿದ್ದರು. ” ಮೊದಲು ಸ್ವಲ್ಪ ಭಯ ಇತ್ತು. ಕಿಟ್ ಹಾಕಿದಾಗ ಕೂಡಾ ಕಷ್ಟ ಅನಿಸುತ್ತಿತ್ತು. ಈಗ ಸುಧಾರಿಸಿಕೊಂಡು ಆರಾಮದಲ್ಲಿ ಕರ್ತವ್ಯ ಮಾಡುತ್ತಿದ್ದೇನೆ. ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ” ಎನ್ನುತ್ತಾರೆ ಅವರು.

ಬಿಂದುಶ್ರೀ ಕೆ.ಬಿ.


ಕೊಡಗಿನ ಮಡಿಕೇರಿನ ಕೆಂಜನ ಬೆಳಿಯಪ್ಪ ಕೆ.ಕೆ. ಮತ್ತು ದೇವಕಿ ಕೆ.ಬಿ. ದಂಪತಿಯ ಪುತ್ರಿ ಬಿಂದುಶ್ರೀ ಕೆ.ಬಿ.ಯವರು ಕಳೆದ 3 ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು,ಪ್ರಸ್ತುತ ಫಿವರ್ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ನರ್ಸಿಂಗ್ ಶಿಕ್ಷಣದ ಬಳಿಕ ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ಹಾಗೂ 1 ವರ್ಷ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಬಿಂದುಶ್ರೀಯವರು ಸೇವೆ ಸಲ್ಲಿಸಿದ್ದರು. “ಆರಂಭದಲ್ಲಿ ಭಯ ಇದ್ದರೂ ಈಗ ಯಾವುದೇ ಭಯ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಾವು ಮಾಡುವಂತಹ ವೃತ್ತಿಯಲಿ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು” ಎನ್ನುತ್ತಾರೆ ಬಿಂದುಶ್ರೀ.

ಪ್ರತಿಮಾ ಡಿ.ಎಸ್.


ಮಡಿಕೇರಿ ತಾಲೂಕು ಸಂಪಾಜೆ ಗ್ರಾಮದ ದೇವಜನ ದಿ. ಸೀತಾರಾಮ ಡಿ.ಪಿ. ಮತ್ತು ಜಯಂತಿ ಡಿ.ಎಸ್. ಅವರ ಪುತ್ರಿಯಾಗಿರುವ ಪ್ರತಿಮಾ ಡಿ.ಎಸ್. ಕಳೆದ ಒಂದೂವರೆ ವರ್ಷದಿಂದ ಕೆವಿಜಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನರ್ಸಿಂಗ್ ಶಿಕ್ಷಣದ ಬಳಿಕ ನಾಲ್ಕೂವರೆ ವರ್ಷ ಕಾಲ ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. ” ನರ್ಸ್‌ಗಳ ಕೆಲಸ ಅಷ್ಟು ಸುಲಭವಲ್ಲದ ಕೆಲಸ ಖಂಡಿತವಾಗಿಯೂ ಅಲ್ಲ. ಅದರಲ್ಲಿಯೂ ಪಿಪಿಇ ಕಿಟ್ ಹಾಕಿ 6 ಗಂಟೆಗಳವರೆಗೆ ಕೆಲಸ ನಿರ್ವಹಿಸುವುದು ಕಷ್ಟಕರ. ಇದು ನನಗೆ ಒಂದು ಹೊಸ ಅನುಭವ ಮತ್ತು ಸವಾಲಾಗಿದೆ. ಈ ವೃತ್ತಿಯ ಬಗ್ಗೆ ಹೆಮ್ಮೆ ಇದೆ” ಎನ್ನುತ್ತಾರೆ ಅವರು.

ಹೇಮಲತಾ ಕೆ.


ಹೇಮಲತಾ ಕೆ. ಮಂಡೆಕೋಲಿನ ತೋಟಪ್ಪಾಡಿ ಕಕ್ಕಾಜೆ ಪೇರಾಲು ಜಗದೀಶ್‌ರವರ ಪತ್ನಿಯಾಗಿರುವ ಹೇಮಲತಾ ಕೆ. ಜಾಲ್ಸೂರು ಗ್ರಾಮದ ಕಾಟೂರು ದಿ. ರಾಮಣ್ಣ ಗೌಡ ಮತ್ತು ಪದ್ಮಾವತಿ ದಂಪತಿಯ ಪುತ್ರಿ. ಮೂರೂವರೆ ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸವಣೂರಿನ ವಿದ್ಯಾರಶ್ಮಿ ನರ್ಸಿಂಗ್ ಸಂಸ್ಥೆಯಲ್ಲಿ ನರ್ಸಿಂಗ್ ತರಬೇತಿ ಪಡೆದ ಹೇಮಲತಾರವರು ಬಳಿಕ 3 ವರ್ಷ ಮಂಗಳೂರಿನ ಎಜೆ ಹಾಸ್ಪಿಟಲ್ ಮತ್ತು ಎರಡೂವರೆ ವರ್ಷ ಕೆಎಂಸಿ ಹಾಸ್ಪಿಟಲ್‌ನಲ್ಲಿ ಸೇವೆ ಸಲ್ಲಿಸಿದ್ದರು.

” ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ಬಳಿಕ ನನಗೆ ಧೈರ್ಯ ಬಂದಿದೆ. ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ತುಂಬಾ ಕಷ್ಟ. ಬಾಯಾರಿಕೆಯಾದರೆ ನೀರು ಕುಡಿಯಲೂ ಸಾಧ್ಯವಿಲ್ಲ. ಆದರೂ ನಾವು ನಿಷ್ಠೆಯಿಂದ ಮಾಡಿದ ಸೇವೆಗೆ ನಮಗೆ ತೃಪ್ತಿ ಸಿಕ್ಕಿದೆ. ನಮ್ಮ ಮನೆಯವರು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ” ಎಂದು ಅವರು ಹೇಳುತ್ತಾರೆ.

ಕೃತಿಕಾ ಕೆ.ಎಸ್.


ಕೋಲ್ಚಾರಿನ ಕೊಯಿಂಗಾಜೆ ಸೋಮನಾಥ್ ಕೆ.ಎಚ್. ಮತ್ತು ಬಾಲಕಿ ದಂಪತಿಗಳ ಪುತ್ರಿಯಾದ ಕೃತಿಕಾ ಕೆ.ಎಸ್. ಕಳೆದ ಒಂದೂವರೆ ವರ್ಷದಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


“ಕೊರೋನಾ ಎಂಬ ಮಹಾಮಾರಿ ಕಾಯಿಲೆ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಆ ರೋಗಿಗಳ ಸೇವೆ ಮಾಡುವ ಯೋಗ ಸಿಕ್ಕಿದೆ. ನನ್ನ ಈ ವೃತ್ತಿ ನನಗೆ ಖುಷಿ ಕೊಟ್ಟಿದೆ” ಎನ್ನುತ್ತಾರೆ ಕೃತಿಕಾ.

ಕುಸುಮಾ


ಬೆಳ್ಳಾರೆ ಸಮೀಪದ ಕುಂಟಿನಿಯ ವಾಸಪ್ಪರವರ ಪತ್ನಿಯಾಗಿರುವ ಕುಸುಮಾರವರು 9 ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್ ಆಗಿದ್ದಾರೆ.


“ಪಿಪಿಇ ಕಿಟ್ ಧರಿಸಿ ಕೆಲಸ ನಿರ್ವಹಿಸಲು ಕಷ್ಟವಾದರೂ ಇದು ನಮ್ಮ ಕರ್ತವ್ಯದ ಭಾಗವಾದುದರಿಂದ ಹೆಮ್ಮೆಯಿಂದಲೇ ಕೆಲಸ ಮಾಡುತ್ತಿದ್ದೇನೆ” ಎನ್ನುತ್ತಾರೆ ಅವರು.

ಪೂರ್ಣಿಮಾ ಕೆ.


ಪುತ್ತೂರು ತಾಲೂಕು ಮಾಡಾವು ಪಲ್ಲತ್ತಡ್ಕ ಧರ್ಮಪಾಲ ಪಿ.ಯವರ ಪತ್ನಿಯಾದ ಶ್ರೀಮತಿ ಪೂರ್ಣಿಮಾ ಕೆ. ಕೆಯ್ಯೂರು ಗ್ರಾಮದ ದಾಸಪ್ಪ ಕೆ. ಮತ್ತು ಗುಲಾಬಿ ದಂಪತಿಯ ಪುತ್ರಿ. ಕಳೆದ ಮೂರೂವರೆ ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಮಂಗಳೂರಿನ ವೆನ್ಲಾಕ್ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ನರ್ಸಿಂಗ್ ಶಿಕ್ಷಣ ಪಡೆದ ಬಳಿಕ 1 ವರ್ಷ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಮತ್ತು ಒಂದೂವರೆ ವರ್ಷ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. “ನನಗೆ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿ ಮನಸ್ಸಿಗೆ ತೃಪ್ತಿ ಇದೆ. ಪಿಪಿಇ ಕಿಟ್ ಹಾಕಿ ಕೆಲಸ ಮಾಡುವುದು ಕಷ್ಟ ಹೌದಾದರೂ ಕೊರೋನಾ ಪೇಶೆಂಟ್‌ಗಳ ಆರೈಕೆ ಮಾಡಲು ನಾವು ಸದಾ ಸಿದ್ಧ” ಎನ್ನುತ್ತಾರೆ ಅವರು.

ಪ್ರತಿಭಾ ಎಸ್.ಡಿ.


ತೊಡಿಕಾನ ಗ್ರಾಮದ ಮುಪ್ಪಸೇರು ಮನೆಯ ದ್ಯಾಮಣ್ಣ ಗೌಡ ಮತ್ತು ಯಶೋಧಾ ದಂಪತಿಯ ಪುತ್ರಿಯಾದ ಪ್ರತಿಭಾ ಎಸ್.ಡಿ. ಕಳೆದ 2 ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ನರ್ಸಿಂಗ್ ಶಿಕ್ಷಣದ ಬಳಿಕ 1 ವರ್ಷ ಮೈಸೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. “ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ” ಎನ್ನುತ್ತಾರೆ ಪ್ರತಿಭಾ

ರಮ್ಯಾ


ವಿರಾಜಪೇಟೆ ತಾಲೂಕು ಒಡ್ಡರಮಾಡು ಗ್ರಾಮದ ನಿಟ್ಟೂರು ಸೋಮಯ್ಯ ಎ. ಮತ್ತು ಸುಶೀಲ ವೈ ದಂಪತಿಯ ಪುತ್ರಿಯಾದ ರಮ್ಯ ಒಂದೂವರೆ ವರ್ಷದಿಂದ ಕೆವಿಜಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ನರ್ಸಿಂಗ್ ಶಿಕ್ಷಣದ ಬಳಿಕ ಮೈಸೂರಿನಲ್ಲಿ 1 ವರ್ಷ ಸೇವೆ ಸಲ್ಲಿಸಿದ ಬಳಿಕ ರಮ್ಯಾ ಅವರು ಕೆವಿಜಿ ಸೇರಿದ್ದಾರೆ. “ನಾನು ಮೂಲತಃ ಕೊಡಗಿನವಳಾಗಿದ್ದು, ನಮ್ಮ ಜಿಲ್ಲೆಯಿಂದ ಹಲವಾರು ಸೈನಿಕರು ದೇಶದ ಗಡಿಯಲ್ಲಿ ನಿಂತು ನಮ್ಮನ್ನು ಕಾಯುತ್ತಿರುವಾಗ ನನಗು ಕೂಡಾ ನಮ್ಮ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಹೆಮ್ಮೆ ಅನಿಸುತ್ತಿದೆ. ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದೈಹಿಕವಾಗಿ ಕಷ್ಟ ಅನಿಸಿದರೂ ಮಾನಸಿಕವಾಗಿ ನಾನು ಇನ್ನೊಂದು ವ್ಯಕ್ತಿಯ ಜೀವ ಉಳಿಸಲು ಹಾಗೂ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ತೃಪ್ತಿ ಇದೆ” ಎನ್ನುತ್ತಾರೆ ರಮ್ಯ.

ರಮ್ಯಾ ಮಿಥುನ್


ಮಡಿಕೇರಿಯ ಚೇರಂಬಾಣೆ ಮಿಥುನ್ ಬಿ.ಎಸ್.ರವರ ಪತ್ನಿಯಾದ ರಮ್ಯಾ ಅವರು ಅಮರಮುಡ್ನೂರು ಗ್ರಾಮದ ದೊಡ್ಡತೋಟ ಕಾಸಿನಗೋಡ್ಲು ವೆಂಕಟ್ರಮಣ ಮತ್ತು ನಾಗವೇಣಿ ದಂಪತಿಯ ಪುತ್ರಿ. ಎರಡೂವರೆ ವರ್ಷದಿಂದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದಾರೆ.


ಸವಣೂರಿನ ವಿದ್ಯಾರಶ್ಮಿ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ನರ್ಸಿಂಗ್ ತರಬೇತಿ ಪಡೆದ ಬಳಿಕ 2 ವರ್ಷ ಮಂಗಳೂರಿನ ಅಥೇನಾ ಆಸ್ಪತ್ರೆಯಲ್ಲಿ ಮತ್ತು 2 ವರ್ಷ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ” ನನಗೆ ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಮನಸ್ಸಿನಲ್ಲಿ ತೃಪ್ತಿ ಇದೆ. ಈಗಿನ ಸಂದರ್ಭದ ಕೆಲಸ ತುಂಬಾ ಕಷ್ಟವಾದರೂ ತೃಪ್ತಿ ಇದೆ” ಎನ್ನುತ್ತಾರೆ ರಮ್ಯಾ ಮಿಥುನ್.

ಸಹನಾ ಕೆ.ವಿ.


ಉಬರಡ್ಕ ಮಿತ್ತೂರಿನ ಅಭಿಜ್ಞಾ ಬಿ. ಬೊಮ್ಮಟ್ಟಿಯವರ ಪತ್ನಿಯಾಗಿರುವ ಸಹನಾ ಕೆ.ವಿ. ನಾಲ್ಕೂರು ಗ್ರಾಮದ ವೆಂಕಟ್ರಮಣ ಗೌಡ ಕಟ್ಟಕ್ಕೋಡಿ ಮತ್ತು ಸರೋಜಿನಿ ದಂಪತಿಯ ಪುತ್ರಿ. ಕಳೆದ 1 ವರ್ಷದಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ನರ್ಸಿಂಗ್ ಶಿಕ್ಷಣದ ಬಳಿಕ 1 ವರ್ಷ ಸುಳ್ಯದ ಎಸ್‌ವಿಎಂ ಆಸ್ಪತ್ರೆಯಲ್ಲಿ ಮತ್ತು 3 ವರ್ಷ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ” ಮೊದಲು ಭಯವಾಗುತ್ತಿತ್ತು. ಈಗ ಯಾವುದೇ ಭಯವಿಲ್ಲದೆ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ” ಎನ್ನುತ್ತಾರೆ ಸಹನಾ.

ಉಷಾ ಎನ್.ಪಿ.


ಉಬರಡ್ಕ ಮಿತ್ತೂರು ಗ್ರಾಮದ ಪಟ್ರಕೋಡಿ ಕೇಶವ ಪಿ.ಎಸ್. ಅವರ ಪತ್ನಿಯಾದ ಉಷಾ ಎನ್.ಪಿ. ನೀರಬಿದಿರೆ ಪೊಡಿಯ ಗೌಡ ಮತ್ತು ಲಕ್ಷ್ಮಿ ದಂಪತಿಯ ಪುತ್ರಿ. ಕಳೆದ 4 ವರ್ಷಗಳಿಂದ ಕೆವಿಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಜ್ಜಾವರ ಗ್ರಾಮದ ದೊಡ್ಡೇರಿ ಜನಾರ್ದನ ನಾಯ್ಕ ಮತ್ತು ದೇವಕಿ ದಂಪತಿಯ ಪುತ್ರಿಯಾದ ವಿದ್ಯಾಶ್ರೀ ಡಿ.ಜೆ.ಯವರು ಕೆವಿಜಿ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್ ಆಗಿದ್ದಾರೆ.


ಶೃಂಗೇರಿಯಲ್ಲಿ ನರ್ಸಿಂಗ್ ಪೂರೈಸಿದ ಬಳಳಿಕ ಇವರು ಕೆವಿಜಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ” ಆರಂಭಿಕ ಹಂತದಲ್ಲಿ ಭಯ ಆವರಿಸಿತ್ತು. ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ತುಂಬಾ ಕಷ್ಟ. ಮತ್ತು ಇದು ನಮಗೆಲ್ಲಾ ಹೊಸ ಅನುಭವ. ಇದನ್ನು ಸವಾಲಾಗಿ ಸ್ವೀಕರಿಸಿ ಆತ್ಮಸ್ಥೈರ್ಯದಿಂದ ಇನ್ನಷ್ಟು ಕೆಲಸ ಮಾಡುತ್ತಿದ್ದೇನೆ” ಎನ್ನುತ್ತಾರೆ ಅವರು.

ವಿದ್ಯಾಶ್ರೀ ಡಿ.ಜೆ.


ಅಜ್ಜಾವರ ಗ್ರಾಮದ ದೊಡ್ಡೇರಿ ಜನಾರ್ದನ ನಾಯ್ಕ ಮತ್ತು ದೇವಕಿ ದಂಪತಿಯ ಪುತ್ರಿಯಾದ ವಿದ್ಯಾಶ್ರೀ ಡಿ.ಜೆ.ಯವರು 5 ವರ್ಷದಿಂದ ಕೆವಿಜಿ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್ ಆಗಿದ್ದಾರೆ.

“ಪಿಪಿಇ ಕಿಟ್ ಧರಿಸಿದ ಮೊದಲನೇ ದಿನ ನನಗೆ ತುಂಬಾ ಭಯ ಆವರಿಸಿತ್ತು. ಬಹಳ ಕಷ್ಟ ಅನಿಸಿತ್ತು. ಆದರೆ ನಂತರ ನನಗೆ ಅರಿವಾಯಿತು. ನಾನು ಜೀವ ಉಳಿಸುವಂತಹ ವೃತ್ತಿಯಲ್ಲಿದ್ದೇನೆ ಎಂದು. ಇದು ಜನರ ಸೇವೆಗೆ ನನಗೆ ಸಿಕ್ಕಿದ ಉತ್ತಮ ಅವಕಾಶ. ಆದ್ದರಿಂದ ನನಗೆ ನನ್ನ ವೃತ್ತಿಯ ಬಗ್ಗೆ ಹೆಮ್ಮೆ ಇದೆ” ಎನ್ನುತ್ತಾರೆ ವಿದ್ಯಾಶ್ರೀ.

ಚಂದ್ರಕಾಂತಿ

ಮಡಿಕೇರಿ ತಾಲೂಕು ಕುಂಬಳದಾಳು ಗ್ರಾಮದ ಅನಂತ ಅವರ ಪತ್ನಿಯಾದ ಚಂದ್ರಕಾಂತಿಯವರು ಮಡಿಕೇರಿ ತಾಲೂಕು ಕೊಟ್ಟೂರು ಗ್ರಾಮದ ಕೇಕಡ ಬೆಳ್ಯಪ್ಪ ಮತ್ತು ಸೀತಮ್ಮನವರ ಪುತ್ರಿ. ಕಳೆದ ಆರು ವರ್ಷಗಳಿಂದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಮೈಸೂರಿನ ಯಲ್ಲಮ್ಮ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ನರ್ಸಿಂಗ್ ಶಿಕ್ಷಣ ಪಡೆದ ಇವರು ಮೈಸೂರಿನ ಕರ್ಣ ನರ್ಸಿಂಗ್ ಹೋಂ ಮತ್ತು ಮೈಸೂರಿನ ಪ್ರಗತಿ ಕಣ್ಣಿನ ಆಸ್ಪತ್ರೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. “ಸಂಸಾರ ಜವಾಬ್ದಾರಿಯ ಜೊತೆಗೆ ಕೊರೋನಾ ವಾರಿಯರ್ ಆಗಿಯೂ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ತಂದಿದೆ” ಎನ್ನುತ್ತಾರೆ ಅವರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.