ಫೇಸ್ಬುಕ್ ವಿಶ್ವ ಅರೆಭಾಷೆ ಹಬ್ಬದಲ್ಲಿ ವಿಭಿನ್ನ ಕಾರ್ಯಕ್ರಮ

Advt_Headding_Middle
Advt_Headding_Middle

ವಿವಿಧ ಕಲಾವಿದರು, ವಿದ್ವಾಂಸರು, ಸಾಹಿತಿಗಳು ಭಾಗಿ

ಪ್ರಮುಖರಿಂದ ವಿಷಯಗಳ ಬಗ್ಗೆ ವಿಚಾರ ಮಂಡನೆ, ಮನರಂಜನಾ ಕಾರ್ಯಕ್ರಮ

ಆಂಗಿಕ ಮಲ್ಟಿಮೀಡಿಯಾ ಫೇಸ್ಬುಬುಕ್ ಪೇಜ್‌ನಲ್ಲಿ ಸೋಮವಾರ ಅರೆ ಭಾಷೆ ಬೆರಿ ಭಾಷೆ ಅಲ್ಲ ಬೊದ್ಕ್ನ ಬೇರ್ ಘೋಷವಾಕ್ಯ ದಡಿ ವಿಶ್ವ ಅರೆಭಾಷೆ ಹಬ್ಬ, ಆಟಿ-೧೮ ಕಾರ್ಯಕ್ರಮ ನಡೆಯಿತು. ಹಲವು ವಿದ್ವಾಂಸರು ,ಸಾಹಿತಿಗಳು, ಕಲಾವಿದರು, ಬರಹಗಾರರಿಂದ ವಿಷಯ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮ ದಿನವಿಡೀ ನಡೆಯಿತು.
ಕುದುಕುಳಿ ಇಂದಿರಾ ಭರತ್ ಅವರು ತನ್ನ ಮೊಮ್ಮಗುವಿಗೆ ತುತ್ತು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಪೂರ್ಣಿಮಾ ಮಡಪ್ಪಾಡಿ ಅವರು ಪ್ರಾರ್ಥಿಸಿದರು. ಕಲಾವಿದೆ ಅವರ ಹಾಡಿಗೆ ಮಿಲನಾ ಭರತ್ ಸ್ವಾಗತ ನೃತ್ಯ ಮಾಡಿದರು. ವಿವಿಧ ಕ್ಷೇತ್ರಗಳ ಪ್ರಮುಖರು ಒಂದೊಂದು ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು. ಇದರ ನಡುವೆ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.


ಭಾಷಾ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ಸ್ವಾಸ್ಥ್ಯ ಸಮಾಜಕ್ಕೆ ಬಾಂಧ್ಯವ್ಯದ ನಂಟ್ ಮತ್ತು ಭಾಷೆನ ಸಾಮರಸ್ಯ ವಿಷಯದ ಬಗ್ಗೆ ಮಾತನಾಡಿ ಸಮಾರೋಪ ಭಾಷಣ ಮಾಡಿದರು. ರಂಗ ಕಲಾವಿದ ಹಾಗೂ ವಿಶ್ವ ಅರೆಭಾಷೆ ಹಬ್ಬದ ಸಂಯೋಜಕ ಲೋಕೇಶ್ ಊರುಬೈಲು ವಂದಿಸಿದರು.
ಅರೆಭಾಷೆಗೆ ಸಂಬಂದಿಸಿದ ಹಾಡು, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಸಮಾರೋಪದ ನಂತರ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಆಯಿತು. ಹಲವು ಕಡೆ ನೆಲೆಸಿರುವ ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.
ಜನಪದ ವಿದ್ವಾಂಸ ಡಾ. ಸುಂದರ ಕೇನಾಜೆ ಅವರು ಜನಪದ ಬೊದ್ಕ್‌ಲಿ ಆಟಿನ ಗುಟ್ಟ್, ವಕೀಲರು ಹಾಗೂ ಬರಹಗಾರರಾದ ವಿದ್ಯಾಧರ ಕುಡೆಕಲ್ಲು ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ಅಧ್ಯಾಪಕ ಮತ್ತು ಲೇಖಕ ದೊಡ್ಡಣ್ಣ ಬರಮೇಲು ಕೃಷಿ ಜೀವನದೊಟ್ಟಿಗೆ ಅರೆಭಾಷೆ ಸಂಸ್ಕೃತಿ , ಸಾಹಿತಿ ಹಾಗೂ ಬರಹಗಾರರಾದ ಡಾ. ಪ್ರಭಾಕರ ಶಿಶಿಲ ನಾನ್ ಮತ್ತೆ ಅರೆಭಾಷೆ ವಿಷಯದ ಬಗ್ಗೆ ಫೇಸ್ಬುಕ್‌ನಲ್ಲಿ ಮಾತನಾಡಿದರು.
ಯಕ್ಷಗಾನ iಹಿಳಾ ಭಾಗವತೆ ಭವ್ಯಶ್ರೀ ಮಂಡೆಕೋಲು, ವಕೀಲ ಮತ್ತು ಸಂಘಡಕರಾದ ದಿನೇಶ್ ಮಡಪ್ಪಾಡಿ, ಉಪನ್ಯಾಸಕರಾದ ಪಟ್ಟಡ ಶಿವಕುಮಾರ್, ಪ್ರಾಂಶುಪಾಲರಾದ ಬಾರಿಯಂಡ ಜೋಯಪ್ಪ, ಸುಳ್ಯ ಕೆ.ವಿ.ಜಿ.ಸಿ.ಇ.ಪ್ರಾಂಶುಪಾಲ ಡಾ. ಎನ್.ಎ.ಜ್ಞಾನೇಶ್, ಪತ್ರಕರ್ತ ಮತ್ತು ಭಾಷಾ ಚಿಂತಕ ಲೈನ್ಕಜೆ ರಾಮಚಂದ್ರ ಅವರು ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.
ಲೇಖಕ ತೇಜಕುಮಾರ್ ಬಡ್ಡಡ್ಕ ಬೇಟೆನೋಳಗೆ ಅರೆಭಾಷೆ ಸಂಸ್ಕೃತಿ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಅವರು ಬೊದ್ಕ್ ಮತ್ತೆ ರಂಗಭೂಮಿ, ಬರಹಗಾರ ಲೋಕನಾಥ ಅಮೆಚೂರು ಕಾರ್ತಿಂಗಳ ಗೌಜಿ, ರಂಗ ಕಲಾವಿದೆ ಗೀತಾ ಮೋಂಟಡ್ಕ ಅರೆಭಾಷೆ ಸಂಸ್ಕೃತಿಲಿ ಪ್ರದರ್ಶನ ಕಲೆಗೆ, ಉಪನ್ಯಾಸಕಿ ಕಾಂಚನ ಕೆದಂಬಾಡಿ ಹಿರಿಯವ್ವನ ಕೈರುಚಿ ಮತ್ತೆ ಅಡುಗೆ ಸಂಸ್ಕೃತಿ, ಡಾ. ಪುನೀತ್ ರಾಘವೇಂದ್ರ ಆಟಿ ತಿಂಗಳ ನಾಟಿ ಮೊದ್ದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಭಾಷೆ ಮತ್ತೆ ಸಂಸ್ಕೃತಿನ ಬೆಳ್ಸ್ವಲ್ಲಿ ಅಕಾಡೆಮಿಗಳ ಪಾತ್ರ ವಿಷಯಗಳ ಬಗ್ಗೆ ಮಾತನಾಡಿದರು.

ವಿವಿಧ ಸ್ಪರ್ಧಾ ವಿಜೇತರು
ವಿಶ್ವ ಅರೆಭಾಷೆ ಅಂಗವಾಗಿ ನಡೆದ ಅರೆಬಾಸೆಲಿ ಕಾರ್ಡ್ ಕಥೆ ಸ್ಪರ್ಧೆಯಲ್ಲಿ ನಾಗವೇಣಿ ದಾಮೋದರ್(ಪ್ರ), ಲಿಖಿತಾ ಗುಡ್ಡೆಮನೆ(ದ್ವಿ), ಪ್ರೋತ್ಸಹಕ ಬಹುಮಾನ ಮಿಥುನ್ ಕೆರೆಗದ್ದೆ, ನಾಟ್ಯ ಮಿಲನ ನೃತ್ಯ ಶಾಲೆಯ ವತಿಯಿಂದ ನಡೆದ ಸಾಂಪ್ರದಾಯಿಕ ವಾಲಗ ಕುಣಿತ ಸ್ಪರ್ಧೆಯಲ್ಲಿ ಕೌಶಿಕ್ ಕೇಟೋಳಿ ಮತ್ತು ಗುರು ಮುದ್ದಿಯನ(ಪ್ರ), ಸಾಕ್ಷಿ ಕುಶಾಲಪ್ಪ ಮತ್ತು ಕೆಂಜನ ಧನಿಕಾ ಗಿರೀಶ್(ದ್ವಿ) ಕೊರೋನಾ ಕರ್ತವ್ಯದ ನಡುವೆಯೂ ಕಲಾಸಕ್ತಿಯನ್ನು ತೋರಿದ ಕೊರೋನಾ ವಾರಿಯರ್ ಡಾ. ಅರ್ಪಿತಾ ಮತ್ತು ಡಾ. ಮೇಘಶ್ರೀ ಇವರನ್ನು ವಿಶೇಷ ಬಹುಮಾನಕ್ಕಾಗಿ ಪರಿಗಣಿಸಲಾಯಿತು. ಸೂರಡಿ ಬಳಗದಿಂದ ನಡೆದ ಗಾದೆಗಳ ಸ್ಪರ್ಧೆಯಲ್ಲಿ ದೇವಿಶ್ರೀ ಪೂಜಾರಿಗದ್ದೆ(ಪ್ರ), ಪೊನ್ನೇಟಿ ವೇದಸ್ವಿ ವಿಶ್ವನಾಥ ಮೈಸೂರು(ದ್ವಿ) ಬಹುಮಾನ ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.